Skip to main content

-: ನಾಕು ಹನಿಗಳು :-

------೧------
ಬಯಕೆಗಳೆಂದರೆ ಅಷ್ಟೇ 
ಚಿಗುರೊಡೆವ ಮುನ್ನ ಕಾತರಿಸಿ 
ನಂತರ ಅಸಹಜತೆಯ ಕಡೆ 
ಮುಖ ಮಾಡಿಸುತ್ತವೆ....



------೨------
ಮೆತ್ತನೆಯ ಹಾಸಿಗೆ
ಅಗರಬತ್ತಿ ಘಮಲು 
ಬಿಡಿ ಹೂವುಗಳಿಗೆ 
ಸುಖ-ದುಃಖಗಳ 
ಜೊತೆಗೇನು ಸರಸಾಟ...?

------೩------
ನಿದ್ದೆಯಲ್ಲೇ ಬಂದೆರಗುವ 
ಕನಸುಗಳಂತೆ 
ಆಟ-ಪಾಠಗಳಲ್ಲಿ 
ತಲ್ಲಿನರಾಗಿರುವಾಗಲೇ 
ಎಡತಾಕುವ ಯೌವ್ವನ...


------೪------
ಗೊತ್ತು ಗುರಿಯಿಲ್ಲದ 
ಜೀವನಕ್ಕೆ
ಭೂತ-ಭವಿಷ್ಯತ್ತಿನ 
ವರ್ತಮಾನ ಯಾಕೆ..?

Comments

Popular posts from this blog

ಯುವ ಜನತೆ ಮತ್ತು ಸಾಮಾಜಿಕ ತಾಣಗಳು

        ಸಂ ಪರ್ಕ ಮಾಧ್ಯಮಗಳು ಒಂದೆರಡಲ್ಲ,ಹಲವು ಬಗೆಯವು.ಅನಾದಿಕಾಲದಿಂದಲೂ ಇಂತಹ ಮಾಧ್ಯಮಗಳು ಜಾರಿಯಲ್ಲಿವೆ. ಕಾಲ ಬದಲಾದಂತೆ ಶೀಘ್ರ ಸಂಪರ್ಕ ಕಲ್ಪಿಸಬಹುದಾದ ಸಾಧನಗಳು ಬರಲಾರಂಭಿಸಿದವು.ಇಂದಿನ ಈ-ಮೇಲ್,ಸಾಮಾಜಿಕ ತಾಣಗಳು (ಫೇಸ್ ಬುಕ್,ಟ್ವಿಟ್ಟರ್..) ಪ್ರಚಲಿತ ಸಾಧನಗಳು.ಆದರೆ ಸಾಂಪ್ರದಾಯಿಕ ಪತ್ರ ವ್ಯವಹಾರಕ್ಕೆ ಇದ್ದ ಗೈರತ್ತು ಈ ಮಾಧ್ಯಮಗಳಲ್ಲಿ ಕಾಣುವುದು ಕಷ್ಟ.ಆದರೆ ಹೊಸತನಕ್ಕೆ ಅಂಟಿಕೊಳ್ಳುವ ಅನಿವಾರ್ಯತೆ ಬೇರೆಯದೇ ಪ್ರಪಂಚಕ್ಕೆ ಕರೆದೊಯ್ಯುತ್ತವೆ.ಎಲ್ಲೋ-ಎಂದೋ ಭೇಟಿಯಾದವರು, ಯಾವುದೋ ಊರಿನಲ್ಲಿರುವವರು ಹೀಗೆ ಹತ್ತು ಹಲವು ಕಾರಣಗಳಿಂದ ದೂರವಾದವರನ್ನು ಹತ್ತಿರಕ್ಕೆ,ಸದಾ ಸಂಪರ್ಕದಲ್ಲಿರುವಂತೆ ಮಾಡುವ ಛಾತಿ ಸಾಮಾಜಿಕ ತಾಣಗಳಂತಹ ಅಂತರ್ಜಾಲ ಸಂಬಂಧಿ ವ್ಯವಸ್ಥೆಗಳಿಗಿವೆ.ವಯಸ್ಸಿನ ಅಂತರವಿಲ್ಲದೇ ಎಲ್ಲರನ್ನು ಆಕರ್ಷಿಸುವ ತಾಣಗಳು ಮನೆ-ಮನಗಳಲ್ಲಿ ಹಸುರಾಗಿವೆ.ಇವುಗಳ ಬಳಕೆ ಹೆಚ್ಚಾಗುತ್ತಲೇ ಇದೆ.ಒಂದು ಘಳಿಗೆಯೂ ಬಿಟ್ಟು ಇರಲಾರದಷ್ಟು ಪ್ರಭಾವ ಬೀರಿವೆ.ಭಾರತ ಫೇಸ್ ಬುಕ್ ಬಳಕೆಯಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ.        ಯುವ ಜನಾಂಗ ಈ ತಾಣಗಳ ಅತಿ ಹೆಚ್ಚು ಬಳಕೆ ಮಾಡುತ್ತಿರುವುದು ಗೊತ್ತಿರುವ ವಿಚಾರವೆ.ಗೆಳೆಯರ ಬಳಗ ಕಟ್ಟಿಕೊಳ್ಳುವ ಆಸಕ್ತಿ ಹೆಚ್ಚಿಸುತ್ತಿರುವ ಸಾಮಾಜಿಕ ತಾಣಗಳು ಓದಿನ ಮೇಲಿರಬೇಕಾದ ಗಮನ ಕುಂಠಿತಗೊಳಿಸುತ್ತಿದೆ ಎಂಬ ಅಭಿಪ್ರಾಯಗಳು ಕೇಳಿಬರು...

ಗೋಡೆಗಳಿಲ್ಲ...!

(ಕವಿ ಗೋಷ್ಠಿ- ಬೆಳ್ತಂಗಡಿ ತಾ|| 11ನೇ ಕನ್ನಡ ಸಾಹಿತ್ಯ ಸಮ್ಮೇಳನ, ಮುಂಡಾಜೆ :: 20-12-2011) ದೂರವಾದಂತೆ ನೆನಪಾಗುತ್ತವೆ ಹಳೆಯ, ಬಣ್ಣ ಮಾಸಿದ ಗಟ್ಟಿ ಗೋಡೆಗಳು. ಆದರೆ, ನೆಲೆಗಾಣುವ ನಿರೀಕ್ಷೆಯಲಿ ತೆರೆದುಕೊಳ್ಳುವ ಹೆಬ್ಬಾಗಿಲಿಗೆ, ಗೋಡೆಗಳೆಂಬುದು ಮರೀಚಿಕೆ. ಅನುಕಂಪ, ಮಾನ-ಮರ್ಯಾದೆ ಬೊಗಸೆಯಲಿ ಬಚ್ಚಿಡುವ ಇನ್ನಿಲ್ಲದ ಧಾವಂತ. ದುರುಪಯೋಗವಾಗಬಹುದು ನಡು ರಾತ್ರಿ-ಹಗಲೆನ್ನದೆ, ಕಾಮಲೆ ಕಣ್ಣೆಗೆ, ಗೋಡೆಗಳಿಲ್ಲ ರಕ್ಷಣೆಗೆ. ಇಲ್ಲಿ ಗೋಡೆಗಳಿಲ್ಲ... ನೋಡುವವರು ಅದೆಷ್ಟೋ ಜನ ನಮ್ಮ ಆಟ, ಭಯ, ಆತಂಕ, ಅವಮಾನದ ವರಸೆ. ಬಯಸಿ ಬಂದವರಂತೆ ನಾವೂ ನಡೆಯುತ್ತೇವೆ ಅನಿವಾರ್ಯದ ಅಂಕದಲಿ. ನೂರು ಆಸೆಗಳನು ಹೊತ್ತು, ಟೊಂಕ ಕಟ್ಟಿ ನಿಂತವರು, ಬಳಲಿ-ಬೆಂಡಾಗುವವರೆಗೆ, ದಿಶೆ ತಪ್ಪುವವರೆಗೆ, ಅನಿರ್ದಿಷ್ಟ ಕಾಲದ ತೀರದ ಪಯಣ. ಗೋಡೆಗಳಿಲ್ಲ ಅಡೆ-ತಡೆಗೆ. ಕಣ್ಣಾ-ಮುಚ್ಚಾಲೆ ಆಟದಂತೆ ಭ್ರಷ್ಟ ಆಚಾರಗಳನ್ನು ಕದ್ದು-ಮುಚ್ಚಿ ಪರಿಪಾಲಿಸಿದರೂ, ಕೈಗೆ ಬೇಡಿ ನಿಶ್ಚಿತ. ನೋಡುತ್ತಿರುತ್ತಾರೆ ಸಹಸ್ರಾರು ಕಂದೀಲು ಹಿಡಿದು ಜನ. ಗೋಡೆಗಳೆಂಬುದು ನಿಮಿತ್ತ. ಅನುಭೋಗದ ಬದುಕು ಬೀದಿಗೆ ಬಂದಿದೆ. ಜೀವನ ಮೌಲ್ಯ ಅರಿಯದ ಜೀವಗಳು ಹೊಡೆದಾಡುತ್ತಿವೆ. ಇರಬೇಕಾದಲ್ಲಿ ಇಲ್ಲ ನಾಲ್ಕು ಗೋಡೆಗಳು.               ...

-: ಮುತ್ತಿನ ಹನಿಗಳು :-

------೧------ ಚುಂ- ಬನಕ್ಕೆ ಲಗ್ಗೆಯಿಡುವ ಯುವ ಜೋಡಿಗಳು ಅದೆಂತಹ ಪ್ರಕೃತಿ ಆರಾಧಕರು..! ------೨------ ಹೂದೋಟದಲ್ಲಿ ಕಾಣದ ಪತಂಗಗಳು ಯಥೇಚ್ಛ ಮಧು ಸವಿಯಲು ಯುವತಿಯರ ಹಿಂದೆ ಬಿದ್ದಿವೆಯಂತೆ..!