೨ಜಿ ತರಂಗಾಂತರ ವಿತರಣೆಯಲ್ಲಿ ನಡೆದಿರುವ ಹಗರಣ ಭಾರತ ಕಂಡ ಅತೀ ದೊಡ್ಡ ಪ್ರಕರಣಗಳಲ್ಲೊಂದು.ಈವರೆಗೆ ದೇಶದ ಇತಿಹಾಸದಲ್ಲಿ ನಡೆದಿರುವ ಎಲ್ಲಾ ಹಗರಣಗಳನ್ನು ಹಿಮ್ಮೆಟ್ಟಿದೆ.ಯುಪಿಎ ಸರ್ಕಾರಕ್ಕೆ ಮತ್ತೊಂದು ಕಳಂಕ ತಟ್ಟಿಂದಂತಾಗಿದೆ.ಪ್ರತಿಪಕ್ಷಗಳು ಇದನ್ನೇ ಚುನಾವಣೆಯ ದಾಳವನ್ನಾಗಿಸಿಕೊಳ್ಳಲು ತುದಿಗಾಲಲ್ಲಿ ನಿಂತಿವೆ.ಬಿಜೆಪಿ ಸೇರಿದಂತೆ ಹಲವು ಪಕ್ಷಗಳು ಜೆಪಿಸಿ (Joint Parliamentory Committee)ಯ ರಚನೆಗೆ ಒತ್ತಾಯಿಸಿಯಾಯಿತು.ಈ ಮಧ್ಯೆ ಸರ್ಕಾರ ಪಿಎಸಿ (Public Accounts Committee) ಗೆ ಹಗರಣದ ಕುರಿತು ತನಿಖೆ ನಡೆಸಲು ಸೂಚಿಸಿತು.ಇಷ್ಟೇಯಲ್ಲದೆ ಸಿಎಜಿ (Comptroller and Audit General of India) ಸಲ್ಲಿಸಿದ ವರದಿ ಪ್ರಕಾರ ಸುಮರು ೧.೭೬ ಲಕ್ಷ ಕೋಟಿ ರುಪಾಯಿಗಳ ಭಾರೀ ನಷ್ಟದ ಲೆಕ್ಕ ನಿಬ್ಬೆರಗಾಗುವಂತೆ ಮಾಡಿತು.ಬಿಜೆಪಿ ಮತ್ತು ಎನ್ ಡಿ ಎ ಯ ಮಿತ್ರ ಪಕ್ಷಗಳಾದ ಎಐಎಡಿಎಂಕೆ ,ಸಮಾಜವಾದಿ ಪಾರ್ಟಿ,ಬಿಜೆಡಿಗಳು ಸ್ವತಂತ್ರ ಭಾರತದ ದೊಡ್ಡ ಹಗರಣವೆಂದು ಸಾಬೀತು ಮಾಡಲು ಮುಂದಾದವು.ದೂರ ಸಂಪರ್ಕ ಸಚಿವರಾಗಿದ ಎ.ರಾಜಾ ಜೈಲು ಸೇರಿದ್ದು ಮತ್ತಷ್ಟು ಕುತೂಹಲ ಕೆರಳಿಸಿತು.ಮಾಧ್ಯಮಗಳಲ್ಲಿ ಹಠಾತ್ ಬೆಳವಣಿಗೆಯ ಸುದ್ದಿ ಬಿತ್ತರವಾಗಲು ಶುರುವಾಯಿತು.ತರಂಗಾಂತರ ಹರಾಜು ಪ್ರಕ್ರಿಯೆಯಲ್ಲಿ ನಡೆದ ದೋಷ ಯುಪಿಎ ಸರ್ಕಾರವನ್ನೆ ಅಲುಗಾಡುವಂತೆ ಮಾಡಿತು.ವಿಚಾರಣೆ ನಡೆಯುತ್ತಿದ್ದಂತೆ ಹಿಂದಿನ ವಿತ್ತ ಸಚಿವ ಪಿ.ಚಿದಂಬರಂ, ಕನ್ನಿಮೋಳಿ ಮತ್ತು ಹಿಂದಿನ ಗೃಹ ಸಚಿವ ಪ್ರಣಬ್ ಮುಖರ್ಜೀ ಹೆಸರು ಕೇಳಲು ಶುರುವಾಯಿತು.
ಸ್ವಾನೆ ಟೆಲಿಕಾಂ,ಯುನಿಟೆಕ್ ವಯರ್ ಲೆಸ್ ಮತ್ತು ಲೂಪ್ ಟೆಲಿಕಾಂಗಳಂತಹ ಟೆಲಿಕಾಂ ಕ್ಷೇತ್ರದಲ್ಲಿ ಪರಿಚಿತವಲ್ಲದ ಕಂಪನಿಗಳಿಗೆ ೨೦೦೮ರಲ್ಲಿ ತರಂಗಾಂತರಗಳನ್ನು ೨೦೦೧ರಲ್ಲಿನ ದರದಲ್ಲಿ ವಿತರಿಸಿದ್ದು ಚರ್ಚೆಗೆ ಗ್ರಾಸವಾಯಿತು.ಈ ಸಂಬಂಧ ಯಾವುದೇ ಹರಾಜು ಪ್ರಕ್ರಿಯೆ ನಡಿದಿರಲಿಲ್ಲ. ಮಾಹಿತಿಗಳ ಪ್ರಕಾರ Telecom Regulatory Authority of India (TRAI) ಮತ್ತು ಇತರೆ ಸಚಿವಾಲಯಗಳ ಅಭಿಪ್ರಾಯವನ್ನು ಪರಿಗಣಿಸದೇ ಈ ಸಂಸ್ಥೆಗಳಿಗೆ ಹಕ್ಕುಗಳನ್ನು ನೀಡಲಾಗಿತ್ತು.ಪ್ರಥಮ ಆದ್ಯತೆಯ ಮೇರೆಗೆ ಹಂಚಿದ ತರಂಗಾತರಗಳನ್ನು ವಿದೇಶಿ ಕಂಪನಿಗಳಿಗೆ ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡಿ ಹಣಗಳಿಸಿಕೊಂಡಿದ್ದು ಈಗ ಇತಿಹಾಸ.ಈ ಹಗರಣದಿಂದಾಗಿ ಕೆಲವರು ಜೈಲು ಸೇರಿದ್ದು ತನಿಖೆ ಪೂರಕ ವರದಿ ಕೊಟ್ಟಲ್ಲಿ ಇನ್ನಷ್ಟು ನಿಜಾಂಶ ಹೊರಬರಬಹುದು.
ಮುಂಜಾವಿನ ತೆಕ್ಕೆಯೊಳು ಹಸಿರುಟ್ಟ ಭೂರಮೆಯ ಒಡಲಲ್ಲಿ ಹನಿಯುತಿವೆ ಹನಿಗಳು ಸಾಲು ಸಾಲಾಗಿ... ಮರ-ಗಿಡಗಳ ಎಲೆಗಳ ಮೇಲೆ ದೃಶ್ಯವಾಗುತ್ತವೆ ದಣಿದ-ಮಣಿದ ಮೈ-ಮನಕ್ಕೆ ಜೀವ ತುಂಬುತ್ತವೆ ಪನ್ನೀರ ಪಸರುತ್ತಾ... ಅಲ್ಪಾಯುಷಿಯಾದರು ದೀಪದ ಬುಡ್ಡಿಯಂತೆ ಉದಾರ ಗುಣ ಚಳಿಯನ್ನೂ ಲೆಕ್ಕಿಸದೇ ಅವಿರತ ದುಡಿಮೆ... ಬೆಳಕಿನ ಪರದೆ ಸರಿದಂತೆ ಮತ್ತಷ್ಟು ಮೆರುಗು ಕ್ಷಣಮಾತ್ರದಲ್ಲಿ ಜೀವದ ಹಂಗು ತೊರೆದು ಮಂಗ ಮಾಯ... ತನ್ನ ಶಾಂತ ಚಿತ್ತ ಸೌಮ್ಯ ಸ್ವಭಾವ ಮತ್ತೆ ಹುಟ್ಟಲು ಕಾರಣ ಇಬ್ಬನಿ ಇರಿಯುವುದಿಲ್ಲ ಇಹ-ಪರರ ... ದೀವಟಿಗೆ by Sandeep Phadke is licensed under a Creative Commons Attribution-NonCommercial-NoDerivs 2.5 India License .
Comments