Skip to main content

Posts

Showing posts from November, 2011

ಮುಂಡಾಜೆ ಎಂಬ ನಮ್ಮೂರು...

  ಕ ಡೂರು-ಮಂಗಳೂರು ರಾಜ್ಯ ಹೆದ್ದಾರಿಯ ಮೇಲೆ ಬೆಳ್ತಂಗಡಿ ತಾಲೂಕು ಕೇಂದ್ರದಿಂದ ಸುಮಾರು 14 ಕಿಲೋ ಮೀಟರ್ ಪೂರ್ವದಲ್ಲಿರುವ ಮಲೆನಾಡಿನ ಪುಟ್ಟ ಹಳ್ಳಿ.ಮುಂಡಾಜೆ ಸುಮಾರು 3608 ಎಕ್ರೆ ವಿಸ್ತಾರವಾಗಿದೆ.ಮಲೆನಾಡ ಹಳ್ಳಿಯೇ ಆಗಿದ್ದರೂ ವಿದ್ಯಾ ಸಂಸ್ಥೆಗಳು, ಸಾರಿಗೆ-ರಸ್ತೆ ಸೌಕರ್ಯಗಳು, ವಿದ್ಯುತ್ ಶಕ್ತಿ, ದೂರವಾಣಿ, ಅಂಗಡಿ-ಮುಂಗಟ್ಟುಗಳು, ನೀರಾವರಿ, ಆಸ್ಪತ್ರೆ, ಬೇಂಕ್, ಅಂಚೆ ಕಛೇರಿ ಮೊದಲಾದ ಆಧುನಿಕ ಸವಲತ್ತುಗಳನ್ನು ಹೊಂದಿರುವ ಕಾರಣ ಅಭಿವೃಧ್ಧಿಶೀಲ ಹಳ್ಳಿಯೆಂದು ಇದನ್ನು ಗುರುತಿಸಬಹುದು.   ಹೆಸರಿನ ಮೂಲ: ಮುಂಡಾಜೆ ಎಂಬ ಹೆಸರು ಊರಿಗೆ ಬಂದಿರುವ ಬಗ್ಗೆ ಹೆಚ್ಚಿನ ಪುರಾವೆಗಳೇನೂ ಇಲ್ಲ.ಆದರೆ ‘ಅಜೆ’-‘ಅಂಜೆ’ ಎಂಬ ಪದಗಳು ‘ನೀರಿರುವ ಸ್ಥಳ’ ಎಂಬ ಅರ್ಥ ಕೊಡುತ್ತವೆಂದು ಇತಿಹಾಸ ಸಂಶೋಧಕರು ಹೇಳುತ್ತಾರೆ.ಆ ದೃಷ್ಟಿಯಿಂದ ಮುಂಡಾಜೆ ಅಂದರೆ ಒಳ್ಳೆಯ ನೀರಿರುವ ಪ್ರದೇಶವೆಂದು ಅರ್ಥೈಸಬಹುದೇನೋ.ಇಲ್ಲಿ ಹರಿಯುವ ಮೃತ್ಯುಂಜಯ ನದಿ ಇದಕ್ಕೆ ಒಳ್ಳೆಯ ಸಾಕ್ಷಿ ಒದಗಿಸುತ್ತದೆ.ಬೇಸಿಗೆಯಲ್ಲೂ ಈ ನದಿ ಬತ್ತವುದಿಲ್ಲ.   ಆಡಳಿತ: ಮುಂಡಾಜೆ 19ನೇ ಶತಮಾನದ ಕೊನೆಯ ತನಕ ಬೈಲಂಗಡಿಯ ಮೂಲರಸರ ಆಳ್ವಿಕೆಗೆ ಒಳಪಟ್ಟಿತ್ತು. ಅನಂತರ ಸ್ವಾತಂತ್ರ್ಯ ಸಿಗುವ ತನಕ ಬ್ರಿಟೀಷರ ಆಳ್ವಿಕೆಗೆ ಒಳಪಟ್ಟಿತ್ತು.ಸ್ವಾತಂತ್ರ್ಯಾ ನಂತರ ಪಕ್ಕದ ಕಲ್ಮಜೆಯೊಡಗೂಡಿ ಜಂಟಿ ಗ್ರಾಮ ಪಂಚಾಯತ್ ಆಡಳಿತವಿತ್ತು.ಈಚೆಗೆ ಸ್ವತಂತ್ರವಾಗಿ ಮುಂಡಾಜೆ ಪಂಚಾಯತ್ ರಚನೆಯಾಗಿದ್ದು ಅಭಿವೃಧ್ಧಿ ಕಾರ್ಯಗಳು ಅ