Skip to main content

Posts

Showing posts from April, 2013

ಮಾದಕ ಅಧ್ವಾನ

ಧೂ ಮಪಾನ, ಮದ್ಯಪಾನದಂತೆ ಮಾದಕ ದ್ರವ್ಯ ಸೇವನೆಯ ಚಟ ಹೊಸ ತಲೆಮಾರಿನ ಯುವಕ/ಯುವತಿಯರಲ್ಲಿ ವಿದೇಶಿ ಮೋಹದಂತೆ ಸದ್ದಿಲ್ಲದೆ ಹರಡುತ್ತಿದೆ. ಷೋಕಿಗಾಗಿ, ದೈಹಿಕ ಮತ್ತು ಮಾನಸಿಕ ನೋವಿನಿಂದ ಕೆಲ ಕ್ಷಣ ದೂರವಾಗಲು ಇದರ ಬಳಕೆಯಾಗುತ್ತಿದೆ. ಇದಕ್ಕೆ ದಾಸರಾಗುವವರಲ್ಲಿ ಹೆಚ್ಚಿನವರು 18 ರಿಂದ 30 ವರ್ಷದೊಳಗಿನವರು. ಜಗತ್ತಿನೆಲ್ಲೆಡೆ ಸುಮಾರು 500 ಬಿಲಿಯನ್ ಮೊತ್ತದ ಮಾದಕ ವಸ್ತುಗಳ ವಹಿವಾಟು ನಡೆಯುತ್ತದೆ. ಪೆಟ್ರೋಲಿಯಂ ಮತ್ತು ಶಸ್ತ್ರಾಸ್ತ್ರ ಉದ್ದಿಮೆಯ ನಂತರದ ಸ್ಥಾನ ದಕ್ಕಿದೆ! ಪ್ರತಿಷ್ಠೆ ಎಂದುಕೊಂಡಿರುವ ಯುವ ಜನಾಂಗದ ಮೊಂಡುತನ, ಸಾವಿನ ಬಾಗಿಲು ತಟ್ಟುವಂತೆಯೂ ಮಾಡಿದೆ. ದೇಶದಲ್ಲಿ ಸುಮಾರು ಒಂದು ಕೋಟಿ ಹೆರಾಯಿನ್ ವ್ಯಸನಿಗಳಿದ್ದಾರೆ. ಕೆಲ ತಿಂಗಳ ಹಿಂದೆ, ಮಂಗಳೂರಿನ ವಿದ್ಯಾರ್ಥಿನಿಯೋರ್ವಳು ಈ ದುಷ್ಚಟಕ್ಕೆ ಬಲಿಯಾದ ಘಟನೆ ನಮ್ಮ ಮುಂದಿದೆ. ನೆರೆಯ ಪಾಕಿಸ್ತಾನದಿಂದ ಇದರ ವ್ಯವಸ್ಥಿತ ಸರಬರಾಜು ನಡೆಯುತ್ತಿದೆ ಎಂಬ ಗುಮಾನಿಯೂ ಇದೆ. ಅದರಲ್ಲೂ ಕರಾವಳಿ ಪ್ರದೇಶ ವಾಮಮಾರ್ಗ ಕರುಣಿಸಿ ಡ್ರಗ್ ಮಾಫಿಯಾಕ್ಕೆ ತೆರೆದುಕೊಂಡಿದೆ. ಹಾಗಿದ್ದರೆ, ಡ್ರಗ್ಸ್ ಅಥವಾ ಮಾದಕ ವಸ್ತುಗಳ ಕುರಿತಾದ ಪಕ್ಷಿ ನೋಟ ಇಲ್ಲಿದೆ. ಮಾನಸಿಕ ಮತ್ತು ದೈಹಿಕ ಬದಲಾವಣೆಗೆ ಕಾರಣವಾಗುವ ವಸ್ತುಗಳಿಗೆ ಮಾದಕ ವಸ್ತು ಎನ್ನಲಾಗುತ್ತದೆ. ಇದು ಘನ, ದ್ರವ ಅಥವಾ ಅನಿಲ ರೂಪದಲ್ಲಿರುತ್ತದೆ. ವ್ಯಕ್ತಿಯ ನರಮಂಡಲದ ಮೇಲೆ ಪ್ರಭಾವ ಬೀರುವ ಮೂರು ಮುಖ್ಯ ಮಾದಕ ವಸ್ತುಗಳ ವಿಧಗಳು: ಡಿಪ

ಮುಸ್ಸಂಜೆಯ ಮರುಕ

ಉ ಸಿರಲ್ಲಿನ ಹಸಿವು ನೀಗಿಸಲಾಗದು ಜೀವ ಜೈತ್ರ ಯಾತ್ರೆ ಮುಗಿಯುವ ತನಕ. ಆದರೆ, ಇಂದು-ನಿನ್ನೆಗಳು ತೋರಿದ ಅಸಹನೆಗೆ ಅಂಜಿ, ನಾಳೆಯೆನ್ನುವ ಕನಸು ಮುರಿದು ಬಿದ್ದಿದೆ. ಇಟ್ಟ ದಿಟ್ಟ ಹೆಜ್ಜೆಗಳೇ ಸಮೀಕರಿಸುತ್ತಿವೆ ರತ್ನಗಂಬಳಿಯ ರಹದಾರಿ, ನಾ ಬಲ್ಲದ ನಾಡಿಗೆ ! ಸೋತು ಸುಣ್ಣವಾದ ತನು-ಮನಗಳ ವಿನಂತಿಗೆ ನೆರವಾಗುವವರು ಕಾಣುತ್ತಿಲ್ಲ. ಇಳಿ ಹೊತ್ತು,ಇಳಿ ವಯಸ್ಸಿಗೆ ಲೇವಡಿ ಮಾಡುತ್ತಿದೆ, ಅಟ್ಟಹಾಸದ ನಗು ಬೀರುತ್ತಿದೆ, ನಾನಿಲ್ಲದ ತೇದಿಗೆ ಕಾತರಿಸುತ್ತಿರುವಂತಿದೆ. ಸೂರ್ಯ ರಶ್ಮಿಗೆ ಮೈಯೊಡ್ಡುವ ನವಜಾತ ಶಿಶುಗಳ ಕಂಡಾಗ ಒಂದೇ ಪ್ರಾರ್ಥನೆ… ನಕ್ಕು ನಲಿದು ಉಲಿಯುವ ವೇಳೆ ಕಾಡದಿರಲಿ ಮುಸ್ಸಂಜೆಯ ಮರುಕ. ಕೊನೆಯಿಲ್ಲದ ಜೀವದಾಸೆಗೆ ತೆರೆ ಎಳೆಯಲು ಕಾರಣ ಹುಡುಕುತ್ತಿರುವ ಪ್ರಾಣ ಪಕ್ಷಿ, ಹಲವು ಶಂಕೆಗಳಿಗೆ ತೊತ್ತಾಗಿರುವ ನಾನು ಇಹಲೋಕದ ವಿದಾಯಕ್ಕೆ ಅಣಿಯಾಗುತ್ತಿದ್ದೇನೆಯೆ..? ಇಲ್ಲ, ಅಪರ ಭಾನುವಿನ ಜೊತೆ ಈಗಿಂದೀಗಲೇ ಅಸ್ತಂಗತನಾಗಲು ನನ್ನ ವಿರೋಧವಿದೆ. ದೇಹದಲ್ಲಿ  ಇನ್ನೂ ಕಾವು ಅಡಗಿದೆ, ಹುದುಗಿದೆ. ಅವನ ವಕ್ರದೃಷ್ಟಿಗೆ ಮಣಿಯಲಾರೆ, ಪ್ರತಿಭಟಿಸುತ್ತೇನೆ. ಇದಾವ ಧರ್ಮ ಯುದ್ಧವಲ್ಲ, ಅತೀತ ಭಾವ ಸ್ಪಂದನವಷ್ಟೆ. ಹೊತ್ತಲ್ಲದ ಹೊತ್ತಲ್ಲಿ, ಋಣಮುಕ್ತಗೊಂಡು ಪವಡಿಸಲಾರೆ, ಬೆಂಕಿ ಕೆನ್ನಾಲೆಗಳ ನಡುವೆ. ಗೋಧೂಳಿಯಿಂದಾಗಿ ಅವನಿಂದ ಮರೆಯಾಗಿದ್ದೇನೆ, ಮರೆಯಾಗುತ್ತೇನೆ ನನ್ನಿಷ್ಟದಂತೆ.

ಪ್ರಾಣ ಪಕ್ಷಿಯ ಪಾಡು

ಗರ್ಭ ಧರಿಸುವಾಗಲೇ ಒಳಹೊಕ್ಕು ನೆತ್ತಿಯ ಮೇಲೆ ಕೈ ಇಟ್ಟು, ಆಣೆ ಮಾಡಿದ್ದೆ ಜೀವಕ್ಕೆ- ನಿನ್ನ ಬಿಟ್ಟು ಹೋಗುವುದಿಲ್ಲವೆಂದು. ತುತ್ತು ಅನ್ನಕ್ಕೆ ತತ್ವಾರವಿದ್ದಾಗಲೂ ಸಂಭಾಳಿಸಿದ್ದೇನೆ, ನನ್ನ ಜೀವದ ಹಂಗು ತೊರೆದು, ಕೊಟ್ಟ ಮಾತಿಗೆ ಎರಡು ಬಗೆಯಬಾರದೆಂದು. ಜೀವ ತಾರುಣ್ಯದ ತಂಟೆಯಿಂದ ಮನನೊಂದುಕೊಂಡಾಗಲೂ, ಆತ್ಮಹತ್ಯೆಗೆ ಎಡೆಮಾಡಿಕೊಡಲಿಲ್ಲ ಅಂತಕನ ಆಣತಿ ಇರಲಿಲ್ಲವೆಂದು. ಕಾಲಚಕ್ರ ಉರುಳಿದಂತೆ ಅಂತಃಕಲಹ ಅಧಿಕವಾಯಿತು. ಪಂಜರ ಪಕ್ಷಿಯಂತಿದ್ದ ನನಗೂ  ಅನಿಸಿತು ಈ ಬೆಸುಗೆ ಬೇಡವೆಂದು. ದೂರ ದಿಗಂತದಲಿ ಹಾರುವ ರಣಹದ್ದುವಿನ ಜೊತೆ ಸ್ನೇಹ ಬೆಳೆಸಲು ಹಾರಿಬಿಟ್ಟೆ, ಜೀವದಾಚೆಗೆ ಬದುಕಬೇಕೆಂದು. ( ಕೃಪೆ:ಕೆಂಡ ಸಂಪಿಗೆ ) ದೀವಟಿಗೆ by ಸಂದೀಪ ಫಡ್ಕೆ, ಮುಂಡಾಜೆ is licensed under a Creative Commons Attribution-NonCommercial-NoDerivs 2.5 India License

ನಿವೃತ್ತಿ ಕಡ್ಡಾಯಗೊಳಿಸಿ

            ಜ ನ ಸೇವೆ ಮಾಡಲು ರಾಜಕೀಯಕ್ಕೆ ಸೇರಲೇಬೇಕೆಂಬ ನಿಯಮವಿಲ್ಲ. ಆದರೂ ರಾಜಕಾರಣವನ್ನು ಒಂದು ವಾಹಿನಿಯ ರೀತಿ ಬಳಸಿಕೊಂಡಲ್ಲಿ ತಪ್ಪಿಲ್ಲ. ಆದರೆ ಇದಕ್ಕೊಂದು ನಿಗದಿತ ವಯೋ ಮಿತಿ ಸೂಚಿಸುವ ಅಗತ್ಯವಿದೆ. ಯುವ ಆಕಾಂಕ್ಷಿಗಳಿಗೆ ಯೋಗ್ಯತೆಯ ಮೇರೆಗೆ ಆದ್ಯತೆ ನೀಡಲು ಇದು ಸಹಕಾರಿ. ಚುನಾವಣೆಗೆ ಸ್ಪರ್ಧಿಸಲು ಕನಿಷ್ಠ ವಯೋಮಿತಿ ಇರುವಂತೆ, ಗರಿಷ್ಠ ಮಿತಿಯನ್ನು ಇಡಬಹುದಲ್ಲವೇ? ಇದರಿಂದ ಒಂದು ಸೇವೆಯಿಂದ ನಿವೃತ್ತರಾಗಿ, ಅಧಿಕಾರ-ಪ್ರಚಾರ ಗಿಟ್ಟಿಸಲು ರಾಜಕೀಯಕ್ಕೆ ಧುಮುಕುವವರ ಹಾವಳಿ ತಪ್ಪುತ್ತದೆ. ರಾಜಕೀಯದ ಘನತೆ ಕಾಪಾಡಿದಂತೆಯೂ ಆಗುತ್ತದೆ. ಆಯುಷ್ಯ ಕಡಿಮೆಯಾದಂತೆ, ಆರೋಗ್ಯವೂ ಹದಗೆಡುತ್ತದೆ. ತನ್ನ ಕುಟುಂಬಕ್ಕಾಗಿ ಇನ್ನಷ್ಟು ಧನ-ಆಸ್ತಿ ಸಂಪಾದಿಸಬೇಕೆನ್ನುವ ಬಲವಾದ ಹಂಬಲವೂ ಉಂಟಾಗುತ್ತದೆ. ಹಾಗಾಗಿ ಇಂತಹ ಪರಿಸ್ಥಿಯಲ್ಲಿರುವವರು ಸರ್ವತೋಮುಖ ಪ್ರಗತಿಯ ಕಡೆ ಎಷ್ಟು ಗಮನ ಹರಿಸಲು ಸಾಧ್ಯ? ಆದ್ದರಿಂದ ರಾಜಕೀಯ ನಿವೃತ್ತಿಯ ವಯಸ್ಸನ್ನು 60 ರಿಂದ 65 ರೊಳಗೆ ಕಡ್ಡಾಯಗೊಳಿಸಿದರೆ ಸೂಕ್ತ. ನಿಯಮಿತ ಕಾಲಾವಧಿಯೊಳಗೆ ಸಕ್ರಿಯ ರಾಜಕಾರಣ ಮಾಡಿ, ಜನರಿಗೆ ಬೇಡವಾಗುವ ಮೊದಲು ಗೌರವದಿಂದ ಹೊರ ನಡೆಯುವುದು ಒಳಿತು. ಇತ್ತೀಚೆಗೆ, ಚುನಾವಣೆ ಸಂದರ್ಭಗಳಲ್ಲಿ ತಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆಂದು ಬೊಂಬಡ ಬಾರಿಸಿ, ಜನರ ವಿಶ್ವಾಸಗಳಿಸುವ ತಂತ್ರಗಳು ನಡೆಯುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿ, ರಾಜಕೀಯ ನಿವೃತ್ತಿಯನ್ನು  ಕಾರ್ಯರೂಪಕ್ಕೆ ತ