Skip to main content

Posts

Showing posts from December, 2011

ಸಮಾಜಕ್ಕೆ ಒಗ್ಗದ ತಾಣಗಳೇ..?

ಸ ಮಾಜದ ಹಿತದೃಷ್ಟಿಯಿಂದ ಜನಾಭಿಪ್ರಾಯ ಸಂಗ್ರಹಿಸುವುದು ಸಾಮಾನ್ಯ. ಪರ-ವಿರೋಧಗಳ ತುಲನೆ ಮಾಡಿ ಅಂತಿಮ ನಿರ್ಣಾಯ ಕೈಗೊಳ್ಳಲಾಗುತ್ತದೆ. ಇತ್ತೀಚೆಗೆ ಸಾಮಾಜಿಕ ತಾಣಗಳು ಅತಿರೇಕದ ಜನಾಭಿಪ್ರಾಯ ಒಟ್ಟುಗೂಡಿಸಲು ಮಾಧ್ಯಮಗಳಾಗುತ್ತಿವೆ. ವೈಯುಕ್ತಿಕ ದಿನಚರಿಯನ್ನೇ ‘ಗೋಡೆ’ ಬರಹವಾಗಿಸಿ ಸ್ನೇಹಿತರ ಪ್ರತಿಕ್ರಿಯೆಗೆ ದಿನವಿಡೀ ಹಪ-ಹಪಿಸುವವರಿದ್ದಾರೆ. ಕೆಲವು ಜಾತಿ-ಧರ್ಮ-ವ್ಯಕ್ತಿಗಳನ್ನು ಹಂಗಿಸುವ, ಛೇಡಿಸುವ ‘ಬೇನಾಮಿ’ಗಳ ಚಟುವಟಿಕೆ ಅಂಕೆಯಿಲ್ಲದ್ದಾಗಿದೆ. ಅವಹೇಳನ, ಪ್ರಚೋದನಕಾರಿ ಪ್ರತಿಕ್ರಿಯೆಗಳು ಭಾವೈಕ್ಯತೆಯನ್ನು ನುಂಗಿಹಾಕುತ್ತಿವೆ. ಇದೆಲ್ಲದರ ಬಗ್ಗೆ ಪ್ರಶ್ನೆ ಮಾಡಲೇಬೇಕೆನ್ನಿಸುವುದು ಸಹಜ.ಕಾಂಗ್ರೆಸ್ ನಾಯಕಿ ಸೋನಿಯಾ ವಿರುದ್ಧ ಫೇಸ್ ಬುಕ್ ನಲ್ಲಿದ್ದ ಮಾಹಿತಿ ಕೇಂದ್ರ ಸಚಿವ ಕಪಿಲ್ ಸಿಬಲ್ ರನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿತು. ವಿಪಕ್ಷಗಳಿಂದ ಲೇವಡಿಗೊಳಗಾದರು. ಅದೇನೇ ಇರಲಿ, ಒಂದು ವಿಷಯ ಚರ್ಚೆಯಾಗಬೇಕಾದರೆ ಕಾರಣಗಳು ಬೇಕು ಎಂದು ಮನವರಿಕೆ ಮಾಡಿಕೊಳ್ಳುವುದು ಉತ್ತಮ. ಬಹುಶಃ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪೂರ್ಣ ಪ್ರಮಾಣದಲ್ಲಿ ಉಪಯೋಗಿಸಿಕೊಂಡಿರುವ ಸಾಮಾಜಿಕ ತಾಣಗಳು ನಿರಂಕುಶ ಪ್ರಭುತ್ವ ಹೊಂದಿವೆ ಎಂದರೆ ತಪ್ಪಾಗಲಾರದು. ಆದರೆ ಇದೀಗ ವಿವಿಧ ಜಾತಿ-ಧರ್ಮ-ಪಂಗಡಗಳು ಇಲ್ಲಿ ನಡೆಯುವ ಧರ್ಮ ವಿರೋಧಕ್ಕೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ಆಕ್ಷೇಪಾರ್ಹ, ನಿಂದನಾತ್ಮಕ ಅಂಶಗಳನ್ನು ತೆಗೆದು

ಗೋಡೆಗಳಿಲ್ಲ...!

(ಕವಿ ಗೋಷ್ಠಿ- ಬೆಳ್ತಂಗಡಿ ತಾ|| 11ನೇ ಕನ್ನಡ ಸಾಹಿತ್ಯ ಸಮ್ಮೇಳನ, ಮುಂಡಾಜೆ :: 20-12-2011) ದೂರವಾದಂತೆ ನೆನಪಾಗುತ್ತವೆ ಹಳೆಯ, ಬಣ್ಣ ಮಾಸಿದ ಗಟ್ಟಿ ಗೋಡೆಗಳು. ಆದರೆ, ನೆಲೆಗಾಣುವ ನಿರೀಕ್ಷೆಯಲಿ ತೆರೆದುಕೊಳ್ಳುವ ಹೆಬ್ಬಾಗಿಲಿಗೆ, ಗೋಡೆಗಳೆಂಬುದು ಮರೀಚಿಕೆ. ಅನುಕಂಪ, ಮಾನ-ಮರ್ಯಾದೆ ಬೊಗಸೆಯಲಿ ಬಚ್ಚಿಡುವ ಇನ್ನಿಲ್ಲದ ಧಾವಂತ. ದುರುಪಯೋಗವಾಗಬಹುದು ನಡು ರಾತ್ರಿ-ಹಗಲೆನ್ನದೆ, ಕಾಮಲೆ ಕಣ್ಣೆಗೆ, ಗೋಡೆಗಳಿಲ್ಲ ರಕ್ಷಣೆಗೆ. ಇಲ್ಲಿ ಗೋಡೆಗಳಿಲ್ಲ... ನೋಡುವವರು ಅದೆಷ್ಟೋ ಜನ ನಮ್ಮ ಆಟ, ಭಯ, ಆತಂಕ, ಅವಮಾನದ ವರಸೆ. ಬಯಸಿ ಬಂದವರಂತೆ ನಾವೂ ನಡೆಯುತ್ತೇವೆ ಅನಿವಾರ್ಯದ ಅಂಕದಲಿ. ನೂರು ಆಸೆಗಳನು ಹೊತ್ತು, ಟೊಂಕ ಕಟ್ಟಿ ನಿಂತವರು, ಬಳಲಿ-ಬೆಂಡಾಗುವವರೆಗೆ, ದಿಶೆ ತಪ್ಪುವವರೆಗೆ, ಅನಿರ್ದಿಷ್ಟ ಕಾಲದ ತೀರದ ಪಯಣ. ಗೋಡೆಗಳಿಲ್ಲ ಅಡೆ-ತಡೆಗೆ. ಕಣ್ಣಾ-ಮುಚ್ಚಾಲೆ ಆಟದಂತೆ ಭ್ರಷ್ಟ ಆಚಾರಗಳನ್ನು ಕದ್ದು-ಮುಚ್ಚಿ ಪರಿಪಾಲಿಸಿದರೂ, ಕೈಗೆ ಬೇಡಿ ನಿಶ್ಚಿತ. ನೋಡುತ್ತಿರುತ್ತಾರೆ ಸಹಸ್ರಾರು ಕಂದೀಲು ಹಿಡಿದು ಜನ. ಗೋಡೆಗಳೆಂಬುದು ನಿಮಿತ್ತ. ಅನುಭೋಗದ ಬದುಕು ಬೀದಿಗೆ ಬಂದಿದೆ. ಜೀವನ ಮೌಲ್ಯ ಅರಿಯದ ಜೀವಗಳು ಹೊಡೆದಾಡುತ್ತಿವೆ. ಇರಬೇಕಾದಲ್ಲಿ ಇಲ್ಲ ನಾಲ್ಕು ಗೋಡೆಗಳು.                                                    

ಒಂಟಿ ಪಯಣದ ನಂಟು

ಗಾಳಿ ಬೆಳಕುಗಳ ಜೊತೆ ಒಡನಾಟದ ನಾಟಕ ಇರುವ ಮನಸ್ಸಿಲ್ಲ ಇದ್ದಲ್ಲೇ ಗತಿ ಕಾಣುವ ತನಕ ಒಳಗೊಳಗೆ ಪುಟಿಯುತಿವೆ ಅಂತರಾಳದ ಭಾವನೆಗಳು ಬೇಡವೆನ್ನುವುದು ಹೇಗೆ..? ಅವರಿವರು ನನ್ನವರಲ್ಲ ಇರುವವರು ಹತ್ತಿರವಿಲ್ಲ ಜೀವ ಸಾಗರದ ತೆರೆಗಳು ಯಾವುದೋ ದಡ ಸೇರಿಸಿವೆ ಮುಕ್ತಿ ಮಾರ್ಗವೆ ಹೀಗೇನು..? ಎಲ್ಲ ಬಲ್ಲವರ ಬಳಿ ಹೋಗಲು ಇನ್ನೆಷ್ಟು ಕ್ರಮಿಸಬೇಕು..? ಪಯಣ ಒಂಟಿ ಅನಿಸುತ್ತಿಲ್ಲ ಗತ ಸಾಲುಗಳ ಇಣುಕಿದಾಗ ಆದರೆ ಯಾರೂ ಹುಡುಕಾಡಿದ ಹಾಗಿಲ್ಲ ನನ್ನ ಅನಾಧ ಚಹರೆ ಜೀವಿತಾವಧಿಯಲ್ಲೇ ಎಳ್ಳು-ನೀರು ಬಿಟ್ಟಂತಿದೆ                                               ಇದ್ದೂ ಇಲ್ಲದಂತಾದೆಯೆ ನಾನು..?                                                                                                          

ಅರ್ಥವಾಗದ ಮನಸ್ಸುಗಳು

  ‘ಗಿಡ ವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ’ ಎಂಬ ನಾಣ್ಣುಡಿ ಮನುಷ್ಯನ ನಡವಳಿಕೆಯನ್ನು ಅಳೆಯುತ್ತದೆ. ಪ್ರೀತಿ, ವಿಶ್ವಾಸ, ಸಹನೆ, ತಾಳ್ಮೆಗಳ ಜೊತೆ ಬಾಲ್ಯದಿಂದಲೇ ನಡೆದುಕೊಳ್ಳುವುದು ವ್ಯಕ್ತಿತ್ವಕ್ಕೆ ಭದ್ರ ಬುನಾದಿ ಎಂಬುದು ಹಿರಿಯರ ಅಭಿಪ್ರಾಯ. ಆದರೆ ಇತ್ತೀಚೆಗೆ ಮರವಾಗಿ ಬೆಳೆಯುವುದರ ಮೊದಲೇ ಯುವ ಜನಾಂಗ ವಿನಾಶದ ದಾರಿ ಹಿಡಿಯುತ್ತಿರುವುದು ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸಿದೆ. ಕ್ಷುಲ್ಲಕ ಕಾರಣಗಳಿಗೆ, ತೊಂದರೆಗಳಿಗೆ ಯುವ ಜನರು ಆತ್ಮಹತ್ಯೆಯೇ ಪರಿಹಾರವೆಂದೆನಿಸಿರುವುದು ದೌರ್ಭ್ಯಾಗ್ಯವೇ ಸರಿ. ಇದಕ್ಕೆ ಸರಿಯಾಗಿ ಮನುಷ್ಯ ಭಾವನೆಗಳನ್ನು ಅರ್ಥೈಸಿಕೊಳ್ಳಲು ಹೋಗದಿರುವುದು,  ಕ್ರಾಂತಿಕಾರಿ ನಡವಳಿಕೆ, ಪಾಲಿಸಲಾಗದ ಆಜ್ಞೆಗಳು, ಹಟಮಾರಿತನದಂತಹ ಭಿನ್ನತೆಗಳು ಮಕ್ಕಳ-ಹೆತ್ತವರ ನಡುವೆ ಸುಳಿದಿರುವುದು ಅನಾವಶ್ಯಕ ಆವೇಶ ಉಂಟಾಗುವಂತೆ ಮಾಡಿದೆ. ವರ್ಷದಲ್ಲಿ ಸುಮಾರು 30,000ಕ್ಕೂ ಮಿಗಿಲಾಗಿ ದೇಶದಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿರುವ ಸಂಗತಿ ಬೆಚ್ಚಿ ಬೀಳಿಸುತ್ತದೆ.           ಒಂ ದು ಅಥವಾ ಎರಡು ಮಕ್ಕಳಿರುವ ಸಂಸಾರದಲ್ಲಿ ಮುಳುವಾಗಿರುವ ಈ ಸಮಸ್ಯೆಯ ಬೆನ್ನು ಹತ್ತಿದರೆ ಹೆತ್ತವರು, ಸುತ್ತಮುತ್ತಲ ಪರಿಸರ, ಶಾಲೆ-ಶಿಕ್ಷಣ, ಸಹವಾಸ ಮತ್ತು ಆಕರ್ಷಣೆಗಳಂತಹ ಕೆಲವು ಅಸಹಜ ವ್ಯಕ್ತಿ-ಸನ್ನಿವೇಶಗಳು ಬೆಳಕಿಗೆ ಬರುತ್ತವೆ. ಯಾರನ್ನೂ ಪ್ರತ್ಯಕ್ಷವಾಗಿ ತೆಗಳುವಂತಿಲ್ಲ ಅಂತೆಯೇ ಘಟನೆಗಳನ್ನು ಅಲ್ಲಗಳೆಯುವಂತಿಲ್ಲ. ಇಂದಿನ ಸಮಾಜ ಬದಲಾವಣೆ, ಆಧುನ