Skip to main content

Posts

ಕಳೆಗುಂದುತ್ತಿದೆ ಶಿಕ್ಷಣ ವ್ಯವಸ್ಥೆ

ಇಂದು ಶಿಕ್ಷಣ ಕೇವಲ ಜ್ಞಾನದ ದಾಹ ತೀರಿಸಲಷ್ಟೇ ಸೀಮಿತವಾಗಿಲ್ಲ. ಬದಲಾಗಿ ಜೀವನ ನಿರೂಪಿಸುವಲ್ಲಿಯೂ ಪ್ರಮುಖ ಪಾತ್ರವಹಿಸುತ್ತಿದೆ. ದಿನೇ-ದಿನೇ ಎದುರಾಗುವ ಸವಾಲುಗಳನ್ನು ಸ್ವೀಕರಿಸಲು ವಿದ್ಯಾರ್ಥಿಗಳನ್ನು ಅಣಿಮಾಡುವ ವಿದ್ಯಾ ಸಂಸ್ಥೆಗಳು ನಮ್ಮಲ್ಲಿವೆ. ಸ್ಪರ್ಧಾ ಮನೋಭಾವವೊಂದಿದ್ದರೆ ಸಾಧನೆಗೆ ಅಡ್ಡಿಯಿಲ್ಲ. ಔದ್ಯೋಗಿಕ ಶಿಕ್ಷಣ ರಂಗ ಈ ನಿಟ್ಟಿನಲ್ಲಿ ಪ್ರಾಬಲ್ಯ ಮೆರೆದಿದೆ. ಐಟಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ನಮ್ಮ ದೇಶ, ರಾಜ್ಯದ ವಿದ್ಯಾರ್ಥಿಗಳಲ್ಲಿ ಇತ್ತ ಕಡೆ ಒಲವು ಮೂಡುವುದು ಸಹಜ. ಪದವಿ ಪೂರ್ವ ಅಥವಾ 12 ನೇ ತರಗತಿ ಮುಗಿಯುವುದನ್ನೇ ಕಾತರಿಸುತ್ತಾರೆ. ಪ್ರವೇಶ ಪರೀಕ್ಷೆಯೆಂಬ ಹುಚ್ಚು ಕುದುರೆಯನ್ನು ತಹಬಂದಿಗೆ ತರಲು ಕಸರತ್ತು ನಡೆಸುತ್ತಾರೆ. ನಾಯಿ ಕೊಡೆಗಳಂತೆ ಬೆಳೆಯುತ್ತಿರುವ ಇಂಜಿನೀರಿಂಗ್ ಕಾಲೇಜುಗಳ ಸಂಖ್ಯೆ, ಪ್ರಪ್ರತ್ಯೇಕ ಪ್ರವೇಶ ಪರೀಕ್ಷೆಗಳ ಗೋಜು ದಿಕ್ಕಾಪಾಲಾಗುವಂತೆ ಮಾಡುತ್ತಿವೆ. ಸೀಟು ಹಂಚಿಕೆಯ ವಿಷಯದಲ್ಲೂ ಖಾಸಗಿ ಕಾಲೇಜುಗಳದೇ ಸಿಂಹಪಾಲಾಗಿರುವುದರಿಂದ ಭಾರೀ ಶುಲ್ಕ ಕಟ್ಟುವಲ್ಲಿ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಈ ನಡುವೆ ಇಂಜಿನೀರಿಂಗ್ ನಂತಹ ವೃತ್ತಿಪರ ಪದವಿಗಳಿಸುವಾಸೆ ವಿವೇಚನೆಯಿಂದ ದೂರಕ್ಕೆ ಹೋದರೆ ಆಶ್ಚರ್ಯವಿಲ್ಲ. ಆದರೆ ಗಮನಿಸಲೇಬೇಕಾದ ಅಂಶವೆಂದರೆ, ಅನೇಕ ಕಾಲೇಜುಗಳು ಗುಣಮಟ್ಟ ಕಾಪಾಡುವಲ್ಲಿ ವಿಫಲವಾಗಿವೆ. ಇದರಿಂದ ಕಲಿಕಾ ಮಟ್ಟವೂ ಕುಂಠಿತಗೊಳ್ಳುತ್ತಿದೆ. ಇಂತಹ ಆಪಾದನೆ, ದೇಶದ ಪ್ರತಿಷ್ಠಿ...

ಧ್ವನಿ-ಪ್ರತಿಧ್ವನಿ

ಧ್ವನಿಸಿದ್ದೆಲ್ಲವೂ ಸತ್ಯ,                                        ಪ್ರತಿದ್ವನಿಸಿದ್ದೆಲ್ಲವೂ ಮಿಥ್ಯ ದೇಶ ಸುತ್ತುವ ಉಪದೇಶಗಳು ಮಹಾನುಭಾವರ ನುಡಿಗಳು ತಿರು ತಿರುಗಿ ಬರುವಾಗ ಅವರಿವರ ಸೊತ್ತಾಗಿ ಬಿಡುತ್ತವೆ ಅಪರಾವತಾರವೆ ತಾನೆಂದಾಗ ಮುಗಿ ಬೀಳುವ ಜನರಿದ್ದಾರೆ ಜಾತಿ-ಧರ್ಮ ಕುಲಗೆಡಿಸಿ ಜರಿದು ಹೇಳುವ ವ್ಯಾಖ್ಯಾನಗಳಿವೆ. || ಧ್ವನಿಸಿದ್ದೆಲ್ಲವೂ ಸತ್ಯ|| ಅಹೋ ರಾತ್ರಿಯ ಹೋರಾಟ, ಬಡಿದಾಟ ಜನಪರ ಹಿತದೃಷ್ಟಿಯಿಂದ ಬಡಬಡಿಸುವ ಜೈಕಾರ,ಧಿಕ್ಕಾರ ಎದೆಗುಂದದೆ ಪಾಲ್ಗೋಳ್ಳುವ ಜನ-ಜಾತ್ರೆ ಕಿಂಚಿತ್ತೂ ಸ್ಮರಣೆಯಿಲ್ಲದೇ ಉರುಳುತ್ತವೆ ಶೀತಲ ಸಮರದಲ್ಲಿ ಮುಗ್ಧ ಜೀವಗಳು ರಕ್ಷಣೆಗೋ, ಭಕ್ಷಣೆಗೋ ನಡೆಯುತ್ತವೆ ನ್ಯಾಯ-ಅನ್ಯಾಯ ಮೀರಿದ ದಿಟ ಪ್ರತಿಭಟನೆ ||ಧ್ವನಿಸಿದ್ದೆಲ್ಲವೂ ಸತ್ಯ||

ಸಮಾಜಕ್ಕೆ ಒಗ್ಗದ ತಾಣಗಳೇ..?

ಸ ಮಾಜದ ಹಿತದೃಷ್ಟಿಯಿಂದ ಜನಾಭಿಪ್ರಾಯ ಸಂಗ್ರಹಿಸುವುದು ಸಾಮಾನ್ಯ. ಪರ-ವಿರೋಧಗಳ ತುಲನೆ ಮಾಡಿ ಅಂತಿಮ ನಿರ್ಣಾಯ ಕೈಗೊಳ್ಳಲಾಗುತ್ತದೆ. ಇತ್ತೀಚೆಗೆ ಸಾಮಾಜಿಕ ತಾಣಗಳು ಅತಿರೇಕದ ಜನಾಭಿಪ್ರಾಯ ಒಟ್ಟುಗೂಡಿಸಲು ಮಾಧ್ಯಮಗಳಾಗುತ್ತಿವೆ. ವೈಯುಕ್ತಿಕ ದಿನಚರಿಯನ್ನೇ ‘ಗೋಡೆ’ ಬರಹವಾಗಿಸಿ ಸ್ನೇಹಿತರ ಪ್ರತಿಕ್ರಿಯೆಗೆ ದಿನವಿಡೀ ಹಪ-ಹಪಿಸುವವರಿದ್ದಾರೆ. ಕೆಲವು ಜಾತಿ-ಧರ್ಮ-ವ್ಯಕ್ತಿಗಳನ್ನು ಹಂಗಿಸುವ, ಛೇಡಿಸುವ ‘ಬೇನಾಮಿ’ಗಳ ಚಟುವಟಿಕೆ ಅಂಕೆಯಿಲ್ಲದ್ದಾಗಿದೆ. ಅವಹೇಳನ, ಪ್ರಚೋದನಕಾರಿ ಪ್ರತಿಕ್ರಿಯೆಗಳು ಭಾವೈಕ್ಯತೆಯನ್ನು ನುಂಗಿಹಾಕುತ್ತಿವೆ. ಇದೆಲ್ಲದರ ಬಗ್ಗೆ ಪ್ರಶ್ನೆ ಮಾಡಲೇಬೇಕೆನ್ನಿಸುವುದು ಸಹಜ.ಕಾಂಗ್ರೆಸ್ ನಾಯಕಿ ಸೋನಿಯಾ ವಿರುದ್ಧ ಫೇಸ್ ಬುಕ್ ನಲ್ಲಿದ್ದ ಮಾಹಿತಿ ಕೇಂದ್ರ ಸಚಿವ ಕಪಿಲ್ ಸಿಬಲ್ ರನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿತು. ವಿಪಕ್ಷಗಳಿಂದ ಲೇವಡಿಗೊಳಗಾದರು. ಅದೇನೇ ಇರಲಿ, ಒಂದು ವಿಷಯ ಚರ್ಚೆಯಾಗಬೇಕಾದರೆ ಕಾರಣಗಳು ಬೇಕು ಎಂದು ಮನವರಿಕೆ ಮಾಡಿಕೊಳ್ಳುವುದು ಉತ್ತಮ. ಬಹುಶಃ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪೂರ್ಣ ಪ್ರಮಾಣದಲ್ಲಿ ಉಪಯೋಗಿಸಿಕೊಂಡಿರುವ ಸಾಮಾಜಿಕ ತಾಣಗಳು ನಿರಂಕುಶ ಪ್ರಭುತ್ವ ಹೊಂದಿವೆ ಎಂದರೆ ತಪ್ಪಾಗಲಾರದು. ಆದರೆ ಇದೀಗ ವಿವಿಧ ಜಾತಿ-ಧರ್ಮ-ಪಂಗಡಗಳು ಇಲ್ಲಿ ನಡೆಯುವ ಧರ್ಮ ವಿರೋಧಕ್ಕೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ಆಕ್ಷೇಪಾರ್ಹ, ನಿಂದನಾತ್ಮಕ ಅಂಶಗಳನ್ನು ತೆಗೆದು ...

ಗೋಡೆಗಳಿಲ್ಲ...!

(ಕವಿ ಗೋಷ್ಠಿ- ಬೆಳ್ತಂಗಡಿ ತಾ|| 11ನೇ ಕನ್ನಡ ಸಾಹಿತ್ಯ ಸಮ್ಮೇಳನ, ಮುಂಡಾಜೆ :: 20-12-2011) ದೂರವಾದಂತೆ ನೆನಪಾಗುತ್ತವೆ ಹಳೆಯ, ಬಣ್ಣ ಮಾಸಿದ ಗಟ್ಟಿ ಗೋಡೆಗಳು. ಆದರೆ, ನೆಲೆಗಾಣುವ ನಿರೀಕ್ಷೆಯಲಿ ತೆರೆದುಕೊಳ್ಳುವ ಹೆಬ್ಬಾಗಿಲಿಗೆ, ಗೋಡೆಗಳೆಂಬುದು ಮರೀಚಿಕೆ. ಅನುಕಂಪ, ಮಾನ-ಮರ್ಯಾದೆ ಬೊಗಸೆಯಲಿ ಬಚ್ಚಿಡುವ ಇನ್ನಿಲ್ಲದ ಧಾವಂತ. ದುರುಪಯೋಗವಾಗಬಹುದು ನಡು ರಾತ್ರಿ-ಹಗಲೆನ್ನದೆ, ಕಾಮಲೆ ಕಣ್ಣೆಗೆ, ಗೋಡೆಗಳಿಲ್ಲ ರಕ್ಷಣೆಗೆ. ಇಲ್ಲಿ ಗೋಡೆಗಳಿಲ್ಲ... ನೋಡುವವರು ಅದೆಷ್ಟೋ ಜನ ನಮ್ಮ ಆಟ, ಭಯ, ಆತಂಕ, ಅವಮಾನದ ವರಸೆ. ಬಯಸಿ ಬಂದವರಂತೆ ನಾವೂ ನಡೆಯುತ್ತೇವೆ ಅನಿವಾರ್ಯದ ಅಂಕದಲಿ. ನೂರು ಆಸೆಗಳನು ಹೊತ್ತು, ಟೊಂಕ ಕಟ್ಟಿ ನಿಂತವರು, ಬಳಲಿ-ಬೆಂಡಾಗುವವರೆಗೆ, ದಿಶೆ ತಪ್ಪುವವರೆಗೆ, ಅನಿರ್ದಿಷ್ಟ ಕಾಲದ ತೀರದ ಪಯಣ. ಗೋಡೆಗಳಿಲ್ಲ ಅಡೆ-ತಡೆಗೆ. ಕಣ್ಣಾ-ಮುಚ್ಚಾಲೆ ಆಟದಂತೆ ಭ್ರಷ್ಟ ಆಚಾರಗಳನ್ನು ಕದ್ದು-ಮುಚ್ಚಿ ಪರಿಪಾಲಿಸಿದರೂ, ಕೈಗೆ ಬೇಡಿ ನಿಶ್ಚಿತ. ನೋಡುತ್ತಿರುತ್ತಾರೆ ಸಹಸ್ರಾರು ಕಂದೀಲು ಹಿಡಿದು ಜನ. ಗೋಡೆಗಳೆಂಬುದು ನಿಮಿತ್ತ. ಅನುಭೋಗದ ಬದುಕು ಬೀದಿಗೆ ಬಂದಿದೆ. ಜೀವನ ಮೌಲ್ಯ ಅರಿಯದ ಜೀವಗಳು ಹೊಡೆದಾಡುತ್ತಿವೆ. ಇರಬೇಕಾದಲ್ಲಿ ಇಲ್ಲ ನಾಲ್ಕು ಗೋಡೆಗಳು.               ...

ಒಂಟಿ ಪಯಣದ ನಂಟು

ಗಾಳಿ ಬೆಳಕುಗಳ ಜೊತೆ ಒಡನಾಟದ ನಾಟಕ ಇರುವ ಮನಸ್ಸಿಲ್ಲ ಇದ್ದಲ್ಲೇ ಗತಿ ಕಾಣುವ ತನಕ ಒಳಗೊಳಗೆ ಪುಟಿಯುತಿವೆ ಅಂತರಾಳದ ಭಾವನೆಗಳು ಬೇಡವೆನ್ನುವುದು ಹೇಗೆ..? ಅವರಿವರು ನನ್ನವರಲ್ಲ ಇರುವವರು ಹತ್ತಿರವಿಲ್ಲ ಜೀವ ಸಾಗರದ ತೆರೆಗಳು ಯಾವುದೋ ದಡ ಸೇರಿಸಿವೆ ಮುಕ್ತಿ ಮಾರ್ಗವೆ ಹೀಗೇನು..? ಎಲ್ಲ ಬಲ್ಲವರ ಬಳಿ ಹೋಗಲು ಇನ್ನೆಷ್ಟು ಕ್ರಮಿಸಬೇಕು..? ಪಯಣ ಒಂಟಿ ಅನಿಸುತ್ತಿಲ್ಲ ಗತ ಸಾಲುಗಳ ಇಣುಕಿದಾಗ ಆದರೆ ಯಾರೂ ಹುಡುಕಾಡಿದ ಹಾಗಿಲ್ಲ ನನ್ನ ಅನಾಧ ಚಹರೆ ಜೀವಿತಾವಧಿಯಲ್ಲೇ ಎಳ್ಳು-ನೀರು ಬಿಟ್ಟಂತಿದೆ                                               ಇದ್ದೂ ಇಲ್ಲದಂತಾದೆಯೆ ನಾನು..?                                                              ...

ಅರ್ಥವಾಗದ ಮನಸ್ಸುಗಳು

  ‘ಗಿಡ ವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ’ ಎಂಬ ನಾಣ್ಣುಡಿ ಮನುಷ್ಯನ ನಡವಳಿಕೆಯನ್ನು ಅಳೆಯುತ್ತದೆ. ಪ್ರೀತಿ, ವಿಶ್ವಾಸ, ಸಹನೆ, ತಾಳ್ಮೆಗಳ ಜೊತೆ ಬಾಲ್ಯದಿಂದಲೇ ನಡೆದುಕೊಳ್ಳುವುದು ವ್ಯಕ್ತಿತ್ವಕ್ಕೆ ಭದ್ರ ಬುನಾದಿ ಎಂಬುದು ಹಿರಿಯರ ಅಭಿಪ್ರಾಯ. ಆದರೆ ಇತ್ತೀಚೆಗೆ ಮರವಾಗಿ ಬೆಳೆಯುವುದರ ಮೊದಲೇ ಯುವ ಜನಾಂಗ ವಿನಾಶದ ದಾರಿ ಹಿಡಿಯುತ್ತಿರುವುದು ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸಿದೆ. ಕ್ಷುಲ್ಲಕ ಕಾರಣಗಳಿಗೆ, ತೊಂದರೆಗಳಿಗೆ ಯುವ ಜನರು ಆತ್ಮಹತ್ಯೆಯೇ ಪರಿಹಾರವೆಂದೆನಿಸಿರುವುದು ದೌರ್ಭ್ಯಾಗ್ಯವೇ ಸರಿ. ಇದಕ್ಕೆ ಸರಿಯಾಗಿ ಮನುಷ್ಯ ಭಾವನೆಗಳನ್ನು ಅರ್ಥೈಸಿಕೊಳ್ಳಲು ಹೋಗದಿರುವುದು,  ಕ್ರಾಂತಿಕಾರಿ ನಡವಳಿಕೆ, ಪಾಲಿಸಲಾಗದ ಆಜ್ಞೆಗಳು, ಹಟಮಾರಿತನದಂತಹ ಭಿನ್ನತೆಗಳು ಮಕ್ಕಳ-ಹೆತ್ತವರ ನಡುವೆ ಸುಳಿದಿರುವುದು ಅನಾವಶ್ಯಕ ಆವೇಶ ಉಂಟಾಗುವಂತೆ ಮಾಡಿದೆ. ವರ್ಷದಲ್ಲಿ ಸುಮಾರು 30,000ಕ್ಕೂ ಮಿಗಿಲಾಗಿ ದೇಶದಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿರುವ ಸಂಗತಿ ಬೆಚ್ಚಿ ಬೀಳಿಸುತ್ತದೆ.           ಒಂ ದು ಅಥವಾ ಎರಡು ಮಕ್ಕಳಿರುವ ಸಂಸಾರದಲ್ಲಿ ಮುಳುವಾಗಿರುವ ಈ ಸಮಸ್ಯೆಯ ಬೆನ್ನು ಹತ್ತಿದರೆ ಹೆತ್ತವರು, ಸುತ್ತಮುತ್ತಲ ಪರಿಸರ, ಶಾಲೆ-ಶಿಕ್ಷಣ, ಸಹವಾಸ ಮತ್ತು ಆಕರ್ಷಣೆಗಳಂತಹ ಕೆಲವು ಅಸಹಜ ವ್ಯಕ್ತಿ-ಸನ್ನಿವೇಶಗಳು ಬೆಳಕಿಗೆ ಬರುತ್ತವೆ. ಯಾರನ್ನೂ ಪ್ರತ್ಯಕ್ಷವಾಗಿ ತೆಗಳುವಂತಿಲ್ಲ ಅಂತೆಯೇ ಘಟನೆಗಳನ್ನು ಅಲ್ಲಗಳೆಯ...

ಮುಂಡಾಜೆ ಎಂಬ ನಮ್ಮೂರು...

  ಕ ಡೂರು-ಮಂಗಳೂರು ರಾಜ್ಯ ಹೆದ್ದಾರಿಯ ಮೇಲೆ ಬೆಳ್ತಂಗಡಿ ತಾಲೂಕು ಕೇಂದ್ರದಿಂದ ಸುಮಾರು 14 ಕಿಲೋ ಮೀಟರ್ ಪೂರ್ವದಲ್ಲಿರುವ ಮಲೆನಾಡಿನ ಪುಟ್ಟ ಹಳ್ಳಿ.ಮುಂಡಾಜೆ ಸುಮಾರು 3608 ಎಕ್ರೆ ವಿಸ್ತಾರವಾಗಿದೆ.ಮಲೆನಾಡ ಹಳ್ಳಿಯೇ ಆಗಿದ್ದರೂ ವಿದ್ಯಾ ಸಂಸ್ಥೆಗಳು, ಸಾರಿಗೆ-ರಸ್ತೆ ಸೌಕರ್ಯಗಳು, ವಿದ್ಯುತ್ ಶಕ್ತಿ, ದೂರವಾಣಿ, ಅಂಗಡಿ-ಮುಂಗಟ್ಟುಗಳು, ನೀರಾವರಿ, ಆಸ್ಪತ್ರೆ, ಬೇಂಕ್, ಅಂಚೆ ಕಛೇರಿ ಮೊದಲಾದ ಆಧುನಿಕ ಸವಲತ್ತುಗಳನ್ನು ಹೊಂದಿರುವ ಕಾರಣ ಅಭಿವೃಧ್ಧಿಶೀಲ ಹಳ್ಳಿಯೆಂದು ಇದನ್ನು ಗುರುತಿಸಬಹುದು.   ಹೆಸರಿನ ಮೂಲ: ಮುಂಡಾಜೆ ಎಂಬ ಹೆಸರು ಊರಿಗೆ ಬಂದಿರುವ ಬಗ್ಗೆ ಹೆಚ್ಚಿನ ಪುರಾವೆಗಳೇನೂ ಇಲ್ಲ.ಆದರೆ ‘ಅಜೆ’-‘ಅಂಜೆ’ ಎಂಬ ಪದಗಳು ‘ನೀರಿರುವ ಸ್ಥಳ’ ಎಂಬ ಅರ್ಥ ಕೊಡುತ್ತವೆಂದು ಇತಿಹಾಸ ಸಂಶೋಧಕರು ಹೇಳುತ್ತಾರೆ.ಆ ದೃಷ್ಟಿಯಿಂದ ಮುಂಡಾಜೆ ಅಂದರೆ ಒಳ್ಳೆಯ ನೀರಿರುವ ಪ್ರದೇಶವೆಂದು ಅರ್ಥೈಸಬಹುದೇನೋ.ಇಲ್ಲಿ ಹರಿಯುವ ಮೃತ್ಯುಂಜಯ ನದಿ ಇದಕ್ಕೆ ಒಳ್ಳೆಯ ಸಾಕ್ಷಿ ಒದಗಿಸುತ್ತದೆ.ಬೇಸಿಗೆಯಲ್ಲೂ ಈ ನದಿ ಬತ್ತವುದಿಲ್ಲ.   ಆಡಳಿತ: ಮುಂಡಾಜೆ 19ನೇ ಶತಮಾನದ ಕೊನೆಯ ತನಕ ಬೈಲಂಗಡಿಯ ಮೂಲರಸರ ಆಳ್ವಿಕೆಗೆ ಒಳಪಟ್ಟಿತ್ತು. ಅನಂತರ ಸ್ವಾತಂತ್ರ್ಯ ಸಿಗುವ ತನಕ ಬ್ರಿಟೀಷರ ಆಳ್ವಿಕೆಗೆ ಒಳಪಟ್ಟಿತ್ತು.ಸ್ವಾತಂತ್ರ್ಯಾ ನಂತರ ಪಕ್ಕದ ಕಲ್ಮಜೆಯೊಡಗೂಡಿ ಜಂಟಿ ಗ್ರಾಮ ಪಂಚಾಯತ್ ಆಡಳಿತವಿತ್ತು.ಈಚೆಗೆ ಸ್ವತಂತ್ರವಾಗಿ ಮುಂಡಾಜೆ ಪಂಚಾಯತ್ ರಚನೆಯಾಗಿದ್ದು ಅಭಿವೃಧ...