Skip to main content

Posts

ಉಸಿರುಗಟ್ಟಿಸುವ ಕರೆಗಳು..!

          ಮಾ ತಿನಲ್ಲೇ ಮೋಡಿ ಮಾಡುವುದು- ಒಂದು ಕಲೆ. ಇಲ್ಲಿ ಬೇಕು-ಬೇಡಗಳನ್ನು ಚನ್ನಾಗಿ ಅರಿತವರಂತೆ ಮನ ಮುಟ್ಟುವ ಹಾಗೆ ಮಾತನಾಡುವುದು ಮುಖ್ಯ. ವ್ಯವಹಾರ ಕುದುರಿಸಲು, ಪ್ರೇಮ ನಿವೇದನೆಯಲ್ಲಿ ಹೆಚ್ಚು ಬಳಕೆಯಾಗುತ್ತದೆಂದರೆ ಸಂಶಯವಿಲ್ಲ. ಈ ಮಾತುಗಳೆಲ್ಲಾ ತುಂಬಾ ನೇರಾ ನೇರ. ಆತ್ಮ ವಿಶ್ವಾಸ, ಸಹೃದಯತೆಯೇ ಇಲ್ಲಿ ಬುನಾದಿ. ಪರಸ್ಪರ ಭಾವ ಅಭಿವ್ಯಕ್ತಿಯಲ್ಲೇ ಎಲ್ಲವನ್ನೂ ತಾಳೆ ಹಾಕಬಹುದು. ಕಾಲ ಬದಲಾದಂತೆ ತಂತ್ರಜ್ಞಾನದ ಕೊಡುಗೆಯಾಗಿ ಬಂದಿರುವ ದೂರವಾಣಿ, ಮಿಂಚಂಚೆ ಮುಖತಃ ಭೇಟಿಯನ್ನೇ ರದ್ದು ಮಾಡಿವೆ. ಅದೇನೇ ಇರಲಿ, ಅಕ್ಕರೆಯ ಕರೆಗಳ ಜೊತೆ ನಮ್ಮ ಸಂವಹನ ಮುಂದುವರೆದರೆ ಭಾವನಾತ್ಮಕ ಬೆಸುಗೆಗೆ ಅಡ್ಡಿಯಿಲ್ಲ. ಎಲ್ಲೆಡೆಯಂತೆ ಇಲ್ಲೂ ತಂತ್ರಜ್ಞಾನದ ದುರುಪಯೋಗ ನಡೆಯುತ್ತಿದೆ. ಕೇವಲ ಸ್ವರದ ಮೂಲಕ ದೂರವಾಣಿ ಸಂಭಾಷಣೆಯಲ್ಲಿ ವ್ಯಕ್ತಿಯನ್ನು ಗುರುತಿಸುವ ನಮ್ಮ ‘ಮಾಪಕ’ ಮೋಸ ಹೋಗುವ ಸಾಧ್ಯತೆಗಳು ದಟ್ಟವಾಗಿವೆ. ಇದಕ್ಕೆ ಕಾರಣ ‘ಪ್ರಾಂಕ್ಸ್ಟರ್’ ಎಂದು ಕರೆಸಿಕೊಳ್ಳುವ ಪರಿಣತರು. ಹುಸಿ ಕರೆಗಳನ್ನು (Prank Call) ಮಾಡುವುದೇ ಇವರ ಕೆಲಸ. ಸುಳ್ಳನ್ನೇ ಬಂಡವಾಳವಾಗಿಸಿ ತಮ್ಮ ಗುರಿ ಸಾಧಿಸಿಕೊಂಡು, ನಗೆ ಹೋಗಿ ಹೊಗೆಯಾಡುವಂತೆ ಮಾಡುತ್ತಾರೆ. ನೀವು ಶಂಕರ್ ನಾಗ್ ಚಿತ್ರವೊಂದರಲ್ಲಿ ಗುಂಡೂ ರಾವ್, ತಮ್ಮ ಬೇಡಿಕೆಯ ಬೆಲೆಗೆ ಕುಂಬಳ ಕಾಯಿ ಸಿಗದೇ ಇದ್ದಾಗ, ‘ಕುಂಬಳ ಕಾಯಿಯಲ್ಲಿ ಬಾಂಬ್ ಉಂಟು’ ಎಂದು ...

ಮಾರುತ್ತರ

ಬೀಸುಗತ್ತಿಗೆ ಸಿಲುಕಿ ಗಾಳಿ ಚೀರುತ್ತಿದೆ ಒಡನಾಡಿಯ ದುಡುಕಿಗೆ ಬೆದರಿ. ದಣಿವರಿಯುವ ಜೀವಗಳಿಗೆ ತಂಪೆರೆದು ಮುದ ನೀಡುವ ತಂಗಾಳಿಗೆ ಇದೆಂತಹ ಅವಮಾನ..!     ಬರಡು ನೆಲ, ನದಿ-ಸಾಗರಗಳ ಮಿಂದೆದ್ದು ಎಲ್ಲೆ ಮೀರುವಂತೆ ಬಹುದೂರ ಚಾಚಿದೆ. ಅಲೆಮಾರಿಯಂತೆ ಅಲಿದು ಭೇದವಿಲ್ಲದೆ ಭಾವ ಬೆಸೆಯುವ ದಯಾಮಯಿ ದಿಕ್ಕೆಟ್ಟಿದೆ..! ಮನುಕುಲದ ಅಸಹನೆ ತಾಳಲಾರದೆ ಕೆಲವೊಮ್ಮೆ ಚಂಡಮಾರುತವಾಗುತ್ತದೆ. ತನ್ನ ಇರುವಿಕೆಯನ್ನು ಪ್ರಶ್ನಿಸಿ ಅಲ್ಲಿ-ಇಲ್ಲಿ ನಡೆಸಿದ ಪ್ರತಿಭಟನೆಗೆ ನೆಲಕಚ್ಚಿದವರು ಲೆಕ್ಕವಿಲ್ಲ..! ಪ್ರಾಣ ವಾಯುವೇ ತೇಲಿಹೋದಾಗ ಮಂದ್ರ ಮಾರುತದ ನೆನೆಗುದಿಗೆ ಬಿದ್ದ ಮನವಿ ನೆನಪಾಗುತ್ತದೆ. ಹೃದಯ ಭಾಗದಲ್ಲೊಂದು ಕಾನನ, ನಡು-ನಡುವೆ ಹರಿವ ನಿರ್ಮಲ ನೀರು..!

ಕಳೆಗುಂದುತ್ತಿದೆ ಶಿಕ್ಷಣ ವ್ಯವಸ್ಥೆ

ಇಂದು ಶಿಕ್ಷಣ ಕೇವಲ ಜ್ಞಾನದ ದಾಹ ತೀರಿಸಲಷ್ಟೇ ಸೀಮಿತವಾಗಿಲ್ಲ. ಬದಲಾಗಿ ಜೀವನ ನಿರೂಪಿಸುವಲ್ಲಿಯೂ ಪ್ರಮುಖ ಪಾತ್ರವಹಿಸುತ್ತಿದೆ. ದಿನೇ-ದಿನೇ ಎದುರಾಗುವ ಸವಾಲುಗಳನ್ನು ಸ್ವೀಕರಿಸಲು ವಿದ್ಯಾರ್ಥಿಗಳನ್ನು ಅಣಿಮಾಡುವ ವಿದ್ಯಾ ಸಂಸ್ಥೆಗಳು ನಮ್ಮಲ್ಲಿವೆ. ಸ್ಪರ್ಧಾ ಮನೋಭಾವವೊಂದಿದ್ದರೆ ಸಾಧನೆಗೆ ಅಡ್ಡಿಯಿಲ್ಲ. ಔದ್ಯೋಗಿಕ ಶಿಕ್ಷಣ ರಂಗ ಈ ನಿಟ್ಟಿನಲ್ಲಿ ಪ್ರಾಬಲ್ಯ ಮೆರೆದಿದೆ. ಐಟಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ನಮ್ಮ ದೇಶ, ರಾಜ್ಯದ ವಿದ್ಯಾರ್ಥಿಗಳಲ್ಲಿ ಇತ್ತ ಕಡೆ ಒಲವು ಮೂಡುವುದು ಸಹಜ. ಪದವಿ ಪೂರ್ವ ಅಥವಾ 12 ನೇ ತರಗತಿ ಮುಗಿಯುವುದನ್ನೇ ಕಾತರಿಸುತ್ತಾರೆ. ಪ್ರವೇಶ ಪರೀಕ್ಷೆಯೆಂಬ ಹುಚ್ಚು ಕುದುರೆಯನ್ನು ತಹಬಂದಿಗೆ ತರಲು ಕಸರತ್ತು ನಡೆಸುತ್ತಾರೆ. ನಾಯಿ ಕೊಡೆಗಳಂತೆ ಬೆಳೆಯುತ್ತಿರುವ ಇಂಜಿನೀರಿಂಗ್ ಕಾಲೇಜುಗಳ ಸಂಖ್ಯೆ, ಪ್ರಪ್ರತ್ಯೇಕ ಪ್ರವೇಶ ಪರೀಕ್ಷೆಗಳ ಗೋಜು ದಿಕ್ಕಾಪಾಲಾಗುವಂತೆ ಮಾಡುತ್ತಿವೆ. ಸೀಟು ಹಂಚಿಕೆಯ ವಿಷಯದಲ್ಲೂ ಖಾಸಗಿ ಕಾಲೇಜುಗಳದೇ ಸಿಂಹಪಾಲಾಗಿರುವುದರಿಂದ ಭಾರೀ ಶುಲ್ಕ ಕಟ್ಟುವಲ್ಲಿ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಈ ನಡುವೆ ಇಂಜಿನೀರಿಂಗ್ ನಂತಹ ವೃತ್ತಿಪರ ಪದವಿಗಳಿಸುವಾಸೆ ವಿವೇಚನೆಯಿಂದ ದೂರಕ್ಕೆ ಹೋದರೆ ಆಶ್ಚರ್ಯವಿಲ್ಲ. ಆದರೆ ಗಮನಿಸಲೇಬೇಕಾದ ಅಂಶವೆಂದರೆ, ಅನೇಕ ಕಾಲೇಜುಗಳು ಗುಣಮಟ್ಟ ಕಾಪಾಡುವಲ್ಲಿ ವಿಫಲವಾಗಿವೆ. ಇದರಿಂದ ಕಲಿಕಾ ಮಟ್ಟವೂ ಕುಂಠಿತಗೊಳ್ಳುತ್ತಿದೆ. ಇಂತಹ ಆಪಾದನೆ, ದೇಶದ ಪ್ರತಿಷ್ಠಿ...

ಧ್ವನಿ-ಪ್ರತಿಧ್ವನಿ

ಧ್ವನಿಸಿದ್ದೆಲ್ಲವೂ ಸತ್ಯ,                                        ಪ್ರತಿದ್ವನಿಸಿದ್ದೆಲ್ಲವೂ ಮಿಥ್ಯ ದೇಶ ಸುತ್ತುವ ಉಪದೇಶಗಳು ಮಹಾನುಭಾವರ ನುಡಿಗಳು ತಿರು ತಿರುಗಿ ಬರುವಾಗ ಅವರಿವರ ಸೊತ್ತಾಗಿ ಬಿಡುತ್ತವೆ ಅಪರಾವತಾರವೆ ತಾನೆಂದಾಗ ಮುಗಿ ಬೀಳುವ ಜನರಿದ್ದಾರೆ ಜಾತಿ-ಧರ್ಮ ಕುಲಗೆಡಿಸಿ ಜರಿದು ಹೇಳುವ ವ್ಯಾಖ್ಯಾನಗಳಿವೆ. || ಧ್ವನಿಸಿದ್ದೆಲ್ಲವೂ ಸತ್ಯ|| ಅಹೋ ರಾತ್ರಿಯ ಹೋರಾಟ, ಬಡಿದಾಟ ಜನಪರ ಹಿತದೃಷ್ಟಿಯಿಂದ ಬಡಬಡಿಸುವ ಜೈಕಾರ,ಧಿಕ್ಕಾರ ಎದೆಗುಂದದೆ ಪಾಲ್ಗೋಳ್ಳುವ ಜನ-ಜಾತ್ರೆ ಕಿಂಚಿತ್ತೂ ಸ್ಮರಣೆಯಿಲ್ಲದೇ ಉರುಳುತ್ತವೆ ಶೀತಲ ಸಮರದಲ್ಲಿ ಮುಗ್ಧ ಜೀವಗಳು ರಕ್ಷಣೆಗೋ, ಭಕ್ಷಣೆಗೋ ನಡೆಯುತ್ತವೆ ನ್ಯಾಯ-ಅನ್ಯಾಯ ಮೀರಿದ ದಿಟ ಪ್ರತಿಭಟನೆ ||ಧ್ವನಿಸಿದ್ದೆಲ್ಲವೂ ಸತ್ಯ||

ಸಮಾಜಕ್ಕೆ ಒಗ್ಗದ ತಾಣಗಳೇ..?

ಸ ಮಾಜದ ಹಿತದೃಷ್ಟಿಯಿಂದ ಜನಾಭಿಪ್ರಾಯ ಸಂಗ್ರಹಿಸುವುದು ಸಾಮಾನ್ಯ. ಪರ-ವಿರೋಧಗಳ ತುಲನೆ ಮಾಡಿ ಅಂತಿಮ ನಿರ್ಣಾಯ ಕೈಗೊಳ್ಳಲಾಗುತ್ತದೆ. ಇತ್ತೀಚೆಗೆ ಸಾಮಾಜಿಕ ತಾಣಗಳು ಅತಿರೇಕದ ಜನಾಭಿಪ್ರಾಯ ಒಟ್ಟುಗೂಡಿಸಲು ಮಾಧ್ಯಮಗಳಾಗುತ್ತಿವೆ. ವೈಯುಕ್ತಿಕ ದಿನಚರಿಯನ್ನೇ ‘ಗೋಡೆ’ ಬರಹವಾಗಿಸಿ ಸ್ನೇಹಿತರ ಪ್ರತಿಕ್ರಿಯೆಗೆ ದಿನವಿಡೀ ಹಪ-ಹಪಿಸುವವರಿದ್ದಾರೆ. ಕೆಲವು ಜಾತಿ-ಧರ್ಮ-ವ್ಯಕ್ತಿಗಳನ್ನು ಹಂಗಿಸುವ, ಛೇಡಿಸುವ ‘ಬೇನಾಮಿ’ಗಳ ಚಟುವಟಿಕೆ ಅಂಕೆಯಿಲ್ಲದ್ದಾಗಿದೆ. ಅವಹೇಳನ, ಪ್ರಚೋದನಕಾರಿ ಪ್ರತಿಕ್ರಿಯೆಗಳು ಭಾವೈಕ್ಯತೆಯನ್ನು ನುಂಗಿಹಾಕುತ್ತಿವೆ. ಇದೆಲ್ಲದರ ಬಗ್ಗೆ ಪ್ರಶ್ನೆ ಮಾಡಲೇಬೇಕೆನ್ನಿಸುವುದು ಸಹಜ.ಕಾಂಗ್ರೆಸ್ ನಾಯಕಿ ಸೋನಿಯಾ ವಿರುದ್ಧ ಫೇಸ್ ಬುಕ್ ನಲ್ಲಿದ್ದ ಮಾಹಿತಿ ಕೇಂದ್ರ ಸಚಿವ ಕಪಿಲ್ ಸಿಬಲ್ ರನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿತು. ವಿಪಕ್ಷಗಳಿಂದ ಲೇವಡಿಗೊಳಗಾದರು. ಅದೇನೇ ಇರಲಿ, ಒಂದು ವಿಷಯ ಚರ್ಚೆಯಾಗಬೇಕಾದರೆ ಕಾರಣಗಳು ಬೇಕು ಎಂದು ಮನವರಿಕೆ ಮಾಡಿಕೊಳ್ಳುವುದು ಉತ್ತಮ. ಬಹುಶಃ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪೂರ್ಣ ಪ್ರಮಾಣದಲ್ಲಿ ಉಪಯೋಗಿಸಿಕೊಂಡಿರುವ ಸಾಮಾಜಿಕ ತಾಣಗಳು ನಿರಂಕುಶ ಪ್ರಭುತ್ವ ಹೊಂದಿವೆ ಎಂದರೆ ತಪ್ಪಾಗಲಾರದು. ಆದರೆ ಇದೀಗ ವಿವಿಧ ಜಾತಿ-ಧರ್ಮ-ಪಂಗಡಗಳು ಇಲ್ಲಿ ನಡೆಯುವ ಧರ್ಮ ವಿರೋಧಕ್ಕೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ಆಕ್ಷೇಪಾರ್ಹ, ನಿಂದನಾತ್ಮಕ ಅಂಶಗಳನ್ನು ತೆಗೆದು ...

ಗೋಡೆಗಳಿಲ್ಲ...!

(ಕವಿ ಗೋಷ್ಠಿ- ಬೆಳ್ತಂಗಡಿ ತಾ|| 11ನೇ ಕನ್ನಡ ಸಾಹಿತ್ಯ ಸಮ್ಮೇಳನ, ಮುಂಡಾಜೆ :: 20-12-2011) ದೂರವಾದಂತೆ ನೆನಪಾಗುತ್ತವೆ ಹಳೆಯ, ಬಣ್ಣ ಮಾಸಿದ ಗಟ್ಟಿ ಗೋಡೆಗಳು. ಆದರೆ, ನೆಲೆಗಾಣುವ ನಿರೀಕ್ಷೆಯಲಿ ತೆರೆದುಕೊಳ್ಳುವ ಹೆಬ್ಬಾಗಿಲಿಗೆ, ಗೋಡೆಗಳೆಂಬುದು ಮರೀಚಿಕೆ. ಅನುಕಂಪ, ಮಾನ-ಮರ್ಯಾದೆ ಬೊಗಸೆಯಲಿ ಬಚ್ಚಿಡುವ ಇನ್ನಿಲ್ಲದ ಧಾವಂತ. ದುರುಪಯೋಗವಾಗಬಹುದು ನಡು ರಾತ್ರಿ-ಹಗಲೆನ್ನದೆ, ಕಾಮಲೆ ಕಣ್ಣೆಗೆ, ಗೋಡೆಗಳಿಲ್ಲ ರಕ್ಷಣೆಗೆ. ಇಲ್ಲಿ ಗೋಡೆಗಳಿಲ್ಲ... ನೋಡುವವರು ಅದೆಷ್ಟೋ ಜನ ನಮ್ಮ ಆಟ, ಭಯ, ಆತಂಕ, ಅವಮಾನದ ವರಸೆ. ಬಯಸಿ ಬಂದವರಂತೆ ನಾವೂ ನಡೆಯುತ್ತೇವೆ ಅನಿವಾರ್ಯದ ಅಂಕದಲಿ. ನೂರು ಆಸೆಗಳನು ಹೊತ್ತು, ಟೊಂಕ ಕಟ್ಟಿ ನಿಂತವರು, ಬಳಲಿ-ಬೆಂಡಾಗುವವರೆಗೆ, ದಿಶೆ ತಪ್ಪುವವರೆಗೆ, ಅನಿರ್ದಿಷ್ಟ ಕಾಲದ ತೀರದ ಪಯಣ. ಗೋಡೆಗಳಿಲ್ಲ ಅಡೆ-ತಡೆಗೆ. ಕಣ್ಣಾ-ಮುಚ್ಚಾಲೆ ಆಟದಂತೆ ಭ್ರಷ್ಟ ಆಚಾರಗಳನ್ನು ಕದ್ದು-ಮುಚ್ಚಿ ಪರಿಪಾಲಿಸಿದರೂ, ಕೈಗೆ ಬೇಡಿ ನಿಶ್ಚಿತ. ನೋಡುತ್ತಿರುತ್ತಾರೆ ಸಹಸ್ರಾರು ಕಂದೀಲು ಹಿಡಿದು ಜನ. ಗೋಡೆಗಳೆಂಬುದು ನಿಮಿತ್ತ. ಅನುಭೋಗದ ಬದುಕು ಬೀದಿಗೆ ಬಂದಿದೆ. ಜೀವನ ಮೌಲ್ಯ ಅರಿಯದ ಜೀವಗಳು ಹೊಡೆದಾಡುತ್ತಿವೆ. ಇರಬೇಕಾದಲ್ಲಿ ಇಲ್ಲ ನಾಲ್ಕು ಗೋಡೆಗಳು.               ...

ಒಂಟಿ ಪಯಣದ ನಂಟು

ಗಾಳಿ ಬೆಳಕುಗಳ ಜೊತೆ ಒಡನಾಟದ ನಾಟಕ ಇರುವ ಮನಸ್ಸಿಲ್ಲ ಇದ್ದಲ್ಲೇ ಗತಿ ಕಾಣುವ ತನಕ ಒಳಗೊಳಗೆ ಪುಟಿಯುತಿವೆ ಅಂತರಾಳದ ಭಾವನೆಗಳು ಬೇಡವೆನ್ನುವುದು ಹೇಗೆ..? ಅವರಿವರು ನನ್ನವರಲ್ಲ ಇರುವವರು ಹತ್ತಿರವಿಲ್ಲ ಜೀವ ಸಾಗರದ ತೆರೆಗಳು ಯಾವುದೋ ದಡ ಸೇರಿಸಿವೆ ಮುಕ್ತಿ ಮಾರ್ಗವೆ ಹೀಗೇನು..? ಎಲ್ಲ ಬಲ್ಲವರ ಬಳಿ ಹೋಗಲು ಇನ್ನೆಷ್ಟು ಕ್ರಮಿಸಬೇಕು..? ಪಯಣ ಒಂಟಿ ಅನಿಸುತ್ತಿಲ್ಲ ಗತ ಸಾಲುಗಳ ಇಣುಕಿದಾಗ ಆದರೆ ಯಾರೂ ಹುಡುಕಾಡಿದ ಹಾಗಿಲ್ಲ ನನ್ನ ಅನಾಧ ಚಹರೆ ಜೀವಿತಾವಧಿಯಲ್ಲೇ ಎಳ್ಳು-ನೀರು ಬಿಟ್ಟಂತಿದೆ                                               ಇದ್ದೂ ಇಲ್ಲದಂತಾದೆಯೆ ನಾನು..?                                                              ...