Skip to main content

Posts

Showing posts from March, 2013

ವ್ಯವಸ್ಥೆ ಬದಲಾಗಬೇಕಿದೆ

ಸ ಮಾಜದ ನಾನಾ ಸ್ತರದ ಜನರ ಜೊತೆ ಒಡನಾಟ ಮತ್ತು ಬಾಂಧವ್ಯ ವೃದ್ಧಿಗೆ ಸಹಾಯವಾಗುವ ಆದರ್ಶ ಗುಣಗಳು ಪ್ರಕೃತಿದತ್ತವಾಗಿ ಸಿಗುವ ವಸ್ತುಗಳೇನೂ ಅಲ್ಲ. ಅಥವಾ ಹುಟ್ಟು ಗುಣವಾಗಿಯೂ ಬರುವಂಥದಲ್ಲ. ಈ ದೇಶದಲ್ಲಿ ಆದರ್ಶ ಪ್ರಾಯರಾಗಿ ಬಾಳಿ ಬದುಕಿದವರ ಸಂಖ್ಯೆಯೂ ತುಂಬಾ ದೊಡ್ಡದಿದೆ. ಆದರೆ ಪ್ರಸ್ತುತ, ಸತ್ಪ್ರಜೆಯಾಗಿ ಉಳಿಯುವುದು ಕಷ್ಟವಾಗುತ್ತಿದೆ. ಹದಗೆಟ್ಟ ಪ್ರಜಾಸತಾತ್ಮಕ ವ್ಯವಸ್ಥೆ, ಅರಾಜಕೀಯತೆ ಒಳ್ಳೆಯವರನ್ನೂ ಕತ್ತಲಿಗೆ ತಳ್ಳುತ್ತಿದೆ. ಸುಲಭ, ಸಸೂತ್ರ ಮತ್ತು ಪಾರದರ್ಶಕತೆ ಕಲ್ಪಿಸಲಿರುವ ವ್ಯವಸ್ಥೆಗಳು ವ್ಯಕ್ತಿ-ಅಭಿಪ್ರಾಯ-ಅಭಿರುಚಿಗೆ ಸಿಲುಕಿ ಕ್ಷೀಣವಾಗಿ ಹೋಗಿವೆ. ಒಟ್ಟು ಸಮಾಜವನ್ನು ಸರಿ ದಾರಿಯಲ್ಲಿ ಕೊಂಡೊಯ್ಯಬೇಕಾದವರೇ ಅಡ್ಡದಾರಿ ಹಿಡಿಯುತ್ತಿರುವುದು ದುರಂತ. ನಾವು ಭಾರತೀಯರೆಂದು ಭಾಷಣ ಬಿಗಿಯುವಾಗ ಎದೆ ತಟ್ಟಿ ಹೇಳಿ ಕೊಳ್ಳುತ್ತೇವೆಯಾದರೂ, ನಮ್ಮಲ್ಲಿ ಒಂದು ಕೀಳರಿಮೆ ಇದ್ದೇ ಇದೆ. ಸಮಯ ಪ್ರಜ್ಞೆ, ಕಾಲೆಳೆಯುವುದು, ಯಶಸ್ಸು ಮತ್ತು ಸಾಧನೆಗಳನ್ನು ಪ್ರೊತ್ಸಾಹಿಸದೇ ಇರುವಂತಹ ಅನೇಕ ನಡೆಗಳು ನಮ್ಮೊಳಗೆ ತಾನಾಗಿಯೇ ಬೆಳೆದು ಬಿಟ್ಟಿದೆ. ಈ ಕುರಿತಾದ ಚರ್ಚೆಗಳಲ್ಲೆಲ್ಲಾ ಅಂತಿಮವಾಗಿ ಶಿಕ್ಷಣದ ಕೊರತೆಯಿದೆ ಎಂಬ ನಿರ್ಧಾರಕ್ಕೆ ಬರಲಾಗುತ್ತದೆ. ಆದರೆ ನಾಗರಿಕ ಜೀವನ ನಡೆಸಲು ಶಿಕ್ಷಣದ ಜೊತೆಗೆ ಕಾನೂನು ಮತ್ತು ಸಾಮಾಜಿಕ ವ್ಯವಸ್ಥೆಗಳು ಸರಿಯಾದ ರೀತಿಯಲ್ಲಿ ಜಾರಿಗೆ ಬರಬೇಕಿದೆ. ನಿಜಕ್ಕೂ ಭಾರತದಲ್ಲಿ ಈ ಕುರಿತಾದ ಸಮಗ್ರ ವಿಮರ್ಶೆಯ ಅ

ಹನಿ ಕವನಗಳು

ಕನಸೆಂದರೆ ಏನೆಂದು ಅರ್ಥ ತಿಳಿಯದವನ ಹೆಗಲೇರಿ ಕೂತಿದ್ದಾಳೆ ನನಸು ಮಾಡೆಂದು..!                      * * *               ಮೊದಲ ನೋಟಕ್ಕೆ ಅವಳ ಮುಂಗುರುಳ     ಉರುಳಿಗೆ ಬಿದ್ದಾಯಿತು.     ಈಗ ಉಸಿರುಗಟ್ಟುತ್ತಿದೆ..! * * * ನೀನು  ನನ್ನೆದೆಯ ಸಮೀಪ ಹಾದು ಹೋದಾಗಲೆಲ್ಲಾ ತಿಂಗಳ ಬೆಳಕಿನ ಸವಿ ಉಣ್ಣುತ್ತೇನೆ..! * * * ಕಿವಿ ಮುಚ್ಚಿಕೊಂಡರೂ ಹೆಜ್ಜೆ-ಹೆಜ್ಜೆಗೆ ನೆನಪಾಗುತ್ತದೆ ಅವಳ ಗೆಜ್ಜೆ ಸದ್ದು..! * * * ಕೂಗಳತೆಯ ದೂರದಲ್ಲಿ ಕಾಯುತ್ತಿದ್ದಾಳೆ. ಕೂಗಿ ಕರೆಯುವ ಹಾಗಿಲ್ಲ ಊರಿಡೀ ಗೊತ್ತಾಗುತ್ತದೆ..! ಕೃಪೆ : ಕನ್ನಡ ಪ್ರಭ - ಬೈಟು ಕಾಫಿ   ದೀವಟಿಗೆ by ಸಂದೀಪ ಫಡ್ಕೆ, ಮುಂಡಾಜೆ is licensed under a Creative Commons Attribution-NonCommercial-NoDerivs 2.5 India License

ಗದ್ದಲಗಳ ಮೇಳ

( ಸಾಹಿತ್ಯ ಸಮ್ಮೇಳನಗಳು ಜೀವಂತಿಕೆ ಕಳೆದುಕೊಳ್ಳುತ್ತಿವೆ ಎಂಬ ವಾದಕ್ಕೆ ಪೂರಕ ಪ್ರತಿಕ್ರಿಯೆ ) ಸಾ ಹಿತ್ಯ ಎಲ್ಲರ ಬದುಕಿನ ಒಂದು ಅಂಗ. ಇದರ ಅನೇಕ ಪ್ರಕಾರಗಳಲ್ಲಿ ಹಲವು ಕ್ಷೇತ್ರಗಳಿಂದ ಪಡೆದ ಅನುಭವವಗಳು ಗದ್ಯ-ಪದ್ಯದ ರೂಪದಲ್ಲಿ ಅಭಿವ್ಯಕ್ತಗೊಳ್ಳುತ್ತವೆ. ಇಂತಹ ಕೃತಿಗಳ ವಿಮರ್ಶೆ ಮತ್ತು ಮೌಲ್ಯ ವರ್ಧನೆಗಿರುವ ಸಮ್ಮೇಳನಗಳು ಇತ್ತೀಚೆಗೆ ಕಳೆಗುಂದುತ್ತಿರುವುದು ವಿಷಾದನೀಯ. ದೃಶ್ಯ ಮಾಧ್ಯಮಗಳ ಹಾವಳಿಯ ಬಿಸಿ ತಟ್ಟಿರುವುದು ನಿಜ. ಆದರೆ ಸಾಹಿತ್ಯಾಭಿಮಾನಿಗಳು ಇದರಿಂದ ವಿಚಲಿತರಾಗಲು ಸಾಧ್ಯವಿಲ್ಲ. ಹಾಗಾಗಿ ಸಂಘಟನೆಯಲ್ಲೇ ಲೋಪವಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಕೋಟಿ-ಕೋಟಿ ಸುರಿದು ನಡೆಸುವ ಸಮ್ಮೇಳನದ ಪ್ರಯೋಜನ ಶೂನ್ಯವೆಂದಾದರೆ, ಯಾರದೋ ಕಿಸೆ ತುಂಬಿಸಲು ವರ್ಷಂಪ್ರತಿ ನಡೆಯುತ್ತಿದೆಯೇ? ಪ್ರತಿ ಬಾರಿ ಸಮ್ಮೇಳನ ನಡೆಯುವಾಗ ಬೇಕಾಗುವ ಚಪ್ಪರ, ಊಟೋಪಚಾರ ಮತ್ತು ವಸತಿ ವ್ಯವಸ್ಥೆಗಳೇ ಅಬ್ಬರದ ಪ್ರಚಾರ ಗಿಟ್ಟಿಸುತ್ತವೆಯೇ ಹೊರತು ಸಾಹಿತ್ಯ ಕೈಂಕರ್ಯವಲ್ಲ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ-ಮಾನ ದೊರೆತ ಮೇಲಾದರೂ ಕಾಟಾಚಾರಕ್ಕೆ ನಡೆಯದೆ, ಗಂಭೀರ ರೀತಿಯಲ್ಲಿ ಕಾರ್ಯೋನ್ಮುಖವಾಗಬೇಕಿತ್ತು. ಆದರೆ ವೈಮನಸ್ಸುಗಳನ್ನು ಹೊರ ಹಾಕುವ, ರಾಜಕೀಯದ ಛಾಯೆ ಕಾಣುವ ವೇದಿಕೆಯಾಗುತ್ತಿದೆ. ವೃತ್ತಿ ಮತ್ಸರ ಹೇಗೋ, ಹಾಗೆಯೆ ಪ್ರವೃತ್ತಿ ಮತ್ಸರವಿರುವುದು ಸಹಜ. ಆದರೆ ಇಂತಹ ವೈಯುಕ್ತಿಕ ಭಿನ್ನಾಭಿಪ್ರಾಯಗಳನ್ನು ಸಮ್ಮೇಳನಗಳಲ್ಲಿ ತೋರಿಸುವುದರಿಂದ ಸಾಹಿತ್