Skip to main content

Posts

Showing posts from January, 2013

ಹೊಸ ವರ್ಷ ಬಂತೂ

          ಯಾ ಕೋ ಬೆಳಿಗ್ಗಿನಿಂದಲೇ ಮೈ-ಮನಸ್ಸು ಸರಿಯಿಲ್ಲ. ಸಾವಿನ ಮನೆಯ ಹಾಗೆ ಮೌನ ಆವರಿಸಿದೆ. ಇಷ್ಟು ದಿನ ಇಲ್ಲದ ಚಂಚಲತೆ ಇವತ್ತು ಗಿರಕಿ ಹೊಡೆಯುವಂತೆ ಮಾಡಿದೆ. ದೇಹಾಲಾಸ್ಯವೇನಿಲ್ಲ. ಏನೋ ಒಂದು ರೀತಿಯ ಭಯ, ಆತಂಕ ಹೇಳದೆ ಕೇಳದೆ ನೆಲೆ ನಿಂತಿದೆ. ವರ್ಷವಿಡೀ ಯೋಜನೆ ಹಾಕುವುದರಲ್ಲೇ ಕಳೆದು ಹೋಯಿತಲ್ಲವೆಂಬ ಪಾಪಪ್ರಜ್ಞೆ ಬೇರೆ ಕಾಡುತ್ತಿದೆ. ಕೊನೆಯ ದಿನದ ಅನುಭವ ಈ ತರಹವಾಗಬಹುದೆಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಇಂದಿನ ಪತ್ರಿಕೆ ನಾಳಿನ ರದ್ದಿಯಾಗುವ ಹಾಗೆ ನನ್ನ ಜೊತೆಗಿರುವ ನೆನಪುಗಳು, ಸಂಬಂಧಗಳು, ವಸ್ತುಗಳು ನಾಳೆಗೆ ಹಳೆಯದಾಗಿ ಕಳಾಹೀನವಾದಂತೆ ಕಂಡರೆಂಬ ಕಳವಳ ಶುರುವಾಗಿದೆ. ಇಲ್ಲ, ಹಾಗಾಗಲು ಬಿಡಬಾರದು. ಇವೆಲ್ಲವನ್ನು ಮುಂದಿನ ವರ್ಷಕ್ಕೆ ಜೋಪಾನವಾಗಿ ಸಾಗಿಸಬೇಕು. ಹೊಸ ವರ್ಷಕ್ಕೆ ‘ಹೊಸತು’ ನನ್ನ ಹತ್ತಿರಕ್ಕೆ ಸುಳಿಯದಂತೆ ನಿಗಾವಹಿಸಬೇಕೆಂದು ಶಪಥ ಮಾಡಿದ್ದೇನೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಒಂದು ಸಾಲು ಇತಿಹಾಸದ ಪುಟ ಸೇರಲಿದೆ.           ಕತ್ತಲು ಕವಿದಂತೆ ಬೀದಿ ದೀಪಗಳು ಮಂದವಾಗಿ ಬೆಳಕು ಚೆಲ್ಲುತ್ತಿವೆ. ರಸ್ತೆಯುದ್ದಕ್ಕೂ ಹೊಸ ವರ್ಷಾಚರಣೆಯ ಬಿರುಸು ಆರಂಭವಾಗಿದೆ. ಇಷ್ಟೊಂದು ಖುಷಿ ಪಡುವ ವಿಚಾರೇನಿದೆ? ಅರ್ಥವೇ ಆಗುತ್ತಿಲ್ಲ. ನಾನಂತೂ ನಾಲ್ಕು ಗೋಡೆಗಳ ಮಧ್ಯೆ ರಾತ್ರಿ ಕಳಿಯಬೇಕೆಂದು ನಿರ್ಧರಿಸಿದ್ದೇನೆ. ಮೊನ್ನೆ ಪ್ರಳಯವಾಗುತ್ತದೆಂದು ಹೆದರಿಸಿದಾಗಲೂ ನನ್ನಲ್ಲಿ ಈ ತರಹ ವ್ಯತಿರಿಕ್ತ ಬದಲಾವಣೆಗಳು ಉಂಟಾಗಿ

ಬೇಡ ಸಲ್ಲದ ಪ್ರೇರೇಪಣೆ

ಸ್ವಾ ಮಿ ವಿವೇಕಾನಂದರು 1893ರ ಚಿಕಾಗೊ ವಿಶ್ವ ಧರ್ಮ ಸಮ್ಮೇಳನದಲ್ಲಿ ‘ಸಹೋದರಿಯರೇ, ಸಹೋದರರೇ’ ಎಂದು ಉದ್ಗರಿಸಿದ ಭಾಷಣ ಎಲ್ಲರನ್ನೂ ಚಕಿತಗೊಳಿಸಿತ್ತು. ಭಾರತೀಯರಲ್ಲಿ ಸಹೋದರತಾ ಭಾವಕ್ಕಿರುವ ತತ್ಪರತೆ ವಿಶ್ವಕ್ಕೇ ಪಾಠವಾಯಿತು. ಸ್ನೇಹ-ಸೌಹಾರ್ದತೆಯಿಂದ ‘ನಾವು ಭಾರತೀಯರು’ ಎಂದು ಎದೆ ಹಿಗ್ಗಿಸುವಂತೆ ಮಾಡಿತು. ಆದರೆ ಈ ಅಮೂರ್ತ ಘಳಿಗೆ ಇತಿಹಾಸದ ಪುಟ ಸೇರುತ್ತಿದ್ದಂತೆ ಹಾಸು-ಹೊಕ್ಕಾಗಿ ಬೆಳೆಯಬೇಕಿದ್ದ ಸಹೋದರತೆಯ ತತ್ವಗಳು ನೆನೆಗುದಿಗೆ ಬಿದ್ದವು. ಪ್ರಕೃತಿಯ ಎರಡು ಜಾತಿಗಳಾದ ಗಂಡು-ಹೆಣ್ಣುಗಳ ನಡುವೆ ಅಸಮಾನತೆ ಭುಗಿಲೆದ್ದಿತು. ಇದೀಗ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಬದುಕುವ ಹಕ್ಕನ್ನೂ ಕಸಿದುಕೊಳ್ಳುವ ಮಟ್ಟಕ್ಕೆ ಬಂದು ನಿಂತಿದೆ. ‘ಮಾತೃ ದೇವೋ ಭವಃ’ ಎಂದು ಮೊದಲ ಸ್ಥಾನದಲ್ಲಿಟ್ಟು ಪೂಜಿಸುವ ಸಂಸ್ಕೃತಿಯ ನಡುವೆ ಅತ್ಯಾಚಾರ,ಕೊಲೆ,ವಂಚನೆ,ಭ್ರೂಣ ಹತ್ಯೆಯಂತಹ ಪ್ರಕರಣಗಳು ಸದ್ದಿಲ್ಲದೇ ನಡೆಯುತ್ತಲೇ ಇವೆ. ಸಮಾಜ ಘಾತುಕ ಶಕ್ತಿಗಳು ದೇಶದ ಪರಂಪರೆಯನ್ನು ಹಾಳುಗೆಡವುತ್ತಿವೆ. ಅತ್ಯಾಚಾರ, ಲೈಂಗಿಕ ಕಿರುಕುಳದಂತಹ ಹೇಯ ಕೃತ್ಯಗಳು ಹಳ್ಳಿಯಿಂದ ದಿಲ್ಲಿಯವರೆಗೆ ವಿಜೃಂಭಿಸುತ್ತಿವೆ. ದೇಶದ ರಾಜಧಾನಿಯಲ್ಲಿ ಇತ್ತೀಚೆಗೆ ಇಂತಹ ಪ್ರಕರಣವೊಂದು ಬೆಳಕಿಗೆ ಬಂದಿರುವುದು ಎಲ್ಲರೂ ಅರಾಜಕತೆಯ ಕಡೆ ಬೊಟ್ಟು ಮಾಡುವಂತೆ ಮಾಡಿದೆ. ಪ್ರತಿಭಟನೆಯ ಕಾವು ದಿನೇ ದಿನೇ ಏರುತ್ತಿದೆ.           ನಮ್ಮಲ್ಲಿ ಹೆಣ್ಣನ್ನು ಧರ್ಮಾತೀತವಾಗಿ ಗೌರವದಿಂದ ಕಾಣುವ ರೀ