Skip to main content

Posts

ನಿರೀಕ್ಷೆ

‘ಅಮ್ಮಾ, ಬಂದಳೇನಮ್ಮಾ...’ ತಿಂಗಳಾಯಿತು ಹೊಸ ಬಟ್ಟೆಗೆ, ಇನ್ನೂ ತೊಡುವ ಭಾಗ್ಯ ಬಂದಿಲ್ಲ. ಎಲ್ಲದಕ್ಕೂ ಯುಗಾದಿ ಬರಬೇಕಂತೆ. ಎಂದು,ಎಂತು ಬರುವಳೋ... ಬಂದು ಹೋಗಿ,ವರುಷ ಕಳೆದು ಯಾದಿಯಲ್ಲಿ ಮೊದಲಾಗಿ ಮತ್ತೆ ಬರುತ್ತಿರುವಳಂತೆ. ಲಜ್ಜೆಯಿಂದ ಹೆಜ್ಜೆಯಿಟ್ಟು, ಮುಡಿಯ ತುಂಬ ಹಸಿರು ಹೊದ್ದು. ಮಂದ್ರ ಮಾರುತದ ಸುಳಿಯಲಿ ನಳನಳಿಸುವ ಸೋದರಿಗಾಗಿ ಕಾಯುತ್ತಿದ್ದೇನೆ. ದಿಡ್ಡಿ ಬಾಗಿಲ ತುಂಬ ಕಣ್ಣ ಪಹರೆ. ಅಮ್ಮ ಮಾಡಿಟ್ಟ ಬಗೆ-ಬಗೆಯ ತಿನಿಸು, ಅಪ್ಪ ತಂದಿಟ್ಟ ಹೊಸ ಪಂಚಾಂಗ, ತಳಿರು-ತೋರಣ, ಚುಕ್ಕಿ ರಂಗೋಲಿ. ಸಾಕಲ್ಲವೇ ಇಷ್ಟು ಅವಳ ಸತ್ಕಾರಕ್ಕೆ ?! ಇನ್ನಾದರೂ ಬರಬಹುದಲ್ಲಾ ಆ ಯುಗಾದಿಗೆ. ಊರು-ಕೇರಿ ತುಂಬಾ ಅವಳದೇ ಪುಕಾರು, ಅಬಾಲವೃದ್ಧರಲ್ಲಿ ಕಾಣುತ್ತಿದೆ- ನನ್ನಂತೆಯೇ ಹುರುಪು-ಚೈತನ್ಯ. ಅದೆಂತಹ ಮೋಡಿಯೋ, ಮೈಮೆಯೋ !! ನವ ಸಂವತ್ಸರದ ಭವಿಷ್ಯ ಬರೆದು, ವಿಕಲ್ಪಗಳ ಎಡರು ತೊಡೆಯಲು, ಕಿವಿಮಾತಿಗೆ ಮಾತು ಬೆರೆಸಲು ಬರುವಳಂತೆ ಯುಗಾದಿ, ನಾಳಿನ ತೇದಿಗೆ. “ಅದೋ ಅಲ್ಲಿ, ಅಪರ ಭಾನು ನಡೆದು ಹೋದ ಚೌಕಿ ಮನೆ ಕಡೆಗೆ. ಯುಗಾದಿಯ ಭವ್ಯ ಸ್ವಾಗತಕ್ಕೆ”. ಅಜ್ಜಿ ಮಾತು ದಿಟವಾದರೆ ಸಾಕು. ‘ಅಮ್ಮಾ, ಯುಗಾದಿ ಬಂದಳೇ...’ ಥಟ್ಟನೆ ಬೇವು-ಬೆಲ್ಲದ ಜೊತೆ ಎದುರುಗೊಂಡಳು – ನನ್ನ ಅಮ್ಮ ಮತ್ತು ನನ್ನ ಯುಗಾದಿ.
Recent posts

ನಿರುತ್ತರ

ನ ನ್ನೊಳಗೆ ಕಾಡುವ ತುಮುಲಗಳಿಗೆ ಅಂಕುಶವಿಟ್ಟು, ಹೊರ ನಡೆಯುವ ವೇಳೆ, ಯಾರದೋ ನಿರ್ದಯೆಯಿಂದ ಮುಳ್ಳಿನ ಹಾಸಿಗೆಯ ಮೇಲೆ ಪವಡಿಸಿದ ಅನುಭವ; ನಡುಗುಡ್ಡೆಯಲ್ಲಿ ಜೀವ ಸೆರೆಯಿಟ್ಟು, ನನ್ನ ಹೊಸಕಿ, ಬಿಸುಡಿದ್ದಾರೆ. ಅಶೀಲ ಕಲ್ಮಶ ಒಳ ಹೊಕ್ಕಿದೆ. ರಸ್ತೆಯುದ್ದಕ್ಕೂ ಪ್ರತಿಭಟನಾಕಾರರು. ಗೂಟದ ಕಾರುಗಳು ನುಸುಳುತ್ತಿವೆ ನಾನಿರುವೆಡೆ. ಆರಕ್ಷಕರು, ಈರಕ್ಷಕರು ಒಂದಾಗಿದ್ದಾರೆ. ಪ್ರಭಾವಳಿಯಂತೆ ನಿಂತಂತಿದೆ ಬೆನ್ನ ಹಿಂದೆ. ನತದೃಷ್ಟೆಯೆಂದರೆ ನಾನೇ ಇರಬೇಕು. ಅನಾಮಧೇಯಳಾಗಿ ಜನರ ಬಾಯಲ್ಲಿ ಹರಿದಾಡುತ್ತಿದೆ ವಿಕೃತ ಕೃತ್ಯ. ಬದುಕುವಾಸೆಗೆ ಬೆಲೆಕೊಟ್ಟು, ಕಾಡುವ ಆ ರಾತ್ರಿಯ ಕರಿ ಛಾಯೆಯಿಂದ ಬೇರ್ಪಟ್ಟು, ಬೆಳಗುವುದೆಂದೋ ಬದುಕು..? (ಕೃಪೆ: ಪಂಜು ) Deevatige by Sandeep Phadke is licensed under a Creative Commons Attribution-NonCommercial 4.0 International License . Based on a work at http://www.deevatige.blogspot.in/ .

ರಾಜಕೀಯದ ‘ಬಂಡವಾಳ’

ಅ ಧಿಕಾರದ ಚುಕ್ಕಾಣಿ ಹಿಡಿಯಲು, ರಾಜಕೀಯ ಪಕ್ಷಗಳಿಗೆ ಜನರ ಬೆಂಬಲ ಅವಶ್ಯಕ. ವಿವಿಧ ಆಶೋತ್ತರಗಳನ್ನು ಈಡೇರಿಸುವ ವಾಗ್ದಾನ ಮಾಡುವ ಇವರಿಗೆ, ಕಿಂಚಿತ್ತು ಸಹಾಯ ಮಾಡುವ ಅವಕಾಶ ನಮ್ಮ ಸಂವಿಧಾನ ಕೊಟ್ಟಿದೆ. ಪ್ರಜಾಪ್ರಭುತ್ವದ ದೃಷ್ಟಿಯಿಂದಲೂ, ನಾಗರಿಕರ ಹಕ್ಕು ಕೇವಲ ಮತದಾನಕಷ್ಟೇ ಸೀಮಿತವಾಗಬಾರದು. ಹಾಗಾಗಿ ಅರ್ಹ ವ್ಯಕ್ತಿ ಯಾ ಪಕ್ಷಕ್ಕೆ ದೇಣಿಗೆಯ ರೂಪದಲ್ಲಿ ಹಣದ ನೆರವನ್ನು ನೀಡಬಹುದು. ಆದರೆ, ಇತ್ತೀಚೆಗೆ ಸಂತ್ರಸ್ತರ ಪರಿಹಾರ ನಿಧಿಗೆ ಅಥವಾ ಸಮಾಜ ಸೇವೆಗೆ ಸಂದಾಯವಾಗುವ ಹಣಕ್ಕಿಂತ ಹೆಚ್ಚು ರಾಜಕೀಯ ಪಕ್ಷಗಳ ಪಾಲಾಗುತ್ತಿದೆ. ಸ್ವಾರ್ಥ ರಕ್ಷಣೆಗಾಗಿ, ಬೃಹತ್ ಉದ್ದಿಮೆದಾರರ ಕಪಿಮುಷ್ಠಿಯಲ್ಲಿ ಪಕ್ಷಗಳು ನಲುಗುತ್ತಿವೆ. ಇದರ ಇನ್ನೊಂದು ಮುಖವೆಂಬಂತೆ ಅಭ್ಯರ್ಥಿ ಯಾ ಪಕ್ಷಕ್ಕೆ ಹಣದ ಹೊಳೆ ಹರಿಯುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲೂ, ಉದ್ಯಮರಂಗ ಚುನಾವಣೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿತ್ತು. ಸದಸ್ಯತ್ವ ಶುಲ್ಕ ಮತ್ತು ವೈಯುಕ್ತಿಕ ದೇಣಿಗೆಯಿಂದ ಚುನಾವಣೆಯ ವೆಚ್ಚ ಭರಿಸಲು ಪಕ್ಷಗಳಿಗೆ ಸಾಧ್ಯವಾಗದೇ ಇದ್ದುದ್ದು ಇದಕ್ಕೆ ಪ್ರಮುಖ ಕಾರಣ. ಕಾಲಕ್ರಮೇಣ ಚುನಾವಣೆಯ ಸಿದ್ಧತೆ ಮತ್ತು ಕಾರ್ಯಗತಗೊಳಿಸುವುದು ದುಬಾರಿಯಾಗುತ್ತಾ ಹೋಯಿತು. 2009ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗೆ ಸರ್ಕಾರ ಸುಮಾರು 1120 ಕೋಟಿ ರೂಪಾಯಿ ವ್ಯಯಿಸಿದೆ. ಅಲ್ಲದೇ, ವಿವಿಧ ಅಭ್ಯರ್ಥಿ ಮತ್ತು ಪಕ್ಷಗಳು ಒಟ್ಟು ಸುಮಾರು 14 ಸಾವಿರ ಕೋಟಿ ಖರ್ಚು ಮಾಡಿರುವುದು ಅಂ

ಒಂದು ಸಾಲಿನ ಕತೆ

ಒಂದೇ ಸಾಲಿನಲ್ಲಿ ಉತ್ತರಿಸಲಾಗದು ಬದುಕೆಂಬ ಕ್ಲಿಷ್ಟ ಪ್ರಶ್ನೆ ಪತ್ರಿಕೆಗೆ. ಆಕಾಶಕ್ಕೆ ಏಣಿ ಇಟ್ಟಂತೆ, ಜೀವಮಾನವೇ ಜಾರಿ ಹೋಗುತ್ತದೆ. ದಿನ, ವಾರ, ತಿಂಗಳು ಕೊನೆಗೆ ಸಾಲು ಸಾಲಾಗಿ. ಪರಿವೆಯೇ ಇಲ್ಲದೆ ಕಳೆದುಹೋಗುತ್ತವೆ, ರಾತ್ರಿ ಬೆಳಗಾದಂತೆ ಸಾಲುಗಳು! ಈ ಸಾಲಿನಲ್ಲಿ ಆಗದ್ದು, ಮುಂದಿನ ಸಾಲಿನಲ್ಲಿ ಮಾಡುವ ಇರಾದೆ, ಪ್ರೌಢಿಮೆಯ ಭ್ರಮೆ ಮೈಮನವಿಡೀ ಹಬ್ಬುತ್ತದೆ, ಕಾಲಾಂತರ ಕಡೆಗಣಿಸಿ. ದಿನ ಎಣಿಸಿ, ಗುಣಿಸಿ, ಭಾಗಿಸುವಷ್ಟರಲ್ಲಿ ಆ ಸಾಲೂ ತುಳಿದಿರುತ್ತದೆ ನಿರ್ಗಮನದ ಹಾದಿ. ಮನಸ್ಸು ಮರುಗುತ್ತದೆ ಸಾಲು ಸಾಲುವುದಿಲ್ಲವೆಂದು. ಖಾಲಿ ಕೈಯಲ್ಲಿ ಬಂದು ಹೋಗುವ ನಮಗೂ, ಸಾಲುಗಳಿಗೂ ವ್ಯತ್ಯಾಸವಿಲ್ಲ. ಇಪ್ಪತ್ತೈದರ ಗುಣಾಕಾರದ ಹಬ್ಬಗಳಿಗೆ ಯಾವ ಸಾಲಿನ ಹಂಗಿಹುದೋ ಜಾಸ್ತಿ ? ಸಾಧನೆ, ಪ್ರತಿಷ್ಠೆಯ ಬೆಂಬತ್ತುವ ನಾವು ಸಾಲುಗಳ ಸಾಲಗಾರರಲ್ಲವೆ ? ನೋಡು-ನೋಡುತ್ತಿದ್ದಂತೆ ಮತ್ತೆ ಬಂದೆರಗುತ್ತದೆ, ಯಾವ ಭಕ್ಷೀಸನ್ನೂ ಬೇಡದೆ ಹೊಸ ಸಾಲು, ಹೊಸ ಸವಾಲು, ಹೊಸ ಅಹವಾಲು..!! (ಕೃಪೆ : ಕನ್ನಡ ಪ್ರಭ ) Deevatige by Sandeep Phadke is licensed under a Creative Commons Attribution-NonCommercial 4.0 International License . Based on a work at http://www.deevatige.blogspot.in/ .

ಸೈಬರ್ ಕ್ರಾಂತಿ ಮಾರಕವೇ?

ಡಿ ಜಿಟಲ್ ತಂತ್ರಜ್ಞಾನವನ್ನು ಬಗಲಲ್ಲಿಟ್ಟುಕೊಂಡು ಇಲೆಕ್ಟ್ರಾನಿಕ್ ಮಾಧ್ಯಮ ಮತ್ತು ಸಾಮಾಜಿಕ ತಾಣಗಳು ವಿಶ್ವವನ್ನೇ ಅಂಗೈಯಲ್ಲಿ ತಂದು ಕೂರಿಸಿವೆ. ಎಲ್ಲ ಕ್ಷೇತ್ರಗಳ ವಿದ್ಯಮಾನ ಮತ್ತು ದೈನಂದಿನ ಬದುಕಿನ ಪುಟ-ಪುಟಗಳು ಮುಕ್ತವಾಗಿ ಹರಡಲು ಅನುವು ಮಾಡಿಕೊಟ್ಟಿದೆ. ಇಷ್ಟೇ ಅಲ್ಲದೇ, ವಿವಿಧ ಸಂಘಟನೆಗಳ ಪ್ರತಿಭಟನೆಗಳಿಗೆ ಕುಮ್ಮಕ್ಕು ನೀಡಲೂ ಇವು ಹಿಂಜರಿಯುವುದಿಲ್ಲ. ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಎಲ್ಲರ ಗಮನ ಸೆಳೆಯುವಂತೆ ಮಾಡುವ ಉದಾರ ಗುಣ ಸೈಬರ್ ಕ್ರಾಂತಿಯ ಬೆನ್ನೆಲುಬು. ವಿವಾದಾತ್ಮಕ ಹೇಳಿಕೆಗಳ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುವ ಮಂದಿಗೆ ಹೇಳಿ ಮಾಡಿಸಿದಂತಿರುವ ಈ ಸಾಮಾಜಿಕ ತಾಣಗಳು, ಜನರ ನಡುವೆ ಪ್ರಭಾವೀ ಮಾಧ್ಯಮವಾಗಿ ಬೆಳೆದು ನಿಂತಿದೆ. ಸಾಮಾಜಿಕ ಮತ್ತು ರಾಜಕೀಯ ಬದಲಾವಣೆ ತರುವಲ್ಲಿ ಇಂತಹ ಡಿಜಿಟಲ್ ಆಂದೋಲನಗಳು ಎಷ್ಟರ ಮಟ್ಟಿಗೆ ಸಹಕಾರಿಯಾಗುತ್ತಿದೆ ಎಂಬುದು ಯಕ್ಷ ಪ್ರಶ್ನೆ. ಆದರೆ ಜನರ ಮುಂದೆ ಹೊಸ ರೀತಿಯಲ್ಲಿ ಬೇಡಿಕೆ, ಅಹವಾಲುಗಳನ್ನು ಮುಂದಿಡಲು ಇದೊಂದು ಸೂಕ್ತ ವೇದಿಕೆಯಾಗಿ ಮಾರ್ಪಡುತ್ತಿದೆ. ಫೇಸ್ ಬುಕ್, ಟ್ವಿಟರ್ ಮೊದಲಾದೆಡೆ ಇದಕ್ಕಾಗಿಯೇ ನಾಯಿಕೊಡೆಯಂತೆ ಖಾತೆಗಳು ದೃಶ್ಯವಾಗುತ್ತವೆ. ಕಡಿಮೆ ವೆಚ್ಚದಲ್ಲಿ, ಎಲ್ಲಿ-ಯಾವಾಗ ಬೇಕಾದರೂ ಅಭಿಪ್ರಾಯ ಹಂಚಿಕೊಳ್ಳಬಹುದಾದರೂ, ಮೇಲ್ನೋಟಕ್ಕೆ ನಾಟಕೀಯವಾಗಿ ಕಾಣದೇ ಇರದು. ಹಿಂದಿನ ಪತ್ರ ವ್ಯವಹಾರದಲ್ಲಿದ್ದ ಕೌತುಕತೆ ಮಿಂಚಂಚೆ

ಜಾರಿ ಹೋಗುವ ಕಾನೂನು

ಕಾ ನೂನಿನ ದೃಷ್ಟಿಯಿಂದ ಎಲ್ಲರೂ ಒಂದೇ. ವಿಶ್ವದ ಅತಿ ದೊಡ್ಡ ಲಿಖಿತ ಸಂವಿಧಾನಾತ್ಮಕ ವ್ಯವಸ್ಥೆಯಿರುವ ಭಾರತದಲ್ಲಿ ಇದು ಎಷ್ಟು ಸತ್ಯವೆನ್ನುವುದು ಮಾತ್ರ ಪ್ರಶ್ನಾರ್ಥಕ. ಉತ್ತಮ ಆಡಳಿತದ ಸೂತ್ರದಂತಿರಬೇಕಾದ ಕಾನೂನು ಯಾರದೋ ಕೈ ಗೊಂಬೆಯಾಗುತ್ತಿದೆ. ದೆಹಲಿ ಅತ್ಯಾಚಾರ ಪ್ರಕರಣದ ಸಂದರ್ಭ, ಕಾನೂನು ಸಮರಕ್ಕೆ ಒಂದಷ್ಟು ಜನ ಜಮಾಯಿಸಿದ್ದರೆ, ಅವರ ವಿರುದ್ಧ ಕಿಡಿಕಾರುವ ಉದ್ಧಟತನ ಸರ್ಕಾರ ತೋರಿತ್ತು. ಬಹುಕೋಟಿ ಹಗರಣಗಳ ಕಳಂಕ ಹೊತ್ತಿದ್ದರೂ, ನಮ್ಮನ್ನು ಆಳುವ ದೊರೆಗಳು ಅದನ್ನೆಲ್ಲಾ ಸಮರ್ಥಿಸಿಕೊಳ್ಳುತ್ತಾರೆ. ಹೀಗೆ ಕಾನೂನಿರುವುದೇ ಮುರಿಯುವುದಕ್ಕೆ ಎಂದಾದರೆ ಹೊಸ ಕಾನೂನು ಜಾರಿಯಾದರೂ ಊಟಕ್ಕಿಲ್ಲದ ಉಪ್ಪಿನಕಾಯಿಯಂತಿರುತ್ತದೆ. ಭ್ರಷ್ಟ ಮತ್ತು ದುರ್ಬಲ ಆಡಳಿತ ಭಾರತೀಯ ರಾಜತಾಂತ್ರಿಕ ವ್ಯವಸ್ಥೆ ಹದಗೆಡಲು ಮೂಲ ಕಾರಣವೆಂದು ಜನಜನಿತವಾಗಿದೆ. ಆದರೂ ಪ್ರತಿ ಚುನಾವಣೆಯ ವೇಳೆ ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆಂಬ ಬೊಗಳೆ ಕೇಳುತ್ತೇವೆ. ಈ ಸಲುವಾಗಿ, ಅಮೂಲ್ಯ ಮತಗಳನ್ನು ಪಡೆಯಲು ಹಣ-ಹೆಂಡ, ಸೀರೆ ಮತ್ತು ಪ್ರವಾಸ ಕೈಗೊಳ್ಳುವ ಕಾರ್ಯಕ್ರಮಗಳು ನಡೆಯುತ್ತಿವೆ. ಆದರೆ ಇದರಿಂದ ಜನರ ಯಾವ ಬೇಡಿಕೆಗಳೂ ಈಡೇರಿದಂತಾಗುವುದಿಲ್ಲ. ಭ್ರಷ್ಟಾಚಾರ ನಿರ್ಮೂಲನೆಗೆ ಕಾನೂನಿನಲ್ಲಿ   ಬದಲಾವಣೆ ಕೋರಿ ಲೋಕಾಯುಕ್ತದ ಬೇಡಿಕೆ ನೆನೆಗುದಿಗೆ ಬಿದ್ದಿದೆ. ವಿಪಕ್ಷಗಳು ಜನರ ಬಾಯಿ ಮುಚ್ಚಿಸಲು ಹರಿಹಾಯುತ್ತವೆ ಹೊರತು ಬದಲಾವಣೆಗೆ ಅ