ಕನಸೆಂದರೆ ಏನೆಂದು
ಅರ್ಥ ತಿಳಿಯದವನ
ಹೆಗಲೇರಿ ಕೂತಿದ್ದಾಳೆ
ನನಸು ಮಾಡೆಂದು..!
* * *
ಮೊದಲ ನೋಟಕ್ಕೆ
ಅವಳ
ಮುಂಗುರುಳ
ಉರುಳಿಗೆ
ಬಿದ್ದಾಯಿತು.
ಈಗ
ಉಸಿರುಗಟ್ಟುತ್ತಿದೆ..!
* * *
ನೀನು ನನ್ನೆದೆಯ ಸಮೀಪ
ಹಾದು ಹೋದಾಗಲೆಲ್ಲಾ
ತಿಂಗಳ ಬೆಳಕಿನ
ಸವಿ ಉಣ್ಣುತ್ತೇನೆ..!
* * *
ಹೆಜ್ಜೆ-ಹೆಜ್ಜೆಗೆ
ನೆನಪಾಗುತ್ತದೆ ಅವಳ
ಗೆಜ್ಜೆ ಸದ್ದು..!
* * *
ಕೂಗಳತೆಯ ದೂರದಲ್ಲಿ
ಕಾಯುತ್ತಿದ್ದಾಳೆ.
ಕೂಗಿ ಕರೆಯುವ ಹಾಗಿಲ್ಲ
ಊರಿಡೀ ಗೊತ್ತಾಗುತ್ತದೆ..!
ಕೃಪೆ : ಕನ್ನಡ ಪ್ರಭ - ಬೈಟು ಕಾಫಿ
ದೀವಟಿಗೆ by ಸಂದೀಪ ಫಡ್ಕೆ, ಮುಂಡಾಜೆ is licensed under a Creative Commons Attribution-NonCommercial-NoDerivs 2.5 India License
Comments