ಮಾ ತಿನಲ್ಲೇ ಮೋಡಿ ಮಾಡುವುದು- ಒಂದು ಕಲೆ. ಇಲ್ಲಿ ಬೇಕು-ಬೇಡಗಳನ್ನು ಚನ್ನಾಗಿ ಅರಿತವರಂತೆ ಮನ ಮುಟ್ಟುವ ಹಾಗೆ ಮಾತನಾಡುವುದು ಮುಖ್ಯ. ವ್ಯವಹಾರ ಕುದುರಿಸಲು, ಪ್ರೇಮ ನಿವೇದನೆಯಲ್ಲಿ ಹೆಚ್ಚು ಬಳಕೆಯಾಗುತ್ತದೆಂದರೆ ಸಂಶಯವಿಲ್ಲ. ಈ ಮಾತುಗಳೆಲ್ಲಾ ತುಂಬಾ ನೇರಾ ನೇರ. ಆತ್ಮ ವಿಶ್ವಾಸ, ಸಹೃದಯತೆಯೇ ಇಲ್ಲಿ ಬುನಾದಿ. ಪರಸ್ಪರ ಭಾವ ಅಭಿವ್ಯಕ್ತಿಯಲ್ಲೇ ಎಲ್ಲವನ್ನೂ ತಾಳೆ ಹಾಕಬಹುದು. ಕಾಲ ಬದಲಾದಂತೆ ತಂತ್ರಜ್ಞಾನದ ಕೊಡುಗೆಯಾಗಿ ಬಂದಿರುವ ದೂರವಾಣಿ, ಮಿಂಚಂಚೆ ಮುಖತಃ ಭೇಟಿಯನ್ನೇ ರದ್ದು ಮಾಡಿವೆ. ಅದೇನೇ ಇರಲಿ, ಅಕ್ಕರೆಯ ಕರೆಗಳ ಜೊತೆ ನಮ್ಮ ಸಂವಹನ ಮುಂದುವರೆದರೆ ಭಾವನಾತ್ಮಕ ಬೆಸುಗೆಗೆ ಅಡ್ಡಿಯಿಲ್ಲ. ಎಲ್ಲೆಡೆಯಂತೆ ಇಲ್ಲೂ ತಂತ್ರಜ್ಞಾನದ ದುರುಪಯೋಗ ನಡೆಯುತ್ತಿದೆ. ಕೇವಲ ಸ್ವರದ ಮೂಲಕ ದೂರವಾಣಿ ಸಂಭಾಷಣೆಯಲ್ಲಿ ವ್ಯಕ್ತಿಯನ್ನು ಗುರುತಿಸುವ ನಮ್ಮ ‘ಮಾಪಕ’ ಮೋಸ ಹೋಗುವ ಸಾಧ್ಯತೆಗಳು ದಟ್ಟವಾಗಿವೆ. ಇದಕ್ಕೆ ಕಾರಣ ‘ಪ್ರಾಂಕ್ಸ್ಟರ್’ ಎಂದು ಕರೆಸಿಕೊಳ್ಳುವ ಪರಿಣತರು. ಹುಸಿ ಕರೆಗಳನ್ನು (Prank Call) ಮಾಡುವುದೇ ಇವರ ಕೆಲಸ. ಸುಳ್ಳನ್ನೇ ಬಂಡವಾಳವಾಗಿಸಿ ತಮ್ಮ ಗುರಿ ಸಾಧಿಸಿಕೊಂಡು, ನಗೆ ಹೋಗಿ ಹೊಗೆಯಾಡುವಂತೆ ಮಾಡುತ್ತಾರೆ. ನೀವು ಶಂಕರ್ ನಾಗ್ ಚಿತ್ರವೊಂದರಲ್ಲಿ ಗುಂಡೂ ರಾವ್, ತಮ್ಮ ಬೇಡಿಕೆಯ ಬೆಲೆಗೆ ಕುಂಬಳ ಕಾಯಿ ಸಿಗದೇ ಇದ್ದಾಗ, ‘ಕುಂಬಳ ಕಾಯಿಯಲ್ಲಿ ಬಾಂಬ್ ಉಂಟು’ ಎಂದು ...