Skip to main content

Posts

Showing posts from July, 2013

ಜಾರಿ ಹೋಗುವ ಕಾನೂನು

ಕಾ ನೂನಿನ ದೃಷ್ಟಿಯಿಂದ ಎಲ್ಲರೂ ಒಂದೇ. ವಿಶ್ವದ ಅತಿ ದೊಡ್ಡ ಲಿಖಿತ ಸಂವಿಧಾನಾತ್ಮಕ ವ್ಯವಸ್ಥೆಯಿರುವ ಭಾರತದಲ್ಲಿ ಇದು ಎಷ್ಟು ಸತ್ಯವೆನ್ನುವುದು ಮಾತ್ರ ಪ್ರಶ್ನಾರ್ಥಕ. ಉತ್ತಮ ಆಡಳಿತದ ಸೂತ್ರದಂತಿರಬೇಕಾದ ಕಾನೂನು ಯಾರದೋ ಕೈ ಗೊಂಬೆಯಾಗುತ್ತಿದೆ. ದೆಹಲಿ ಅತ್ಯಾಚಾರ ಪ್ರಕರಣದ ಸಂದರ್ಭ, ಕಾನೂನು ಸಮರಕ್ಕೆ ಒಂದಷ್ಟು ಜನ ಜಮಾಯಿಸಿದ್ದರೆ, ಅವರ ವಿರುದ್ಧ ಕಿಡಿಕಾರುವ ಉದ್ಧಟತನ ಸರ್ಕಾರ ತೋರಿತ್ತು. ಬಹುಕೋಟಿ ಹಗರಣಗಳ ಕಳಂಕ ಹೊತ್ತಿದ್ದರೂ, ನಮ್ಮನ್ನು ಆಳುವ ದೊರೆಗಳು ಅದನ್ನೆಲ್ಲಾ ಸಮರ್ಥಿಸಿಕೊಳ್ಳುತ್ತಾರೆ. ಹೀಗೆ ಕಾನೂನಿರುವುದೇ ಮುರಿಯುವುದಕ್ಕೆ ಎಂದಾದರೆ ಹೊಸ ಕಾನೂನು ಜಾರಿಯಾದರೂ ಊಟಕ್ಕಿಲ್ಲದ ಉಪ್ಪಿನಕಾಯಿಯಂತಿರುತ್ತದೆ. ಭ್ರಷ್ಟ ಮತ್ತು ದುರ್ಬಲ ಆಡಳಿತ ಭಾರತೀಯ ರಾಜತಾಂತ್ರಿಕ ವ್ಯವಸ್ಥೆ ಹದಗೆಡಲು ಮೂಲ ಕಾರಣವೆಂದು ಜನಜನಿತವಾಗಿದೆ. ಆದರೂ ಪ್ರತಿ ಚುನಾವಣೆಯ ವೇಳೆ ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆಂಬ ಬೊಗಳೆ ಕೇಳುತ್ತೇವೆ. ಈ ಸಲುವಾಗಿ, ಅಮೂಲ್ಯ ಮತಗಳನ್ನು ಪಡೆಯಲು ಹಣ-ಹೆಂಡ, ಸೀರೆ ಮತ್ತು ಪ್ರವಾಸ ಕೈಗೊಳ್ಳುವ ಕಾರ್ಯಕ್ರಮಗಳು ನಡೆಯುತ್ತಿವೆ. ಆದರೆ ಇದರಿಂದ ಜನರ ಯಾವ ಬೇಡಿಕೆಗಳೂ ಈಡೇರಿದಂತಾಗುವುದಿಲ್ಲ. ಭ್ರಷ್ಟಾಚಾರ ನಿರ್ಮೂಲನೆಗೆ ಕಾನೂನಿನಲ್ಲಿ   ಬದಲಾವಣೆ ಕೋರಿ ಲೋಕಾಯುಕ್ತದ ಬೇಡಿಕೆ ನೆನೆಗುದಿಗೆ ಬಿದ್ದಿದೆ. ವಿಪಕ್ಷಗಳು ಜನರ ಬಾಯಿ ಮುಚ್ಚಿಸಲು ಹರಿಹಾಯುತ್ತವೆ ಹೊರತು ಬದಲಾವಣೆಗೆ ಅ