Skip to main content

Posts

Showing posts from August, 2011

ನಿರಪರಾಧಿ

ಅವರಿವರ ನಡುವಿನ ಹೊಯ್ದಾಟಗಳು ಮರೆಮಾಡಿವೆ ಮೌನ-ಧ್ಯಾನದ ನೆನಪನ್ನು ಕತ್ತಲೆಯ ಗುಂಗಿನಲಿ ನಾಳೆಯೆಂಬುವುದು ಮಾಯವಾದಂತೆ ದ್ವೇಷ-ವೈಷಮ್ಯಗಳ ಪ್ರತಿಕಾರ ತೆರೆದಿದೆ ರಕ್ತ ಕಾರುವ ಕಣ್ಣುಗಳ ಬಯಲಿನಂಗಳದಲಿ ನೀರಸೆಲೆಯಿಲ್ಲದೆ ಹಸಿರು ಹರಡಿದಂತೆ

"ನೂರು ದನಿ-ಒಂದು ಗುರಿ"

ಬ್ರಿಟೀಷರ ಸಂಕೋಲೆಯಿಂದ ಬಂಧ-ಮುಕ್ತವಾದ ನಂತರ ನಮ್ಮ ದೇಶ ಅನೇಕ ಚಳುವಳಿಗೆ ಸಾಕ್ಷಿಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದಕ್ಕೆ ಅವಕಾಶವೂ ಇದೆ. ಜನರ ನಸುವಿನ ಸಮಸ್ಯೆಗಳು ಪರಿಹಾರ ಕಂಡುಕೊಳ್ಳದೆ ಇದ್ದಾಗ, ಉಗ್ರ ರೂಪಕ್ಕೆ ಪರಿವರ್ತನೆಗೊಂಡು ಸತ್ಯಾಗ್ರಹ-ಹರತಾಳ-ಆಂದೋಲನದ ಹಾದಿ ತುಳಿಯುತ್ತದೆ.ತಾವೇ ಆರಿಸಿ,ಆಡಳಿತ ನಡೆಸುವ ಅವಕಾಶ ಕೊಟ್ಟೀರುವಗ,ಬಗೆಹರಿಯದ ಸಮಸ್ಯೆಗಳಿಗೆ ಉತ್ತರ ಹುಡುಕುವ ಗೋಜಿಗೆ ಹೋಗದ ಮಂತ್ರಿ ಮಹೋದಯರಿಗೆ ಹಿಡಿ ಶಾಪ ಹಾಕದೆ ಇರುವರೇ..? ಜನ ಲೋಕಪಾಲ ಮಸೂದೆ ಜಾರಿಯಲ್ಲೂ ಅದೇ ರಾಗ-ತಾಳ.

ಇಬ್ಬನಿ

ಮುಂಜಾವಿನ ತೆಕ್ಕೆಯೊಳು  ಹಸಿರುಟ್ಟ ಭೂರಮೆಯ  ಒಡಲಲ್ಲಿ  ಹನಿಯುತಿವೆ ಹನಿಗಳು  ಸಾಲು ಸಾಲಾಗಿ...  ಮರ-ಗಿಡಗಳ ಎಲೆಗಳ ಮೇಲೆ ದೃಶ್ಯವಾಗುತ್ತವೆ  ದಣಿದ-ಮಣಿದ ಮೈ-ಮನಕ್ಕೆ  ಜೀವ ತುಂಬುತ್ತವೆ ಪನ್ನೀರ ಪಸರುತ್ತಾ... ಅಲ್ಪಾಯುಷಿಯಾದರು  ದೀಪದ ಬುಡ್ಡಿಯಂತೆ ಉದಾರ ಗುಣ  ಚಳಿಯನ್ನೂ ಲೆಕ್ಕಿಸದೇ  ಅವಿರತ ದುಡಿಮೆ... ಬೆಳಕಿನ ಪರದೆ ಸರಿದಂತೆ  ಮತ್ತಷ್ಟು ಮೆರುಗು ಕ್ಷಣಮಾತ್ರದಲ್ಲಿ  ಜೀವದ ಹಂಗು ತೊರೆದು  ಮಂಗ ಮಾಯ... ತನ್ನ ಶಾಂತ ಚಿತ್ತ ಸೌಮ್ಯ ಸ್ವಭಾವ  ಮತ್ತೆ ಹುಟ್ಟಲು ಕಾರಣ ಇಬ್ಬನಿ ಇರಿಯುವುದಿಲ್ಲ ಇಹ-ಪರರ ... ದೀವಟಿಗೆ by Sandeep Phadke is licensed under a Creative Commons Attribution-NonCommercial-NoDerivs 2.5 India License .

ಇಬ್ಬನಿ ಕರಗುವ ಮುನ್ನ...

ಆಸೆ-ಹತಾಶೆಗಳ ನಡುವಿನ ಜೀವನ ಅದೆಷ್ಟೋ ಪಾಠ ಕಲಿಸುತ್ತದೆ.ಕಾಡುವ ನೋವಿಗೆ ಸಾಂತ್ವನ ಸಿಗದೇ ವಿವಿಲನೆ ಒದ್ದಾಡುವ ಸನ್ನಿವೇಶವೂ ಉಂಟಾಗುತ್ತದೆ.ಸುಖ-ದುಃಖದ ಆಟದ ನಡುವೆ ಎಲ್ಲೋ ಜಿನುಗುವ ಮನಃ ಶಾಂತಿ ಇನ್ನೇನೋ ಮಾಡಲು ಪ್ರೇರೇಪಿಸುತ್ತದೆ.ಇಬ್ಬನಿಗಳ ಸಾಲಿನಂತೆ ಚಿಗುರೋದೇವ ಮನಸ್ಸು ಆಕ್ರಮಣಕಾರಿಯಾಗಿ

ಅಂಗೈಯಗಲದ ಕಥೆಗಳು

೧. ಮೀನು ಹಿಡಿಯಲು, ಗಾಳದ ಜೊತೆ ನದಿ ತಟಕ್ಕೆ ಹೋಗಿದ್ದ. ಸಂಜೆಯಾದರೂ ಬಾರದೇ ಇದ್ದಾಗ ಹುಡುಕಾಟ ಶುರುವಾಯಿತು. ಉದ್ರಿಕ್ತ ಮೀನುಗಳೇ ಸಾಯಿಸಿವೆ ಎಂದು ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಈಗ ಕೊಲೆಗಾರ ಮೀನು ಸಿಗುವುದು ಕಷ್ಟವೆನ್ನುತ್ತಿದ್ದಾರೆ!!