Skip to main content

ಧ್ವನಿ-ಪ್ರತಿಧ್ವನಿ

ಧ್ವನಿಸಿದ್ದೆಲ್ಲವೂ ಸತ್ಯ,                                       
ಪ್ರತಿದ್ವನಿಸಿದ್ದೆಲ್ಲವೂ ಮಿಥ್ಯ

ದೇಶ ಸುತ್ತುವ ಉಪದೇಶಗಳು
ಮಹಾನುಭಾವರ ನುಡಿಗಳು
ತಿರು ತಿರುಗಿ ಬರುವಾಗ
ಅವರಿವರ ಸೊತ್ತಾಗಿ ಬಿಡುತ್ತವೆ
ಅಪರಾವತಾರವೆ ತಾನೆಂದಾಗ
ಮುಗಿ ಬೀಳುವ ಜನರಿದ್ದಾರೆ
ಜಾತಿ-ಧರ್ಮ ಕುಲಗೆಡಿಸಿ
ಜರಿದು ಹೇಳುವ ವ್ಯಾಖ್ಯಾನಗಳಿವೆ. || ಧ್ವನಿಸಿದ್ದೆಲ್ಲವೂ ಸತ್ಯ||

ಅಹೋ ರಾತ್ರಿಯ ಹೋರಾಟ, ಬಡಿದಾಟ
ಜನಪರ ಹಿತದೃಷ್ಟಿಯಿಂದ
ಬಡಬಡಿಸುವ ಜೈಕಾರ,ಧಿಕ್ಕಾರ
ಎದೆಗುಂದದೆ ಪಾಲ್ಗೋಳ್ಳುವ ಜನ-ಜಾತ್ರೆ
ಕಿಂಚಿತ್ತೂ ಸ್ಮರಣೆಯಿಲ್ಲದೇ ಉರುಳುತ್ತವೆ
ಶೀತಲ ಸಮರದಲ್ಲಿ ಮುಗ್ಧ ಜೀವಗಳು
ರಕ್ಷಣೆಗೋ, ಭಕ್ಷಣೆಗೋ ನಡೆಯುತ್ತವೆ
ನ್ಯಾಯ-ಅನ್ಯಾಯ ಮೀರಿದ ದಿಟ ಪ್ರತಿಭಟನೆ ||ಧ್ವನಿಸಿದ್ದೆಲ್ಲವೂ ಸತ್ಯ||
Creative Commons License

Comments

Popular posts from this blog

ಯುವ ಜನತೆ ಮತ್ತು ಸಾಮಾಜಿಕ ತಾಣಗಳು

        ಸಂ ಪರ್ಕ ಮಾಧ್ಯಮಗಳು ಒಂದೆರಡಲ್ಲ,ಹಲವು ಬಗೆಯವು.ಅನಾದಿಕಾಲದಿಂದಲೂ ಇಂತಹ ಮಾಧ್ಯಮಗಳು ಜಾರಿಯಲ್ಲಿವೆ. ಕಾಲ ಬದಲಾದಂತೆ ಶೀಘ್ರ ಸಂಪರ್ಕ ಕಲ್ಪಿಸಬಹುದಾದ ಸಾಧನಗಳು ಬರಲಾರಂಭಿಸಿದವು.ಇಂದಿನ ಈ-ಮೇಲ್,ಸಾಮಾಜಿಕ ತಾಣಗಳು (ಫೇಸ್ ಬುಕ್,ಟ್ವಿಟ್ಟರ್..) ಪ್ರಚಲಿತ ಸಾಧನಗಳು.ಆದರೆ ಸಾಂಪ್ರದಾಯಿಕ ಪತ್ರ ವ್ಯವಹಾರಕ್ಕೆ ಇದ್ದ ಗೈರತ್ತು ಈ ಮಾಧ್ಯಮಗಳಲ್ಲಿ ಕಾಣುವುದು ಕಷ್ಟ.ಆದರೆ ಹೊಸತನಕ್ಕೆ ಅಂಟಿಕೊಳ್ಳುವ ಅನಿವಾರ್ಯತೆ ಬೇರೆಯದೇ ಪ್ರಪಂಚಕ್ಕೆ ಕರೆದೊಯ್ಯುತ್ತವೆ.ಎಲ್ಲೋ-ಎಂದೋ ಭೇಟಿಯಾದವರು, ಯಾವುದೋ ಊರಿನಲ್ಲಿರುವವರು ಹೀಗೆ ಹತ್ತು ಹಲವು ಕಾರಣಗಳಿಂದ ದೂರವಾದವರನ್ನು ಹತ್ತಿರಕ್ಕೆ,ಸದಾ ಸಂಪರ್ಕದಲ್ಲಿರುವಂತೆ ಮಾಡುವ ಛಾತಿ ಸಾಮಾಜಿಕ ತಾಣಗಳಂತಹ ಅಂತರ್ಜಾಲ ಸಂಬಂಧಿ ವ್ಯವಸ್ಥೆಗಳಿಗಿವೆ.ವಯಸ್ಸಿನ ಅಂತರವಿಲ್ಲದೇ ಎಲ್ಲರನ್ನು ಆಕರ್ಷಿಸುವ ತಾಣಗಳು ಮನೆ-ಮನಗಳಲ್ಲಿ ಹಸುರಾಗಿವೆ.ಇವುಗಳ ಬಳಕೆ ಹೆಚ್ಚಾಗುತ್ತಲೇ ಇದೆ.ಒಂದು ಘಳಿಗೆಯೂ ಬಿಟ್ಟು ಇರಲಾರದಷ್ಟು ಪ್ರಭಾವ ಬೀರಿವೆ.ಭಾರತ ಫೇಸ್ ಬುಕ್ ಬಳಕೆಯಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ.        ಯುವ ಜನಾಂಗ ಈ ತಾಣಗಳ ಅತಿ ಹೆಚ್ಚು ಬಳಕೆ ಮಾಡುತ್ತಿರುವುದು ಗೊತ್ತಿರುವ ವಿಚಾರವೆ.ಗೆಳೆಯರ ಬಳಗ ಕಟ್ಟಿಕೊಳ್ಳುವ ಆಸಕ್ತಿ ಹೆಚ್ಚಿಸುತ್ತಿರುವ ಸಾಮಾಜಿಕ ತಾಣಗಳು ಓದಿನ ಮೇಲಿರಬೇಕಾದ ಗಮನ ಕುಂಠಿತಗೊಳಿಸುತ್ತಿದೆ ಎಂಬ ಅಭಿಪ್ರಾಯಗಳು ಕೇಳಿಬರು...

ಜಾತಿರಾಜಕಾರಣ ಯಾಕೆ ಬೇಕು..?

      ನ ಮ್ಮದು ಜ್ಯಾತ್ಯಾತೀತ ದೇಶ.ಹೀಗೆಂದು ಹೇಳಿಕೊಳ್ಳುವವರಿಗೆ ಲೆಕ್ಕವಿಲ್ಲ.ಆದರೂ,ಅನೇಕ ರೀತಿ-ರಿವಾಜು,ಜಾತಿ-ಧರ್ಮಗಳನ್ನು ಹೊಂದಿರುವ ದೇಶದಲ್ಲಿ ಸಾಮರಸ್ಯ ಕಾಣಬೇಕಾದರೆ ಜ್ಯಾತ್ಯಾತೀತತೆಯ ಕಡೆ ಒಲವು ಮೂಡಿಸುವ ಪ್ರಯತ್ನ ಮಾಡುವ ಅನಿವಾರ್ಯತೆ ಇದೆ.ಸರಳ ನಡೆ-ನುಡಿ,ತಾತ್ವಿಕ ವಿಚಾರಗಳ ಕುರಿತ ಚರ್ಚೆ,ಸಹೋದರತೆಯನ್ನು ಸಾರುವ ಗುಣಗಳನ್ನು ಬೆಳೆಸಿಕೊಳ್ಳುವ ರೂಢಿ ಮಾಡಿಕೊಳ್ಳಬೇಕಿದೆ.ಜನರ ನಡುವೆ ಒಮ್ಮತದ ನಿರ್ಧಾರ ಕೈಗೊಳ್ಳಲು ಪ್ರಯತ್ನಗಳು ಸಾಗಬೇಕಿವೆ.ದಿನೇ-ದಿನೇ ಹೆಚ್ಚುತ್ತಿರುವ ಜನಸಂಖ್ಯೆಯಲ್ಲಿ ಕೆಲವೊಂದು ಜಾತಿ-ಧರ್ಮಕ್ಕೆ ಸೇರಿದವರ ಸಂಖ್ಯೆ ಜಾಸ್ತಿಯಿರಬಹುದು.ಇದರಿಂದ ಸಾಮಾಜಿಕ ಬದಲಾವಣೆಗಳು ಸಾಧ್ಯ.ಹೀಗಾಗಿ ಸಮತೋಲನ ಕಾಯ್ದುಕೊಳ್ಳುವ ಜವಾಬ್ದಾರಿ ಮತ್ತೆ ಜನರದೇ ಆಗಿರುತ್ತದೆ.ಆದರೆ ಇದೆಲ್ಲಕ್ಕೂ ಸಂವಿಧಾನತ್ಮಕ ರೂಪು-ರೇಷೆಗಳಿರುತ್ತವೆ.ಮತದಾನದ ಮೂಲಕ ಆಯ್ಕೆಯಾಗಿರುವ ವ್ಯಕ್ತಿ ಊರಿನ ಪ್ರತಿನಿಧಿಯಾಗಿರುತ್ತಾನೆ.ರಾಜಕೀಯ ಪಕ್ಷಗಳು ಮೊದಲ ಹಂತದಲ್ಲಿ ಜನರನ್ನು ವಿಭಾಗಿಸಿಬಿಡುತ್ತದೆ.ಇಲ್ಲಿ ನಡೆಯುವ ಎಲ್ಲಾ ಲೆಕ್ಕಾಚಾರಗಳು ಜನರ ಹಿತದೃಷ್ಠಿಯಿಂದ ಎಂಬ ಮುಖವಾಡ ಹೊತ್ತಿರುತ್ತದೆಯಲ್ಲದೆ ಅಸಲಿ ಅಂಶ ಬೇರೆಯದೇ ಆಗಿರುತ್ತದೆ.          ರಾಜಕೀಯಕ್ಕೂ ಜಾತಿ-ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ.ಆದರೆ ಇಂದು ನಡೆಯುತ್ತಿರುವುದೆಲ್ಲ ಜಾತಿ ರಾಜಕಾರಣವೆ.ಇದರ ಬೇರು ವಿಶಾಲವಾಗಿ ಹರಡಿ ನಿಂತಿದೆ.ಮತದಾರರನ್ನು ವಿ...

ಗೋಡೆಗಳಿಲ್ಲ...!

(ಕವಿ ಗೋಷ್ಠಿ- ಬೆಳ್ತಂಗಡಿ ತಾ|| 11ನೇ ಕನ್ನಡ ಸಾಹಿತ್ಯ ಸಮ್ಮೇಳನ, ಮುಂಡಾಜೆ :: 20-12-2011) ದೂರವಾದಂತೆ ನೆನಪಾಗುತ್ತವೆ ಹಳೆಯ, ಬಣ್ಣ ಮಾಸಿದ ಗಟ್ಟಿ ಗೋಡೆಗಳು. ಆದರೆ, ನೆಲೆಗಾಣುವ ನಿರೀಕ್ಷೆಯಲಿ ತೆರೆದುಕೊಳ್ಳುವ ಹೆಬ್ಬಾಗಿಲಿಗೆ, ಗೋಡೆಗಳೆಂಬುದು ಮರೀಚಿಕೆ. ಅನುಕಂಪ, ಮಾನ-ಮರ್ಯಾದೆ ಬೊಗಸೆಯಲಿ ಬಚ್ಚಿಡುವ ಇನ್ನಿಲ್ಲದ ಧಾವಂತ. ದುರುಪಯೋಗವಾಗಬಹುದು ನಡು ರಾತ್ರಿ-ಹಗಲೆನ್ನದೆ, ಕಾಮಲೆ ಕಣ್ಣೆಗೆ, ಗೋಡೆಗಳಿಲ್ಲ ರಕ್ಷಣೆಗೆ. ಇಲ್ಲಿ ಗೋಡೆಗಳಿಲ್ಲ... ನೋಡುವವರು ಅದೆಷ್ಟೋ ಜನ ನಮ್ಮ ಆಟ, ಭಯ, ಆತಂಕ, ಅವಮಾನದ ವರಸೆ. ಬಯಸಿ ಬಂದವರಂತೆ ನಾವೂ ನಡೆಯುತ್ತೇವೆ ಅನಿವಾರ್ಯದ ಅಂಕದಲಿ. ನೂರು ಆಸೆಗಳನು ಹೊತ್ತು, ಟೊಂಕ ಕಟ್ಟಿ ನಿಂತವರು, ಬಳಲಿ-ಬೆಂಡಾಗುವವರೆಗೆ, ದಿಶೆ ತಪ್ಪುವವರೆಗೆ, ಅನಿರ್ದಿಷ್ಟ ಕಾಲದ ತೀರದ ಪಯಣ. ಗೋಡೆಗಳಿಲ್ಲ ಅಡೆ-ತಡೆಗೆ. ಕಣ್ಣಾ-ಮುಚ್ಚಾಲೆ ಆಟದಂತೆ ಭ್ರಷ್ಟ ಆಚಾರಗಳನ್ನು ಕದ್ದು-ಮುಚ್ಚಿ ಪರಿಪಾಲಿಸಿದರೂ, ಕೈಗೆ ಬೇಡಿ ನಿಶ್ಚಿತ. ನೋಡುತ್ತಿರುತ್ತಾರೆ ಸಹಸ್ರಾರು ಕಂದೀಲು ಹಿಡಿದು ಜನ. ಗೋಡೆಗಳೆಂಬುದು ನಿಮಿತ್ತ. ಅನುಭೋಗದ ಬದುಕು ಬೀದಿಗೆ ಬಂದಿದೆ. ಜೀವನ ಮೌಲ್ಯ ಅರಿಯದ ಜೀವಗಳು ಹೊಡೆದಾಡುತ್ತಿವೆ. ಇರಬೇಕಾದಲ್ಲಿ ಇಲ್ಲ ನಾಲ್ಕು ಗೋಡೆಗಳು.               ...