Skip to main content

ಪ್ರಾಣ ಪಕ್ಷಿಯ ಪಾಡು




ಗರ್ಭ ಧರಿಸುವಾಗಲೇ ಒಳಹೊಕ್ಕು
ನೆತ್ತಿಯ ಮೇಲೆ ಕೈ ಇಟ್ಟು,
ಆಣೆ ಮಾಡಿದ್ದೆ ಜೀವಕ್ಕೆ-
ನಿನ್ನ ಬಿಟ್ಟು ಹೋಗುವುದಿಲ್ಲವೆಂದು.


ತುತ್ತು ಅನ್ನಕ್ಕೆ ತತ್ವಾರವಿದ್ದಾಗಲೂ
ಸಂಭಾಳಿಸಿದ್ದೇನೆ, ನನ್ನ
ಜೀವದ ಹಂಗು ತೊರೆದು, ಕೊಟ್ಟ
ಮಾತಿಗೆ ಎರಡು ಬಗೆಯಬಾರದೆಂದು.


ಜೀವ ತಾರುಣ್ಯದ ತಂಟೆಯಿಂದ
ಮನನೊಂದುಕೊಂಡಾಗಲೂ,
ಆತ್ಮಹತ್ಯೆಗೆ ಎಡೆಮಾಡಿಕೊಡಲಿಲ್ಲ
ಅಂತಕನ ಆಣತಿ ಇರಲಿಲ್ಲವೆಂದು.


ಕಾಲಚಕ್ರ ಉರುಳಿದಂತೆ
ಅಂತಃಕಲಹ ಅಧಿಕವಾಯಿತು.
ಪಂಜರ ಪಕ್ಷಿಯಂತಿದ್ದ ನನಗೂ 
ಅನಿಸಿತು ಈ ಬೆಸುಗೆ ಬೇಡವೆಂದು.


ದೂರ ದಿಗಂತದಲಿ ಹಾರುವ
ರಣಹದ್ದುವಿನ ಜೊತೆ ಸ್ನೇಹ
ಬೆಳೆಸಲು ಹಾರಿಬಿಟ್ಟೆ,
ಜೀವದಾಚೆಗೆ ಬದುಕಬೇಕೆಂದು.

(ಕೃಪೆ:ಕೆಂಡ ಸಂಪಿಗೆ )


Creative Commons License
ದೀವಟಿಗೆ by ಸಂದೀಪ ಫಡ್ಕೆ, ಮುಂಡಾಜೆ is licensed under a Creative Commons Attribution-NonCommercial-NoDerivs 2.5 India License

Comments