Skip to main content

ಅಂಗೈಯಗಲದ ಕಥೆಗಳು


೧. ಮೀನು ಹಿಡಿಯಲು, ಗಾಳದ ಜೊತೆ ನದಿ ತಟಕ್ಕೆ ಹೋಗಿದ್ದ. ಸಂಜೆಯಾದರೂ ಬಾರದೇ ಇದ್ದಾಗ ಹುಡುಕಾಟ ಶುರುವಾಯಿತು. ಉದ್ರಿಕ್ತ ಮೀನುಗಳೇ ಸಾಯಿಸಿವೆ ಎಂದು ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಈಗ ಕೊಲೆಗಾರ ಮೀನು ಸಿಗುವುದು ಕಷ್ಟವೆನ್ನುತ್ತಿದ್ದಾರೆ!!

-------------------------------------------------------------------------------------------
೨. ಮಳೆ ಬರುವ ತಯಾರಿಯಾಗಿತ್ತು. ಆಟವಾಡುತ್ತಿದ್ದ ಮಗುವೊಂದು ದೂರದಲ್ಲಿ ನಿಂತಿದ್ದ ತಾಯಿಯೆಡೆಗೆ ಹಾದಿ ತುಳಿದಿತ್ತು. ಆದರೆ ಅರ್ಧ ದಾರಿ ಬರುವಷ್ಟರಲ್ಲಿ ಜೋರಾಗಿ ಅಳಲಾರಂಭಿಸಿತು. ಏನೆಂದು ಗ್ರಹಿಸಲಾಗದೆ ತಾಯಿ ಕಂಗಾಲಾಗಿ ಹೋದಳು. ಸವೆದ ಚಪ್ಪಲಿ ಹಾಕಿಕೊಂಡಿದ್ದ ಮಗುವಿಗೆ, ಇನ್ನಷ್ಟು ದೂರ ಓಡಿದರೆ ಕಾಲು ಸವೆಯಲು ಶುರುವಾದೀತೆಂಬ ಭಯ ಕಾಡುತ್ತಿತ್ತಂತೆ.
-------------------------------------------------------------------------------------
೩. ಆಕೆ ಡಾನ್ಸರ್, ರಿಯಾಲಿಟಿ ಷೋವಲ್ಲಿ ಕೋಟಿ ಬಾಚಲು ಅದ್ಭುತ ಪ್ರದರ್ಶನ ನೀಡುತ್ತಿದ್ದಳು. ನಾಡಿನೆಲ್ಲೆಡೆ ಅಭಿಮಾನಿಗಳ ಬಳಗವೂ ಬೆಳೆದಿತ್ತು. ಆದರೆ ಓಮ್ಮೆ ಅವಮಾನವಾಗಿ, ಆಕೆ ಕೂಗಾಡಿದ ದೃಶ್ಯಗಳು ಬಿತ್ತರವಾಗಿದ್ದವು. ಇದರಿಂದಾಗಿ ಕಣ್ಣೀರೇ ಹಾಕದವಳು ಮಾನಸಿಕವಾಗಿ ನೊಂದು ಹೋದಳು. ಮೊನ್ನೆ ಅವಳ ಆತ್ಮಕ್ಕೆ ಶಾಂತಿ ಕೋರಿ ಮೌನ ಪ್ರಾರ್ಥನೆ ನಡೆಯಿತು.
------------------------------------------------------------------------------------


Comments

Popular posts from this blog

ಯುವ ಜನತೆ ಮತ್ತು ಸಾಮಾಜಿಕ ತಾಣಗಳು

        ಸಂ ಪರ್ಕ ಮಾಧ್ಯಮಗಳು ಒಂದೆರಡಲ್ಲ,ಹಲವು ಬಗೆಯವು.ಅನಾದಿಕಾಲದಿಂದಲೂ ಇಂತಹ ಮಾಧ್ಯಮಗಳು ಜಾರಿಯಲ್ಲಿವೆ. ಕಾಲ ಬದಲಾದಂತೆ ಶೀಘ್ರ ಸಂಪರ್ಕ ಕಲ್ಪಿಸಬಹುದಾದ ಸಾಧನಗಳು ಬರಲಾರಂಭಿಸಿದವು.ಇಂದಿನ ಈ-ಮೇಲ್,ಸಾಮಾಜಿಕ ತಾಣಗಳು (ಫೇಸ್ ಬುಕ್,ಟ್ವಿಟ್ಟರ್..) ಪ್ರಚಲಿತ ಸಾಧನಗಳು.ಆದರೆ ಸಾಂಪ್ರದಾಯಿಕ ಪತ್ರ ವ್ಯವಹಾರಕ್ಕೆ ಇದ್ದ ಗೈರತ್ತು ಈ ಮಾಧ್ಯಮಗಳಲ್ಲಿ ಕಾಣುವುದು ಕಷ್ಟ.ಆದರೆ ಹೊಸತನಕ್ಕೆ ಅಂಟಿಕೊಳ್ಳುವ ಅನಿವಾರ್ಯತೆ ಬೇರೆಯದೇ ಪ್ರಪಂಚಕ್ಕೆ ಕರೆದೊಯ್ಯುತ್ತವೆ.ಎಲ್ಲೋ-ಎಂದೋ ಭೇಟಿಯಾದವರು, ಯಾವುದೋ ಊರಿನಲ್ಲಿರುವವರು ಹೀಗೆ ಹತ್ತು ಹಲವು ಕಾರಣಗಳಿಂದ ದೂರವಾದವರನ್ನು ಹತ್ತಿರಕ್ಕೆ,ಸದಾ ಸಂಪರ್ಕದಲ್ಲಿರುವಂತೆ ಮಾಡುವ ಛಾತಿ ಸಾಮಾಜಿಕ ತಾಣಗಳಂತಹ ಅಂತರ್ಜಾಲ ಸಂಬಂಧಿ ವ್ಯವಸ್ಥೆಗಳಿಗಿವೆ.ವಯಸ್ಸಿನ ಅಂತರವಿಲ್ಲದೇ ಎಲ್ಲರನ್ನು ಆಕರ್ಷಿಸುವ ತಾಣಗಳು ಮನೆ-ಮನಗಳಲ್ಲಿ ಹಸುರಾಗಿವೆ.ಇವುಗಳ ಬಳಕೆ ಹೆಚ್ಚಾಗುತ್ತಲೇ ಇದೆ.ಒಂದು ಘಳಿಗೆಯೂ ಬಿಟ್ಟು ಇರಲಾರದಷ್ಟು ಪ್ರಭಾವ ಬೀರಿವೆ.ಭಾರತ ಫೇಸ್ ಬುಕ್ ಬಳಕೆಯಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ.        ಯುವ ಜನಾಂಗ ಈ ತಾಣಗಳ ಅತಿ ಹೆಚ್ಚು ಬಳಕೆ ಮಾಡುತ್ತಿರುವುದು ಗೊತ್ತಿರುವ ವಿಚಾರವೆ.ಗೆಳೆಯರ ಬಳಗ ಕಟ್ಟಿಕೊಳ್ಳುವ ಆಸಕ್ತಿ ಹೆಚ್ಚಿಸುತ್ತಿರುವ ಸಾಮಾಜಿಕ ತಾಣಗಳು ಓದಿನ ಮೇಲಿರಬೇಕಾದ ಗಮನ ಕುಂಠಿತಗೊಳಿಸುತ್ತಿದೆ ಎಂಬ ಅಭಿಪ್ರಾಯಗಳು ಕೇಳಿಬರು...

ಗೋಡೆಗಳಿಲ್ಲ...!

(ಕವಿ ಗೋಷ್ಠಿ- ಬೆಳ್ತಂಗಡಿ ತಾ|| 11ನೇ ಕನ್ನಡ ಸಾಹಿತ್ಯ ಸಮ್ಮೇಳನ, ಮುಂಡಾಜೆ :: 20-12-2011) ದೂರವಾದಂತೆ ನೆನಪಾಗುತ್ತವೆ ಹಳೆಯ, ಬಣ್ಣ ಮಾಸಿದ ಗಟ್ಟಿ ಗೋಡೆಗಳು. ಆದರೆ, ನೆಲೆಗಾಣುವ ನಿರೀಕ್ಷೆಯಲಿ ತೆರೆದುಕೊಳ್ಳುವ ಹೆಬ್ಬಾಗಿಲಿಗೆ, ಗೋಡೆಗಳೆಂಬುದು ಮರೀಚಿಕೆ. ಅನುಕಂಪ, ಮಾನ-ಮರ್ಯಾದೆ ಬೊಗಸೆಯಲಿ ಬಚ್ಚಿಡುವ ಇನ್ನಿಲ್ಲದ ಧಾವಂತ. ದುರುಪಯೋಗವಾಗಬಹುದು ನಡು ರಾತ್ರಿ-ಹಗಲೆನ್ನದೆ, ಕಾಮಲೆ ಕಣ್ಣೆಗೆ, ಗೋಡೆಗಳಿಲ್ಲ ರಕ್ಷಣೆಗೆ. ಇಲ್ಲಿ ಗೋಡೆಗಳಿಲ್ಲ... ನೋಡುವವರು ಅದೆಷ್ಟೋ ಜನ ನಮ್ಮ ಆಟ, ಭಯ, ಆತಂಕ, ಅವಮಾನದ ವರಸೆ. ಬಯಸಿ ಬಂದವರಂತೆ ನಾವೂ ನಡೆಯುತ್ತೇವೆ ಅನಿವಾರ್ಯದ ಅಂಕದಲಿ. ನೂರು ಆಸೆಗಳನು ಹೊತ್ತು, ಟೊಂಕ ಕಟ್ಟಿ ನಿಂತವರು, ಬಳಲಿ-ಬೆಂಡಾಗುವವರೆಗೆ, ದಿಶೆ ತಪ್ಪುವವರೆಗೆ, ಅನಿರ್ದಿಷ್ಟ ಕಾಲದ ತೀರದ ಪಯಣ. ಗೋಡೆಗಳಿಲ್ಲ ಅಡೆ-ತಡೆಗೆ. ಕಣ್ಣಾ-ಮುಚ್ಚಾಲೆ ಆಟದಂತೆ ಭ್ರಷ್ಟ ಆಚಾರಗಳನ್ನು ಕದ್ದು-ಮುಚ್ಚಿ ಪರಿಪಾಲಿಸಿದರೂ, ಕೈಗೆ ಬೇಡಿ ನಿಶ್ಚಿತ. ನೋಡುತ್ತಿರುತ್ತಾರೆ ಸಹಸ್ರಾರು ಕಂದೀಲು ಹಿಡಿದು ಜನ. ಗೋಡೆಗಳೆಂಬುದು ನಿಮಿತ್ತ. ಅನುಭೋಗದ ಬದುಕು ಬೀದಿಗೆ ಬಂದಿದೆ. ಜೀವನ ಮೌಲ್ಯ ಅರಿಯದ ಜೀವಗಳು ಹೊಡೆದಾಡುತ್ತಿವೆ. ಇರಬೇಕಾದಲ್ಲಿ ಇಲ್ಲ ನಾಲ್ಕು ಗೋಡೆಗಳು.               ...

-: ಮುತ್ತಿನ ಹನಿಗಳು :-

------೧------ ಚುಂ- ಬನಕ್ಕೆ ಲಗ್ಗೆಯಿಡುವ ಯುವ ಜೋಡಿಗಳು ಅದೆಂತಹ ಪ್ರಕೃತಿ ಆರಾಧಕರು..! ------೨------ ಹೂದೋಟದಲ್ಲಿ ಕಾಣದ ಪತಂಗಗಳು ಯಥೇಚ್ಛ ಮಧು ಸವಿಯಲು ಯುವತಿಯರ ಹಿಂದೆ ಬಿದ್ದಿವೆಯಂತೆ..!