ಬ್ರಿಟೀಷರ ಸಂಕೋಲೆಯಿಂದ ಬಂಧ-ಮುಕ್ತವಾದ ನಂತರ ನಮ್ಮ ದೇಶ ಅನೇಕ ಚಳುವಳಿಗೆ ಸಾಕ್ಷಿಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದಕ್ಕೆ ಅವಕಾಶವೂ ಇದೆ. ಜನರ ನಸುವಿನ ಸಮಸ್ಯೆಗಳು ಪರಿಹಾರ ಕಂಡುಕೊಳ್ಳದೆ ಇದ್ದಾಗ, ಉಗ್ರ ರೂಪಕ್ಕೆ ಪರಿವರ್ತನೆಗೊಂಡು ಸತ್ಯಾಗ್ರಹ-ಹರತಾಳ-ಆಂದೋಲನದ ಹಾದಿ ತುಳಿಯುತ್ತದೆ.ತಾವೇ ಆರಿಸಿ,ಆಡಳಿತ ನಡೆಸುವ ಅವಕಾಶ ಕೊಟ್ಟೀರುವಗ,ಬಗೆಹರಿಯದ ಸಮಸ್ಯೆಗಳಿಗೆ ಉತ್ತರ ಹುಡುಕುವ ಗೋಜಿಗೆ ಹೋಗದ ಮಂತ್ರಿ ಮಹೋದಯರಿಗೆ ಹಿಡಿ ಶಾಪ ಹಾಕದೆ ಇರುವರೇ..? ಜನ ಲೋಕಪಾಲ ಮಸೂದೆ ಜಾರಿಯಲ್ಲೂ ಅದೇ ರಾಗ-ತಾಳ.
ಇಡೀ ದೇಶವೇ ಮಸೂದೆ ಜಾರಿಯಗಲೆಂದು ಟೊಂಕ ಕಟ್ಟೀ ನಿಂತಿದೆ. ಇದರಿಂದ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವೆನ್ನುವುದು ಜನಾಭಿಪ್ರಾಯ.ಈ ಚಳುವಳಿಯ ನಾಯಕತ್ವ ವಹಿಸಿರುವ ಸಮಾಜ ಸೇವಕ ಅಣ್ಣಾ ಹಜಾರೆ, ದೇಶ ಅತಿ ಗೌರವದಿಂದ ಕಾಣುತ್ತಿರುವ ಗಾಂಧೀವಾದಿ.ಅಬಾಲ-ವೃದ್ಧರೆನ್ನದೆ ಚಳುವಳಿಯಲ್ಲಿ ಪಾಲ್ಗೊಳುತ್ತಿರುವ ಜನರಿಂದಾಗಿ ಕೇಂದ್ರ ಸರಕಾರ ತಲೆ ತಗ್ಗಿಸುವಂತಾಗಿದೆ. ಈ ಚಳುವಳಿ ಸಫಲವಾದಲ್ಲಿ, ಅತೀ ದೊಡ್ಡ ಪ್ರಜಾತಂತ್ರ ದೇಶವೆಂದು ಮತ್ತೆ ಸಾಬೀತುಪಡಿಸಿದಂತಾಗುತ್ತದೆ. ದೇಶದ ಹಿತಕ್ಕಾಗಿ ದುಡಿಯುತ್ತಿರುವ ಅಸಂಖ್ಯ ಜನರಿಗೆ ಅಭಿನಂದನೆ ಸಲ್ಲಿಸಲೇ ಬೇಕು.
ಮುಂಜಾವಿನ ತೆಕ್ಕೆಯೊಳು ಹಸಿರುಟ್ಟ ಭೂರಮೆಯ ಒಡಲಲ್ಲಿ ಹನಿಯುತಿವೆ ಹನಿಗಳು ಸಾಲು ಸಾಲಾಗಿ... ಮರ-ಗಿಡಗಳ ಎಲೆಗಳ ಮೇಲೆ ದೃಶ್ಯವಾಗುತ್ತವೆ ದಣಿದ-ಮಣಿದ ಮೈ-ಮನಕ್ಕೆ ಜೀವ ತುಂಬುತ್ತವೆ ಪನ್ನೀರ ಪಸರುತ್ತಾ... ಅಲ್ಪಾಯುಷಿಯಾದರು ದೀಪದ ಬುಡ್ಡಿಯಂತೆ ಉದಾರ ಗುಣ ಚಳಿಯನ್ನೂ ಲೆಕ್ಕಿಸದೇ ಅವಿರತ ದುಡಿಮೆ... ಬೆಳಕಿನ ಪರದೆ ಸರಿದಂತೆ ಮತ್ತಷ್ಟು ಮೆರುಗು ಕ್ಷಣಮಾತ್ರದಲ್ಲಿ ಜೀವದ ಹಂಗು ತೊರೆದು ಮಂಗ ಮಾಯ... ತನ್ನ ಶಾಂತ ಚಿತ್ತ ಸೌಮ್ಯ ಸ್ವಭಾವ ಮತ್ತೆ ಹುಟ್ಟಲು ಕಾರಣ ಇಬ್ಬನಿ ಇರಿಯುವುದಿಲ್ಲ ಇಹ-ಪರರ ... ದೀವಟಿಗೆ by Sandeep Phadke is licensed under a Creative Commons Attribution-NonCommercial-NoDerivs 2.5 India License .
Comments