ಅವರಿವರ ನಡುವಿನ
ಹೊಯ್ದಾಟಗಳು ಮರೆಮಾಡಿವೆ
ಮೌನ-ಧ್ಯಾನದ ನೆನಪನ್ನು
ಕತ್ತಲೆಯ ಗುಂಗಿನಲಿ
ನಾಳೆಯೆಂಬುವುದು
ಮಾಯವಾದಂತೆ
ದ್ವೇಷ-ವೈಷಮ್ಯಗಳ
ಪ್ರತಿಕಾರ ತೆರೆದಿದೆ
ರಕ್ತ ಕಾರುವ ಕಣ್ಣುಗಳ
ಬಯಲಿನಂಗಳದಲಿ
ನೀರಸೆಲೆಯಿಲ್ಲದೆ
ತುದಿ ಮೊದಲಿಲ್ಲದೆ
ನರ-ನರಗಳಲ್ಲಿ
ಸಂಚಲಿತ ಯುದ್ಢ
ಮರವನ್ನಾವರಿಸಿ
ಸಾಯಿಸಲು ಹೊರಟ
ಬೀಳು-ಬಳ್ಳಿಯಂತೆ
ಆದರೂ,ಅವರಿವರು
ನಾವುಗಳ್ಳೆಲ್ಲಾ
ನಿರಪರಧಿಗಳೇ
ಅವರವರ ಭಾವ
ನಮ್ಮೊಳಗೊಬ್ಬರೆಂದು
ಅನುಭವಿಸಿದಂತೆ
Comments