Skip to main content

ಏನಿದು ತೆಲಂಗಾಣ...?


        ದಿನೇ-ದಿನೇ ಸ್ವತಂತ್ರ ರಾಜ್ಯದ ಕುರಿತಾಗಿ ತೆಲಂಗಾಣ ಹೋರಾಟಗಾರರ ಕೂಗು ಮುಗಿಲು ಮುಟ್ಟುತ್ತಿದೆ.ಈ ಹೋರಾಟ ಇಂದು ನಿನ್ನೆಯದಲ್ಲ.ಹಲವಾರು ಮಂದಿ ಪ್ರಾಣ ತೆತ್ತಿದ್ದಾರೆ. ಆದರೆ ಇನ್ನೂ ಪರಿಹಾರ ಕಂಡುಕೊಳ್ಳುವಲ್ಲಿ ಸಫಲವಾಗಿಲ್ಲ.ತೆಲಂಗಾಣ ಆಂಧ್ರ ಪ್ರದೇಶದ ಒಂದು ಭಾಗ.ಹೈದರಾಬಾದ್ ನಿಜಾಮರು ಇದರ ಆಡಳಿತ ನಡೆಸುತ್ತಿದ್ದರು.ಪ್ರಾಂತೀಯವಾಗಿ ಆಂಧ್ರವನ್ನು ತೆಲಂಗಾಣ,ರಾಯಲಸೀಮ ಮತ್ತು ಆಂಧ್ರ ಕರಾವಳಿಗಳೆಂದು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.ಒಟ್ಟು ೨೩ ಜಿಲ್ಲೆಗಳಲ್ಲಿ ೧೦ ಜಿಲ್ಲೆಗಳು ತೆಲಂಗಾಣದ ತೆಕ್ಕೆಯಲ್ಲಿವೆ.ಸ್ವಾತಂತ್ರ್ಯ ನಂತರ ನಿಜಾಮರು ತಮ್ಮ ರಾಜ್ಯವನ್ನು ವಿಲೀನಗೊಳಿಸಲು ಒಪ್ಪಿರಲಿಲ್ಲ. ಆದರೆ ೧೯೪೮ರಲ್ಲಿ ಒತ್ತಾಯದಿಂದ ಭಾರತ ಸರ್ಕಾರ ಆಂಧ್ರದ ಜೊತೆಗೂಡಿಸಿತು.ಮದ್ರಾಸ್ ರಾಜ್ಯದ ಭಾಗವಗಿದ್ದ ರಾಯಲಸೀಮ ಮತ್ತು ಆಂಧ್ರ ಕರಾವಳಿ ಪ್ರದೇಶಗಳು ತೆಲಂಗಾಣದ ಜೊತೆ ಒಂದುಗೂಡಿದವು.ಆಂಧ್ರ ಪ್ರದೇಶ ರಾಜ್ಯಕ್ಕೆ ಅಸ್ತಿತ್ವ ಸಿಕ್ಕ ನಂತರ ತೆಲಂಗಾಣದ ಕೆಲವು ಭಾಗಗಳು ಕರ್ನಾಟಕ ಮತ್ತು ಮಹಾರಾಷ್ಟ್ರದ ಪಾಲಾದವು.೧೯೬೯ರಿಂದೀಚೆಗೆ ಪ್ರತ್ಯೇಕ ರಾಜ್ಯದ ಚಳುವಳಿ ಉಗ್ರ ರೂಪ ಪಡೆದುಕೊಂಡಿತು.ಉಸ್ಮಾನಿಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರಾರಂಭಿಸಿದ ಚಳುವಳಿಯಲ್ಲಿ ಸಾವಿರಾರು ಜನರು ಭಾಗಿಗಳಾದರು. ಸುಮಾರು ೩೫೦ ಮಂದಿ ಸಾವನ್ನಪ್ಪಿದರು.ಆಂಧ್ರ ಮಾಜಿ ಮುಖ್ಯ ಮಂತ್ರಿ ಚನ್ನ ರೆಡ್ಡಿ ಈ ಚಳುವಳಿಯ ಪೂರ್ಣ ಲಾಭ ಪಡೆದುಕೊಂಡರು.’ತೆಲಂಗಾಣ ಪ್ರಜಾ ಸಮಿತಿ’ ಎಂಬ ಪಕ್ಷ ಕಟ್ಟಿ ಚಳುವಳಿಗೆ ಮತ್ತಷ್ಟು ರಂಗು ತುಂಬಿದರು.ಆ ಹೊತ್ತಿಗೆ ಇಂದಿರಾ ಗಾಂಧಿ ಚನ್ನ ರೆಡ್ಡಿಯನ್ನು ಮು.ಮಂತ್ರಿ ಮಾಡಿ ಚಳುವಳಿಗೆ ಲಗಾಮು ಹಾಕಿದರು.ಇಷ್ಟಕ್ಕೂ ಈ ಚಳುವಳಿಯ ಉದ್ದೇಶ ತೀರ ಭಿನ್ನವಾಗಿದ್ದವು.:
೧. ಸಾಂಸ್ಕೃತಿಕ ಭಿನ್ನತೆ--ನಿಜಾಮರ ಕಾಲದಲ್ಲಿ ಉತ್ತರ ಭಾರತದ ಆಚರಣೆಗಳು ಚಾಲ್ತಿಯಲ್ಲಿದ್ದು,ಆಂಧ್ರಕ್ಕೆ ಒಗ್ಗಿಕೊಳ್ಳುವುದು ತ್ರಾಸದಾಯಕವಾಗಿತ್ತು.
೨.ತೆಲಂಗಾಣದ ಹೆಚ್ಚಿನ ಜನರಿಗೆ ಮೀಸಲಾತಿ ವ್ಯವಸ್ಥೆ ಇತ್ತು. ರಾಜ್ಯದ ವಿಲೀನದಿಂದ ಮೀಸಲಾತಿಗೆ ಪೆಟ್ಟು ಬೀಳಬಹುದೆಂಬ ಹೆದರಿಕೆ.
೩.ಆಂಧ್ರ ಮದ್ರಾಸ್ ಅಧೀನದಲ್ಲಿ ಹೆಚ್ಚು ಬೆಳವಣಿಗೆ ಕಂಡಿತ್ತು.ಅದರ ಜೊತೆ ಸ್ಪರ್ಧೆಗಿಳಿಯುವುದು ತೆಲಂಗಾಣಕ್ಕೆ ಕಷ್ಟ ಸಾಧ್ಯವಾಗಿತ್ತು.
           ಪ್ರಸ್ತುತ ಚಳುವಳಿಯ ಮುಂದಾಳತ್ವ ವಹಿಸಿರುವ ಕೆ.ಚಂದ್ರಶೇಖರ ರಾವ್,೧೯೯೧ರಲ್ಲಿ ತೆಲುಗು ದೇಶಂ ಪಾರ್ಟಿಯ ಸದಸ್ಯ.೨೦೦೧ರಲ್ಲಿ ಟಿಡಿಪಿಯಿಂದ ಹೊರಾಬಂದು ತೆಲಂಗಾಣ ರಾಷ್ಟ್ರ ಸಮಿತಿ(ಟಿ ಆರ್ ಎಸ್) ಕಟ್ಟಲು ಮುಂದಾದರು.ತೆಲಂಗಾಣವನ್ನು ಪ್ರತ್ಯೇಕಿಸುವುದೇ ಇದರ ಮುಖ್ಖ ಉದ್ದೆಶವಾಗಿತ್ತು.ಮುಂದೆ ೨೦೦೪ರ ಚುನಾವಣೆ ಸಮಯದಲ್ಲಿ ವೈ ಎಸ್ ರಾಜಶೇಖರ ರೆಡ್ಡಿ ಕೆಸಿಆರ್ ಜೊತೆ ತೆಲಂಗಾಣ ರಚನೆಯ ಕುರಿತು ಭರವಸೆ ನೀಡಿದರು.ಆದರೆ ಚುನಾವಣೆಯ ನಂತರ ವೈ ಎಸ್ ರಾಜಶೇಖರ ರೆಡ್ಡಿ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ. ಬದಲಾಗಿ ತೆಲಗಾಣದ ವಿರುದ್ಧ ಕಾಂಗ್ರೆಸ್ ಗೆ ವರದಿ ಸಲ್ಲಿಸಿದರು.ಈ ಸಂಬಂಧ ಟಿ ಆರ್ ಎಸ್ ಕಾಂಗ್ರೆಸ್ ನಿಂದ ಬೆಂಬಲ ವಾಪಾಸ್ ಪಡೆದುಕೊಂಡಿತು.ಆ ಹೊತ್ತು ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಸಿಪಿಐ ಟಿ ಆರ್ ಎಸ್ ಬೆಂಬಲಕ್ಕೆ ನಿಂತವು.೨೦೦೯ರಲ್ಲಿ ಕೆಸಿಆರ್ ಉಪವಾಸ ಸತ್ಯಾಗ್ರಹ ಕೈಗೊಂಡಾಗ ಮತ್ತೆ ಚಳುವಳಿ ಹಿಂದಿನ ರೂಪ ಪಡೆದುಕೊಂದಿತು.ಹಲವಾರು ಸಂಘ-ಸಂಸ್ಥೆಗಳು ನೆರವಿಗೆ ಬಂದವು.ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜಸ್ಟೀಸ್ ಬಿ ಎನ್ ಶ್ರೀ ಕೃಷ್ಣ ಒಳಗೊಂಡ ಸಮಿತಿಯನ್ನು ರಚಿಸಿ ವರದಿ ನೀಡಲು ಹೇಳಿತು.೨೦೧೧ ಜನವರಿಯಲ್ಲಿ ವರದಿ ಬಂದಿದೆಯಾದರೂ ರಾಜಕೀಯ ತಿಕ್ಕಾಟದಿಂದಾಗಿ ಪರಿಹಾರ ಕಂಡುಬಂದಿಲ್ಲ.


Comments

Popular posts from this blog

ಯುವ ಜನತೆ ಮತ್ತು ಸಾಮಾಜಿಕ ತಾಣಗಳು

        ಸಂ ಪರ್ಕ ಮಾಧ್ಯಮಗಳು ಒಂದೆರಡಲ್ಲ,ಹಲವು ಬಗೆಯವು.ಅನಾದಿಕಾಲದಿಂದಲೂ ಇಂತಹ ಮಾಧ್ಯಮಗಳು ಜಾರಿಯಲ್ಲಿವೆ. ಕಾಲ ಬದಲಾದಂತೆ ಶೀಘ್ರ ಸಂಪರ್ಕ ಕಲ್ಪಿಸಬಹುದಾದ ಸಾಧನಗಳು ಬರಲಾರಂಭಿಸಿದವು.ಇಂದಿನ ಈ-ಮೇಲ್,ಸಾಮಾಜಿಕ ತಾಣಗಳು (ಫೇಸ್ ಬುಕ್,ಟ್ವಿಟ್ಟರ್..) ಪ್ರಚಲಿತ ಸಾಧನಗಳು.ಆದರೆ ಸಾಂಪ್ರದಾಯಿಕ ಪತ್ರ ವ್ಯವಹಾರಕ್ಕೆ ಇದ್ದ ಗೈರತ್ತು ಈ ಮಾಧ್ಯಮಗಳಲ್ಲಿ ಕಾಣುವುದು ಕಷ್ಟ.ಆದರೆ ಹೊಸತನಕ್ಕೆ ಅಂಟಿಕೊಳ್ಳುವ ಅನಿವಾರ್ಯತೆ ಬೇರೆಯದೇ ಪ್ರಪಂಚಕ್ಕೆ ಕರೆದೊಯ್ಯುತ್ತವೆ.ಎಲ್ಲೋ-ಎಂದೋ ಭೇಟಿಯಾದವರು, ಯಾವುದೋ ಊರಿನಲ್ಲಿರುವವರು ಹೀಗೆ ಹತ್ತು ಹಲವು ಕಾರಣಗಳಿಂದ ದೂರವಾದವರನ್ನು ಹತ್ತಿರಕ್ಕೆ,ಸದಾ ಸಂಪರ್ಕದಲ್ಲಿರುವಂತೆ ಮಾಡುವ ಛಾತಿ ಸಾಮಾಜಿಕ ತಾಣಗಳಂತಹ ಅಂತರ್ಜಾಲ ಸಂಬಂಧಿ ವ್ಯವಸ್ಥೆಗಳಿಗಿವೆ.ವಯಸ್ಸಿನ ಅಂತರವಿಲ್ಲದೇ ಎಲ್ಲರನ್ನು ಆಕರ್ಷಿಸುವ ತಾಣಗಳು ಮನೆ-ಮನಗಳಲ್ಲಿ ಹಸುರಾಗಿವೆ.ಇವುಗಳ ಬಳಕೆ ಹೆಚ್ಚಾಗುತ್ತಲೇ ಇದೆ.ಒಂದು ಘಳಿಗೆಯೂ ಬಿಟ್ಟು ಇರಲಾರದಷ್ಟು ಪ್ರಭಾವ ಬೀರಿವೆ.ಭಾರತ ಫೇಸ್ ಬುಕ್ ಬಳಕೆಯಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ.        ಯುವ ಜನಾಂಗ ಈ ತಾಣಗಳ ಅತಿ ಹೆಚ್ಚು ಬಳಕೆ ಮಾಡುತ್ತಿರುವುದು ಗೊತ್ತಿರುವ ವಿಚಾರವೆ.ಗೆಳೆಯರ ಬಳಗ ಕಟ್ಟಿಕೊಳ್ಳುವ ಆಸಕ್ತಿ ಹೆಚ್ಚಿಸುತ್ತಿರುವ ಸಾಮಾಜಿಕ ತಾಣಗಳು ಓದಿನ ಮೇಲಿರಬೇಕಾದ ಗಮನ ಕುಂಠಿತಗೊಳಿಸುತ್ತಿದೆ ಎಂಬ ಅಭಿಪ್ರಾಯಗಳು ಕೇಳಿಬರು...

ಜಾತಿರಾಜಕಾರಣ ಯಾಕೆ ಬೇಕು..?

      ನ ಮ್ಮದು ಜ್ಯಾತ್ಯಾತೀತ ದೇಶ.ಹೀಗೆಂದು ಹೇಳಿಕೊಳ್ಳುವವರಿಗೆ ಲೆಕ್ಕವಿಲ್ಲ.ಆದರೂ,ಅನೇಕ ರೀತಿ-ರಿವಾಜು,ಜಾತಿ-ಧರ್ಮಗಳನ್ನು ಹೊಂದಿರುವ ದೇಶದಲ್ಲಿ ಸಾಮರಸ್ಯ ಕಾಣಬೇಕಾದರೆ ಜ್ಯಾತ್ಯಾತೀತತೆಯ ಕಡೆ ಒಲವು ಮೂಡಿಸುವ ಪ್ರಯತ್ನ ಮಾಡುವ ಅನಿವಾರ್ಯತೆ ಇದೆ.ಸರಳ ನಡೆ-ನುಡಿ,ತಾತ್ವಿಕ ವಿಚಾರಗಳ ಕುರಿತ ಚರ್ಚೆ,ಸಹೋದರತೆಯನ್ನು ಸಾರುವ ಗುಣಗಳನ್ನು ಬೆಳೆಸಿಕೊಳ್ಳುವ ರೂಢಿ ಮಾಡಿಕೊಳ್ಳಬೇಕಿದೆ.ಜನರ ನಡುವೆ ಒಮ್ಮತದ ನಿರ್ಧಾರ ಕೈಗೊಳ್ಳಲು ಪ್ರಯತ್ನಗಳು ಸಾಗಬೇಕಿವೆ.ದಿನೇ-ದಿನೇ ಹೆಚ್ಚುತ್ತಿರುವ ಜನಸಂಖ್ಯೆಯಲ್ಲಿ ಕೆಲವೊಂದು ಜಾತಿ-ಧರ್ಮಕ್ಕೆ ಸೇರಿದವರ ಸಂಖ್ಯೆ ಜಾಸ್ತಿಯಿರಬಹುದು.ಇದರಿಂದ ಸಾಮಾಜಿಕ ಬದಲಾವಣೆಗಳು ಸಾಧ್ಯ.ಹೀಗಾಗಿ ಸಮತೋಲನ ಕಾಯ್ದುಕೊಳ್ಳುವ ಜವಾಬ್ದಾರಿ ಮತ್ತೆ ಜನರದೇ ಆಗಿರುತ್ತದೆ.ಆದರೆ ಇದೆಲ್ಲಕ್ಕೂ ಸಂವಿಧಾನತ್ಮಕ ರೂಪು-ರೇಷೆಗಳಿರುತ್ತವೆ.ಮತದಾನದ ಮೂಲಕ ಆಯ್ಕೆಯಾಗಿರುವ ವ್ಯಕ್ತಿ ಊರಿನ ಪ್ರತಿನಿಧಿಯಾಗಿರುತ್ತಾನೆ.ರಾಜಕೀಯ ಪಕ್ಷಗಳು ಮೊದಲ ಹಂತದಲ್ಲಿ ಜನರನ್ನು ವಿಭಾಗಿಸಿಬಿಡುತ್ತದೆ.ಇಲ್ಲಿ ನಡೆಯುವ ಎಲ್ಲಾ ಲೆಕ್ಕಾಚಾರಗಳು ಜನರ ಹಿತದೃಷ್ಠಿಯಿಂದ ಎಂಬ ಮುಖವಾಡ ಹೊತ್ತಿರುತ್ತದೆಯಲ್ಲದೆ ಅಸಲಿ ಅಂಶ ಬೇರೆಯದೇ ಆಗಿರುತ್ತದೆ.          ರಾಜಕೀಯಕ್ಕೂ ಜಾತಿ-ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ.ಆದರೆ ಇಂದು ನಡೆಯುತ್ತಿರುವುದೆಲ್ಲ ಜಾತಿ ರಾಜಕಾರಣವೆ.ಇದರ ಬೇರು ವಿಶಾಲವಾಗಿ ಹರಡಿ ನಿಂತಿದೆ.ಮತದಾರರನ್ನು ವಿ...

-: ಮುತ್ತಿನ ಹನಿಗಳು :-

------೧------ ಚುಂ- ಬನಕ್ಕೆ ಲಗ್ಗೆಯಿಡುವ ಯುವ ಜೋಡಿಗಳು ಅದೆಂತಹ ಪ್ರಕೃತಿ ಆರಾಧಕರು..! ------೨------ ಹೂದೋಟದಲ್ಲಿ ಕಾಣದ ಪತಂಗಗಳು ಯಥೇಚ್ಛ ಮಧು ಸವಿಯಲು ಯುವತಿಯರ ಹಿಂದೆ ಬಿದ್ದಿವೆಯಂತೆ..!