Skip to main content

Posts

ಅರೊನ್ ಸ್ವಾರ್ಟ್ಜ್:ವಿಮುಕ್ತಿ ತಂದ ತಲೆದಂಡ

      ಸಾ ಧನೆಗೆ ವಯಸ್ಸಿನ ಅಂತರವಿಲ್ಲ.ಹಾಗೆಯೇ ಸಣ್ಣ ಪ್ರಾಯದಲ್ಲೇ ಅಸಾಧರಣ ಸಾಧನೆ ಮಾಡಿ ಬೆರಗು ಹುಟ್ಟಿಸಿದವರು ನಮ್ಮ ನಡುವೆಯಿದ್ದಾರೆ.ಇವರಲ್ಲಿ ಅಲ್ಪಾಯುಷಿಗಳೇ ಜಾಸ್ತಿ. ಅವರ ವಿಧಿಯೇ ಹಾಗಿರುತ್ತದೋ ಏನೋ.ಗಣಕ ತಜ್ಞ,ಸಂಘಟಕ ಅರೊನ್ ಸ್ವಾರ್ಟ್ಜ್ ಕೂಡ ಅಂತರ್ಜಾಲ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಸಮರ್ಥವಾಗಿ ಹೋರಾಡಿ,ತನ್ನ 26ನೇ ವಯಸ್ಸಿನಲ್ಲಿ ಇಹಲೋಕದ ಬದುಕಿಗೆ ಪೂರ್ಣ ವಿರಾಮವಿಟ್ಟು ನೆನಪಾಗಿ ಉಳಿದು ಬಿಟ್ಟಿದ್ದಾನೆ. 1986 ನವಂಬರ್ 8ರಂದು ಜನಿಸಿಇದ ಸ್ವಾರ್ಟ್ಜ್ ತಂದೆ ರಾಬರ್ಟ್ ಸ್ವಾರ್ಟ್ಜ್ ಮತ್ತು ತಾಯಿ ಸುಸಾನ್.ಬಾಲ್ಯದಿಂದಲೇ ಅಂತರ್ಜಾಲ ಸಂಸ್ಕೃತಿಗೆ ಒಗ್ಗಿ ಹೋಗಿದ್ದ.ಹಾಗಾಗಿ ಅದರಲ್ಲೇ ತನ್ನ ಆಸಕ್ತಿಯನ್ನು ಬೆಳೆಸಿಕೊಂಡ.ತನ್ನ 13ನೇ ವಯಸ್ಸಿನಲ್ಲಿ ಶೈಕ್ಷಣಿಕವಾಗಿ ಉಪಯುಕ್ತ ಜಾಲತಾಣ ನಿರ್ಮಾಣದ ಸ್ಪರ್ಧೆಯಲ್ಲಿ ಬಹುಮಾನ ಗಿಟ್ಟಿಸಿಕೊಂಡ.ಈ ಮೂಲಕ ಮಸ್ಯಾಚುಸೆಟ್ ವಿವಿಯ ಗಣನೀಯ ಸಾಧನೆ ಮಾಡಿದ ವ್ಯಕ್ತಿಗಳ ಭೇಟಿ ಸಾಧ್ಯವಾಯಿತು.ಅಂತರ್ಜಾಲದ ಬಗ್ಗೆ ತನಗಿದ್ದ ತೃಷೆ ನೀಗಿಸಿಕೊಳ್ಳಲು ಅನುವಾಯಿತು.ಅಂತರ್ಜಾಲದಲ್ಲಿನ ಮಾಹಿತಿ ಎಲ್ಲರಿಗೂ ಮುಕ್ತವಾಗಿ ದೊರಕುವಂತಾಗಬೇಕೆಂಬ ದಿಟ್ಟ ನಿರ್ಧಾರದ ಜೊತೆ ಕಾರ್ಯೋನ್ಮುಖನಾದ.ಫಲವಾಗಿ 14ನೇ ವಯಸ್ಸಿನಲ್ಲೇ ಜಾಲತಾಣ ಮತ್ತು ಬ್ಲಾಗ್ ಗಳಲ್ಲಿನ ಹೊಸ ಬದಲಾವಣೆಗಳ ಮಾಹಿತಿಯನ್ನು ಪಡೆಯಲಿರುವ RSS feed(Rich Site Summary)ನ ತಂತ್ರಾಂಶ ನಿರ್ಮಾಣದಲ್ಲಿ ಕೈಜೋಡಿಸಿದ...

ತನು-ಮನ ದಣಿಯದ ಸೇವಕರು

            ‘ ಪ ರೋಪಕಾರವೇ ಪರಮ ಧರ್ಮ’ ಎನ್ನುವವರು ತೀರಾ ವಿರಳ. ಆದರೆ ತಮ್ಮ ಜೀವನವನ್ನು ಸಮಾಜದ ಉನ್ನತಿಗಾಗಿ ಒಂದಲ್ಲ ಒಂದು ರೀತಿಯಲ್ಲಿ ತೊಡಗಿಸಿಕೊಂಡು, ಬದುಕನ್ನು ಸಾರ್ಥಕಗೊಳಿಸಿಕೊಂಡ ನಿಸ್ವಾರ್ಥಿಗಳು ನಮ್ಮ ನಡುವೆ ಇದ್ದಾರೆಂಬುದು ಹೆಮ್ಮೆಯ ವಿಷಯ. ಅಂತಹ ಕೆಲವರ ಪರಿಚಯ ಇಲ್ಲಿದೆ- 1.ಅಖಿಲ್ ಗೊಗೋಯ್ ಅಖಿಲ್ ಗೊಗೋಯ್ ಅಸ್ಸಾಂನ ಜೋರ್ಹಾಟ್ ಜಿಲ್ಲೆಯವರಾದ ಅಖಿಲ್ ಗೊಗೋಯ್ (ಜನನ:1976) ಆಂಗ್ಲ ಸಾಹಿತ್ಯದ ಪದವೀಧರರು. ದೇಶದ ಅತಿ ಸೂಕ್ಷ್ಮ ಈಶಾನ್ಯ ಭಾಗದಲ್ಲಿ ಭ್ರಷ್ಟಾಚಾರದ ವಿರುದ್ಧ ದನಿಯೆತ್ತಿದವರು. ಅಲ್ಲಿನ ಬುಡಕಟ್ಟು ಜನರ ಸಮಸ್ಯೆಗಳಿಗೆ ಮತ್ತು ಹಕ್ಕುಗಳಿಗೆ ಹೋರಾಡಿದರು. ಪ್ರಾರಂಭದಲ್ಲಿ ಯುನೈಟೆಡ್ ರೆವೆಲ್ಯೂಶನರಿ ಮೂಮೆಂಟ್ ಆಫ್ ಅಸ್ಸಾಂನ ಕಾರ್ಯಕರ್ತರಾಗಿ ಸೇರಿಕೊಂಡರು. ನಂತರ ಅಸ್ಸಾಂ ಕೃಷಿಕ್ ಮುಕ್ತಿ ಸಂಗ್ರಾಮ್ ಸಮಿತಿಯೆಂಬ ಸರ್ಕಾರೇತರ ಸಂಸ್ಥೆಯನ್ನು ಹುಟ್ಟು ಹಾಕಿದರು. ಇದರ ಮೂಲಕ 2009ರಲ್ಲಿ, ಜೀವ ವೈವಿಧ್ಯ ನಾಶವಾಗುತ್ತದೆಂಬ ಕಾರಣಕ್ಕೆ ಅಸ್ಸಾಂನಲ್ಲಿ ಜಲವಿದ್ಯುತ್ ಉತ್ಪಾದನೆಗಾಗಿ ನಿರ್ಮಾಣ ಹಂತದಲ್ಲಿದ್ದ ಅಣೆಕಟ್ಟುಗಳನ್ನು ತಡೆಯುವ ಪ್ರಯತ್ನ ಮಾಡಿದರು. ಮಾಹಿತಿ ಹಕ್ಕು ಕಾಯ್ದೆ ಕಾರ್ಯಕರ್ತರಾಗಿ ಅಸ್ಸಾಂನ ಹಲವು ಹಗರಣಗಳನ್ನು ಬಯಲಿಗೆಳೆದರು. ಇವುಗಳಲ್ಲಿ 1.25 ಕೋಟಿಯ ‘ಸಂಪೂರ್ಣ ಗ್ರಾಮ ರೋಜಗಾರ್ ಯೋಜನೆ’ ಮತ್ತು 60 ಲಕ್ಷದ ‘ಇಂದಿರಾ ಆವಾಸ್ ಯೋಜನೆ’ ಹಗರಣ ಪ್ರಮುಖವು. ಅಣ...

ಹೊಸ ವರ್ಷ ಬಂತೂ

          ಯಾ ಕೋ ಬೆಳಿಗ್ಗಿನಿಂದಲೇ ಮೈ-ಮನಸ್ಸು ಸರಿಯಿಲ್ಲ. ಸಾವಿನ ಮನೆಯ ಹಾಗೆ ಮೌನ ಆವರಿಸಿದೆ. ಇಷ್ಟು ದಿನ ಇಲ್ಲದ ಚಂಚಲತೆ ಇವತ್ತು ಗಿರಕಿ ಹೊಡೆಯುವಂತೆ ಮಾಡಿದೆ. ದೇಹಾಲಾಸ್ಯವೇನಿಲ್ಲ. ಏನೋ ಒಂದು ರೀತಿಯ ಭಯ, ಆತಂಕ ಹೇಳದೆ ಕೇಳದೆ ನೆಲೆ ನಿಂತಿದೆ. ವರ್ಷವಿಡೀ ಯೋಜನೆ ಹಾಕುವುದರಲ್ಲೇ ಕಳೆದು ಹೋಯಿತಲ್ಲವೆಂಬ ಪಾಪಪ್ರಜ್ಞೆ ಬೇರೆ ಕಾಡುತ್ತಿದೆ. ಕೊನೆಯ ದಿನದ ಅನುಭವ ಈ ತರಹವಾಗಬಹುದೆಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಇಂದಿನ ಪತ್ರಿಕೆ ನಾಳಿನ ರದ್ದಿಯಾಗುವ ಹಾಗೆ ನನ್ನ ಜೊತೆಗಿರುವ ನೆನಪುಗಳು, ಸಂಬಂಧಗಳು, ವಸ್ತುಗಳು ನಾಳೆಗೆ ಹಳೆಯದಾಗಿ ಕಳಾಹೀನವಾದಂತೆ ಕಂಡರೆಂಬ ಕಳವಳ ಶುರುವಾಗಿದೆ. ಇಲ್ಲ, ಹಾಗಾಗಲು ಬಿಡಬಾರದು. ಇವೆಲ್ಲವನ್ನು ಮುಂದಿನ ವರ್ಷಕ್ಕೆ ಜೋಪಾನವಾಗಿ ಸಾಗಿಸಬೇಕು. ಹೊಸ ವರ್ಷಕ್ಕೆ ‘ಹೊಸತು’ ನನ್ನ ಹತ್ತಿರಕ್ಕೆ ಸುಳಿಯದಂತೆ ನಿಗಾವಹಿಸಬೇಕೆಂದು ಶಪಥ ಮಾಡಿದ್ದೇನೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಒಂದು ಸಾಲು ಇತಿಹಾಸದ ಪುಟ ಸೇರಲಿದೆ.           ಕತ್ತಲು ಕವಿದಂತೆ ಬೀದಿ ದೀಪಗಳು ಮಂದವಾಗಿ ಬೆಳಕು ಚೆಲ್ಲುತ್ತಿವೆ. ರಸ್ತೆಯುದ್ದಕ್ಕೂ ಹೊಸ ವರ್ಷಾಚರಣೆಯ ಬಿರುಸು ಆರಂಭವಾಗಿದೆ. ಇಷ್ಟೊಂದು ಖುಷಿ ಪಡುವ ವಿಚಾರೇನಿದೆ? ಅರ್ಥವೇ ಆಗುತ್ತಿಲ್ಲ. ನಾನಂತೂ ನಾಲ್ಕು ಗೋಡೆಗಳ ಮಧ್ಯೆ ರಾತ್ರಿ ಕಳಿಯಬೇಕೆಂದು ನಿರ್ಧರಿಸಿ...

ಬೇಡ ಸಲ್ಲದ ಪ್ರೇರೇಪಣೆ

ಸ್ವಾ ಮಿ ವಿವೇಕಾನಂದರು 1893ರ ಚಿಕಾಗೊ ವಿಶ್ವ ಧರ್ಮ ಸಮ್ಮೇಳನದಲ್ಲಿ ‘ಸಹೋದರಿಯರೇ, ಸಹೋದರರೇ’ ಎಂದು ಉದ್ಗರಿಸಿದ ಭಾಷಣ ಎಲ್ಲರನ್ನೂ ಚಕಿತಗೊಳಿಸಿತ್ತು. ಭಾರತೀಯರಲ್ಲಿ ಸಹೋದರತಾ ಭಾವಕ್ಕಿರುವ ತತ್ಪರತೆ ವಿಶ್ವಕ್ಕೇ ಪಾಠವಾಯಿತು. ಸ್ನೇಹ-ಸೌಹಾರ್ದತೆಯಿಂದ ‘ನಾವು ಭಾರತೀಯರು’ ಎಂದು ಎದೆ ಹಿಗ್ಗಿಸುವಂತೆ ಮಾಡಿತು. ಆದರೆ ಈ ಅಮೂರ್ತ ಘಳಿಗೆ ಇತಿಹಾಸದ ಪುಟ ಸೇರುತ್ತಿದ್ದಂತೆ ಹಾಸು-ಹೊಕ್ಕಾಗಿ ಬೆಳೆಯಬೇಕಿದ್ದ ಸಹೋದರತೆಯ ತತ್ವಗಳು ನೆನೆಗುದಿಗೆ ಬಿದ್ದವು. ಪ್ರಕೃತಿಯ ಎರಡು ಜಾತಿಗಳಾದ ಗಂಡು-ಹೆಣ್ಣುಗಳ ನಡುವೆ ಅಸಮಾನತೆ ಭುಗಿಲೆದ್ದಿತು. ಇದೀಗ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಬದುಕುವ ಹಕ್ಕನ್ನೂ ಕಸಿದುಕೊಳ್ಳುವ ಮಟ್ಟಕ್ಕೆ ಬಂದು ನಿಂತಿದೆ. ‘ಮಾತೃ ದೇವೋ ಭವಃ’ ಎಂದು ಮೊದಲ ಸ್ಥಾನದಲ್ಲಿಟ್ಟು ಪೂಜಿಸುವ ಸಂಸ್ಕೃತಿಯ ನಡುವೆ ಅತ್ಯಾಚಾರ,ಕೊಲೆ,ವಂಚನೆ,ಭ್ರೂಣ ಹತ್ಯೆಯಂತಹ ಪ್ರಕರಣಗಳು ಸದ್ದಿಲ್ಲದೇ ನಡೆಯುತ್ತಲೇ ಇವೆ. ಸಮಾಜ ಘಾತುಕ ಶಕ್ತಿಗಳು ದೇಶದ ಪರಂಪರೆಯನ್ನು ಹಾಳುಗೆಡವುತ್ತಿವೆ. ಅತ್ಯಾಚಾರ, ಲೈಂಗಿಕ ಕಿರುಕುಳದಂತಹ ಹೇಯ ಕೃತ್ಯಗಳು ಹಳ್ಳಿಯಿಂದ ದಿಲ್ಲಿಯವರೆಗೆ ವಿಜೃಂಭಿಸುತ್ತಿವೆ. ದೇಶದ ರಾಜಧಾನಿಯಲ್ಲಿ ಇತ್ತೀಚೆಗೆ ಇಂತಹ ಪ್ರಕರಣವೊಂದು ಬೆಳಕಿಗೆ ಬಂದಿರುವುದು ಎಲ್ಲರೂ ಅರಾಜಕತೆಯ ಕಡೆ ಬೊಟ್ಟು ಮಾಡುವಂತೆ ಮಾಡಿದೆ. ಪ್ರತಿಭಟನೆಯ ಕಾವು ದಿನೇ ದಿನೇ ಏರುತ್ತಿದೆ.           ನಮ್ಮಲ...

ಉಸಿರುಗಟ್ಟಿಸುವ ಕರೆಗಳು..!

          ಮಾ ತಿನಲ್ಲೇ ಮೋಡಿ ಮಾಡುವುದು- ಒಂದು ಕಲೆ. ಇಲ್ಲಿ ಬೇಕು-ಬೇಡಗಳನ್ನು ಚನ್ನಾಗಿ ಅರಿತವರಂತೆ ಮನ ಮುಟ್ಟುವ ಹಾಗೆ ಮಾತನಾಡುವುದು ಮುಖ್ಯ. ವ್ಯವಹಾರ ಕುದುರಿಸಲು, ಪ್ರೇಮ ನಿವೇದನೆಯಲ್ಲಿ ಹೆಚ್ಚು ಬಳಕೆಯಾಗುತ್ತದೆಂದರೆ ಸಂಶಯವಿಲ್ಲ. ಈ ಮಾತುಗಳೆಲ್ಲಾ ತುಂಬಾ ನೇರಾ ನೇರ. ಆತ್ಮ ವಿಶ್ವಾಸ, ಸಹೃದಯತೆಯೇ ಇಲ್ಲಿ ಬುನಾದಿ. ಪರಸ್ಪರ ಭಾವ ಅಭಿವ್ಯಕ್ತಿಯಲ್ಲೇ ಎಲ್ಲವನ್ನೂ ತಾಳೆ ಹಾಕಬಹುದು. ಕಾಲ ಬದಲಾದಂತೆ ತಂತ್ರಜ್ಞಾನದ ಕೊಡುಗೆಯಾಗಿ ಬಂದಿರುವ ದೂರವಾಣಿ, ಮಿಂಚಂಚೆ ಮುಖತಃ ಭೇಟಿಯನ್ನೇ ರದ್ದು ಮಾಡಿವೆ. ಅದೇನೇ ಇರಲಿ, ಅಕ್ಕರೆಯ ಕರೆಗಳ ಜೊತೆ ನಮ್ಮ ಸಂವಹನ ಮುಂದುವರೆದರೆ ಭಾವನಾತ್ಮಕ ಬೆಸುಗೆಗೆ ಅಡ್ಡಿಯಿಲ್ಲ. ಎಲ್ಲೆಡೆಯಂತೆ ಇಲ್ಲೂ ತಂತ್ರಜ್ಞಾನದ ದುರುಪಯೋಗ ನಡೆಯುತ್ತಿದೆ. ಕೇವಲ ಸ್ವರದ ಮೂಲಕ ದೂರವಾಣಿ ಸಂಭಾಷಣೆಯಲ್ಲಿ ವ್ಯಕ್ತಿಯನ್ನು ಗುರುತಿಸುವ ನಮ್ಮ ‘ಮಾಪಕ’ ಮೋಸ ಹೋಗುವ ಸಾಧ್ಯತೆಗಳು ದಟ್ಟವಾಗಿವೆ. ಇದಕ್ಕೆ ಕಾರಣ ‘ಪ್ರಾಂಕ್ಸ್ಟರ್’ ಎಂದು ಕರೆಸಿಕೊಳ್ಳುವ ಪರಿಣತರು. ಹುಸಿ ಕರೆಗಳನ್ನು (Prank Call) ಮಾಡುವುದೇ ಇವರ ಕೆಲಸ. ಸುಳ್ಳನ್ನೇ ಬಂಡವಾಳವಾಗಿಸಿ ತಮ್ಮ ಗುರಿ ಸಾಧಿಸಿಕೊಂಡು, ನಗೆ ಹೋಗಿ ಹೊಗೆಯಾಡುವಂತೆ ಮಾಡುತ್ತಾರೆ. ನೀವು ಶಂಕರ್ ನಾಗ್ ಚಿತ್ರವೊಂದರಲ್ಲಿ ಗುಂಡೂ ರಾವ್, ತಮ್ಮ ಬೇಡಿಕೆಯ ಬೆಲೆಗೆ ಕುಂಬಳ ಕಾಯಿ ಸಿಗದೇ ಇದ್ದಾಗ, ‘ಕುಂಬಳ ಕಾಯಿಯಲ್ಲಿ ಬಾಂಬ್ ಉಂಟು’ ಎಂದು ...

ಮಾರುತ್ತರ

ಬೀಸುಗತ್ತಿಗೆ ಸಿಲುಕಿ ಗಾಳಿ ಚೀರುತ್ತಿದೆ ಒಡನಾಡಿಯ ದುಡುಕಿಗೆ ಬೆದರಿ. ದಣಿವರಿಯುವ ಜೀವಗಳಿಗೆ ತಂಪೆರೆದು ಮುದ ನೀಡುವ ತಂಗಾಳಿಗೆ ಇದೆಂತಹ ಅವಮಾನ..!     ಬರಡು ನೆಲ, ನದಿ-ಸಾಗರಗಳ ಮಿಂದೆದ್ದು ಎಲ್ಲೆ ಮೀರುವಂತೆ ಬಹುದೂರ ಚಾಚಿದೆ. ಅಲೆಮಾರಿಯಂತೆ ಅಲಿದು ಭೇದವಿಲ್ಲದೆ ಭಾವ ಬೆಸೆಯುವ ದಯಾಮಯಿ ದಿಕ್ಕೆಟ್ಟಿದೆ..! ಮನುಕುಲದ ಅಸಹನೆ ತಾಳಲಾರದೆ ಕೆಲವೊಮ್ಮೆ ಚಂಡಮಾರುತವಾಗುತ್ತದೆ. ತನ್ನ ಇರುವಿಕೆಯನ್ನು ಪ್ರಶ್ನಿಸಿ ಅಲ್ಲಿ-ಇಲ್ಲಿ ನಡೆಸಿದ ಪ್ರತಿಭಟನೆಗೆ ನೆಲಕಚ್ಚಿದವರು ಲೆಕ್ಕವಿಲ್ಲ..! ಪ್ರಾಣ ವಾಯುವೇ ತೇಲಿಹೋದಾಗ ಮಂದ್ರ ಮಾರುತದ ನೆನೆಗುದಿಗೆ ಬಿದ್ದ ಮನವಿ ನೆನಪಾಗುತ್ತದೆ. ಹೃದಯ ಭಾಗದಲ್ಲೊಂದು ಕಾನನ, ನಡು-ನಡುವೆ ಹರಿವ ನಿರ್ಮಲ ನೀರು..!

ಕಳೆಗುಂದುತ್ತಿದೆ ಶಿಕ್ಷಣ ವ್ಯವಸ್ಥೆ

ಇಂದು ಶಿಕ್ಷಣ ಕೇವಲ ಜ್ಞಾನದ ದಾಹ ತೀರಿಸಲಷ್ಟೇ ಸೀಮಿತವಾಗಿಲ್ಲ. ಬದಲಾಗಿ ಜೀವನ ನಿರೂಪಿಸುವಲ್ಲಿಯೂ ಪ್ರಮುಖ ಪಾತ್ರವಹಿಸುತ್ತಿದೆ. ದಿನೇ-ದಿನೇ ಎದುರಾಗುವ ಸವಾಲುಗಳನ್ನು ಸ್ವೀಕರಿಸಲು ವಿದ್ಯಾರ್ಥಿಗಳನ್ನು ಅಣಿಮಾಡುವ ವಿದ್ಯಾ ಸಂಸ್ಥೆಗಳು ನಮ್ಮಲ್ಲಿವೆ. ಸ್ಪರ್ಧಾ ಮನೋಭಾವವೊಂದಿದ್ದರೆ ಸಾಧನೆಗೆ ಅಡ್ಡಿಯಿಲ್ಲ. ಔದ್ಯೋಗಿಕ ಶಿಕ್ಷಣ ರಂಗ ಈ ನಿಟ್ಟಿನಲ್ಲಿ ಪ್ರಾಬಲ್ಯ ಮೆರೆದಿದೆ. ಐಟಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ನಮ್ಮ ದೇಶ, ರಾಜ್ಯದ ವಿದ್ಯಾರ್ಥಿಗಳಲ್ಲಿ ಇತ್ತ ಕಡೆ ಒಲವು ಮೂಡುವುದು ಸಹಜ. ಪದವಿ ಪೂರ್ವ ಅಥವಾ 12 ನೇ ತರಗತಿ ಮುಗಿಯುವುದನ್ನೇ ಕಾತರಿಸುತ್ತಾರೆ. ಪ್ರವೇಶ ಪರೀಕ್ಷೆಯೆಂಬ ಹುಚ್ಚು ಕುದುರೆಯನ್ನು ತಹಬಂದಿಗೆ ತರಲು ಕಸರತ್ತು ನಡೆಸುತ್ತಾರೆ. ನಾಯಿ ಕೊಡೆಗಳಂತೆ ಬೆಳೆಯುತ್ತಿರುವ ಇಂಜಿನೀರಿಂಗ್ ಕಾಲೇಜುಗಳ ಸಂಖ್ಯೆ, ಪ್ರಪ್ರತ್ಯೇಕ ಪ್ರವೇಶ ಪರೀಕ್ಷೆಗಳ ಗೋಜು ದಿಕ್ಕಾಪಾಲಾಗುವಂತೆ ಮಾಡುತ್ತಿವೆ. ಸೀಟು ಹಂಚಿಕೆಯ ವಿಷಯದಲ್ಲೂ ಖಾಸಗಿ ಕಾಲೇಜುಗಳದೇ ಸಿಂಹಪಾಲಾಗಿರುವುದರಿಂದ ಭಾರೀ ಶುಲ್ಕ ಕಟ್ಟುವಲ್ಲಿ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಈ ನಡುವೆ ಇಂಜಿನೀರಿಂಗ್ ನಂತಹ ವೃತ್ತಿಪರ ಪದವಿಗಳಿಸುವಾಸೆ ವಿವೇಚನೆಯಿಂದ ದೂರಕ್ಕೆ ಹೋದರೆ ಆಶ್ಚರ್ಯವಿಲ್ಲ. ಆದರೆ ಗಮನಿಸಲೇಬೇಕಾದ ಅಂಶವೆಂದರೆ, ಅನೇಕ ಕಾಲೇಜುಗಳು ಗುಣಮಟ್ಟ ಕಾಪಾಡುವಲ್ಲಿ ವಿಫಲವಾಗಿವೆ. ಇದರಿಂದ ಕಲಿಕಾ ಮಟ್ಟವೂ ಕುಂಠಿತಗೊಳ್ಳುತ್ತಿದೆ. ಇಂತಹ ಆಪಾದನೆ, ದೇಶದ ಪ್ರತಿಷ್ಠಿ...