ಸ ಮಾಜದ ಹಿತದೃಷ್ಟಿಯಿಂದ ಜನಾಭಿಪ್ರಾಯ ಸಂಗ್ರಹಿಸುವುದು ಸಾಮಾನ್ಯ. ಪರ-ವಿರೋಧಗಳ ತುಲನೆ ಮಾಡಿ ಅಂತಿಮ ನಿರ್ಣಾಯ ಕೈಗೊಳ್ಳಲಾಗುತ್ತದೆ. ಇತ್ತೀಚೆಗೆ ಸಾಮಾಜಿಕ ತಾಣಗಳು ಅತಿರೇಕದ ಜನಾಭಿಪ್ರಾಯ ಒಟ್ಟುಗೂಡಿಸಲು ಮಾಧ್ಯಮಗಳಾಗುತ್ತಿವೆ. ವೈಯುಕ್ತಿಕ ದಿನಚರಿಯನ್ನೇ ‘ಗೋಡೆ’ ಬರಹವಾಗಿಸಿ ಸ್ನೇಹಿತರ ಪ್ರತಿಕ್ರಿಯೆಗೆ ದಿನವಿಡೀ ಹಪ-ಹಪಿಸುವವರಿದ್ದಾರೆ. ಕೆಲವು ಜಾತಿ-ಧರ್ಮ-ವ್ಯಕ್ತಿಗಳನ್ನು ಹಂಗಿಸುವ, ಛೇಡಿಸುವ ‘ಬೇನಾಮಿ’ಗಳ ಚಟುವಟಿಕೆ ಅಂಕೆಯಿಲ್ಲದ್ದಾಗಿದೆ. ಅವಹೇಳನ, ಪ್ರಚೋದನಕಾರಿ ಪ್ರತಿಕ್ರಿಯೆಗಳು ಭಾವೈಕ್ಯತೆಯನ್ನು ನುಂಗಿಹಾಕುತ್ತಿವೆ. ಇದೆಲ್ಲದರ ಬಗ್ಗೆ ಪ್ರಶ್ನೆ ಮಾಡಲೇಬೇಕೆನ್ನಿಸುವುದು ಸಹಜ.ಕಾಂಗ್ರೆಸ್ ನಾಯಕಿ ಸೋನಿಯಾ ವಿರುದ್ಧ ಫೇಸ್ ಬುಕ್ ನಲ್ಲಿದ್ದ ಮಾಹಿತಿ ಕೇಂದ್ರ ಸಚಿವ ಕಪಿಲ್ ಸಿಬಲ್ ರನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿತು. ವಿಪಕ್ಷಗಳಿಂದ ಲೇವಡಿಗೊಳಗಾದರು. ಅದೇನೇ ಇರಲಿ, ಒಂದು ವಿಷಯ ಚರ್ಚೆಯಾಗಬೇಕಾದರೆ ಕಾರಣಗಳು ಬೇಕು ಎಂದು ಮನವರಿಕೆ ಮಾಡಿಕೊಳ್ಳುವುದು ಉತ್ತಮ. ಬಹುಶಃ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪೂರ್ಣ ಪ್ರಮಾಣದಲ್ಲಿ ಉಪಯೋಗಿಸಿಕೊಂಡಿರುವ ಸಾಮಾಜಿಕ ತಾಣಗಳು ನಿರಂಕುಶ ಪ್ರಭುತ್ವ ಹೊಂದಿವೆ ಎಂದರೆ ತಪ್ಪಾಗಲಾರದು. ಆದರೆ ಇದೀಗ ವಿವಿಧ ಜಾತಿ-ಧರ್ಮ-ಪಂಗಡಗಳು ಇಲ್ಲಿ ನಡೆಯುವ ಧರ್ಮ ವಿರೋಧಕ್ಕೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ಆಕ್ಷೇಪಾರ್ಹ, ನಿಂದನಾತ್ಮಕ ಅಂಶಗಳನ್ನು ತೆಗೆದು ...