ಆಸೆ-ಹತಾಶೆಗಳ ನಡುವಿನ ಜೀವನ ಅದೆಷ್ಟೋ ಪಾಠ ಕಲಿಸುತ್ತದೆ.ಕಾಡುವ ನೋವಿಗೆ ಸಾಂತ್ವನ ಸಿಗದೇ ವಿವಿಲನೆ ಒದ್ದಾಡುವ ಸನ್ನಿವೇಶವೂ ಉಂಟಾಗುತ್ತದೆ.ಸುಖ-ದುಃಖದ ಆಟದ ನಡುವೆ ಎಲ್ಲೋ ಜಿನುಗುವ ಮನಃ ಶಾಂತಿ ಇನ್ನೇನೋ ಮಾಡಲು ಪ್ರೇರೇಪಿಸುತ್ತದೆ.ಇಬ್ಬನಿಗಳ ಸಾಲಿನಂತೆ ಚಿಗುರೋದೇವ ಮನಸ್ಸು ಆಕ್ರಮಣಕಾರಿಯಾಗಿ
ಬಿಡುತ್ತದೆ.ಬದುಕು ಚರ ವಸ್ತುವೆಂದು ಅನಿಸುವುದೇ ಇಲ್ಲ.ನೋಡುಗರ ಕಣ್ಣಿಗೆ ಹಬ್ಬವಾಗಿ ಕಾಣುವ ಹೊತ್ತಿಗೆ ಕಲ ಸರಿದಿರುತ್ತದೆ.ಭಗ್ನ ಕನಸುಗಳು ದೊಂದಿ ಹಿಡಿದು ನಿಂತಿರುತ್ತವೆ.ಯಾವುದರ ಪರಿವೆಯೂ ಇಲ್ಲದಂತೆ ದೇಹ ನೀರವ ಮೌನಕ್ಕೆ ಜಾರುತ್ತದೆ.ಆ ಹೊತ್ತಿನ ಭಾವೋದ್ವೇಗ ಜನ ಮಾನದ ಮರೆಯದಂತೆ ಮಾಡುತ್ತದೆ,ಭಾವನೆಗಳ ಅರ್ಥದ ಸಾಕ್ಷಾತ್ಕಾರವಾಗುತ್ತದೆ.ಇಬ್ಬನಿ ಕರಗುವ ಮುನ್ನ, ಉಸಿರು ನಿಲ್ಲುವ ಮುನ್ನ ಉಂಟಾಗುವ ಭೀತಿ ಒಂದೇ ಅಲ್ಲವೇ...?
------೧------ ಚುಂ- ಬನಕ್ಕೆ ಲಗ್ಗೆಯಿಡುವ ಯುವ ಜೋಡಿಗಳು ಅದೆಂತಹ ಪ್ರಕೃತಿ ಆರಾಧಕರು..! ------೨------ ಹೂದೋಟದಲ್ಲಿ ಕಾಣದ ಪತಂಗಗಳು ಯಥೇಚ್ಛ ಮಧು ಸವಿಯಲು ಯುವತಿಯರ ಹಿಂದೆ ಬಿದ್ದಿವೆಯಂತೆ..!
Comments